ಹೊಸದಿಲ್ಲಿ: ಆಧಾರ್ ಕಾರ್ಡ್, ಪ್ಯಾನ್ ಕಾರ್ಡ್, ಶೈಕ್ಷಣಿಕ ದಾಖಲಾತಿಗಳು, ಡ್ರೈವಿಂಗ್ ಲೈಸೆನ್ಸ್ ಇತ್ಯಾದಿಗಳನ್ನು ಡಿಜಿಟಲ್ ರೂಪದಲ್ಲಿ ಸುರಕ್ಷಿತವಾಗಿ ಇಡಲು ಸಹಕರಿಸುವ ಡಿಜಿ ಲಾಕರ್ ಸೌಲಭ್ಯ ಇದೀಗ ವಾಟ್ಸ್ ಆಪ್‌ನಲ್ಲೂ ಲಭ್ಯವಿದೆ ಎಂದು ಸರಕಾರ ಸೋಮವಾರ ತಿಳಿಸಿದೆ.
ಜನತೆ MyGov ಹೆಲ್ಪ್ ಡೆಸ್ಕ್ ಅನ್ನು ವಾಟ್ಸ್ ಆಪ್‌ನಲ್ಲಿ ಸಂಪರ್ಕಿಸಿ ಡಿಜಿಲಾಕರ್ ಸೇವೆಯನ್ನು ಪಡೆಯಬಹುದು. ಡಿಜಿಟಲ್ ಲಾಕರ್‌ನಲ್ಲಿ ಇರುವ ದಾಖಲೆಗಳು ಅಧಿಕೃತ ಮಾನ್ಯತೆ ಪಡೆದ ದಾಖಲೆಗಳಾದ್ದರಿಂದ ಮಾನ್ಯತೆ ಇರುತ್ತದೆ. ಭೌತಿಕವಾಗಿ ಕಾಗದಪತ್ರಗಳ ರೂಪದಲ್ಲಿರುವ ದಾಖಲೆಗಳಂತೆ ಕಳೆದು ಹೋಗುವ ಆತಂಕ ಡಿಜಿಟಲ್ ಲಾಕರ್ ನಲ್ಲಿ ಇರುವುದಿಲ್ಲ.
ಯಾವ ದಾಖಲೆಗಳನ್ನು ಇಡಬಹುದು?
ಆಧಾರ್ ಕಾರ್ಡ್, ಪ್ಯಾನ್ ಕಾರ್ಡ್, ಡ್ರೈವಿಂಗ್ ಲೈಸೆನ್ಸ್, ಸಿಬಿಎಸ್‌ಇ 10ನೇ ತರಗತಿಯ ಅಂಕಪಟ್ಟಿ, ವಾಹನಗಳ ನೋಂದಣಿ ಸರ್ಟಿಫಿಕೇಟ್ (ಆರ್‌ಸಿ), ದ್ವಿಚಕ್ರವಾಹನಗಳ ವಿಮೆ, ಪಿಯುಸಿ ಅಂಕಪಟ್ಟಿ, ವಿಮೆ ದಾಖಲೆಗಳನ್ನು ಡಿಜಿಲಾಕರ್‌ನಲ್ಲಿ ಇಡಬಹುದು.
ವಾಟ್ಸ್ ಆಪ್‌ನಲ್ಲಿ ಡಿಜಿಲಾಕರ್ ಸೌಲಭ್ಯ ಹೇಗೆ?
ದೇಶಾದ್ಯಂತ ಈ 9013151515 ವಾಟ್ಸ್ ಆಪ್ ಸಂಖ್ಯೆಯನ್ನು ಬಳಸಬೇಕು. ಹಾಗೂ ಚಾಟ್ ಬೋಟ್‌ನಲ್ಲಿ “Namaste’ ಅಥವಾ “Hí” ಅಥವಾ “Digilocker’ ಎಂದು ಟೈಪ್ ಮಾಡಿದ ಸಂದೇಶ ನೀಡಬೇಕು. ಆಗ MyGov Helpdesk ಸಂಪರ್ಕಿಸುತ್ತದೆ. ಡಿಜಿ ಲಾಕರ್ ಸೇವೆಯನ್ನು ವಾಟ್ಸ್ ಆಪ್ ಮೂಲಕ ನೀಡುತ್ತದೆ.