Site icon Vistara News

Digital locking : ಸರಕು, ಪಾರ್ಸೆಲ್‌ ಸಾಗಣೆ ರೈಲುಗಳಲ್ಲಿ ಶೀಘ್ರ ಡಿಜಿಟಲ್‌ ಲಾಕಿಂಗ್

goods train

ನವ ದೆಹಲಿ: ಸರಕು, ಪಾರ್ಸೆಲ್‌ ಸಾಗಣೆ ರೈಲುಗಳಲ್ಲಿ ಶೀಘ್ರವೇ ಒಟಿಪಿ ಆಧರಿತ ಡಿಜಿಟಲ್‌ ಲಾಕಿಂಗ್‌ ವ್ಯವಸ್ಥೆ ಜಾರಿಗೆ ಬರಲಿದ್ದು, ಕಳ್ಳತನ ತಡೆಗೆ ಸಹಕಾರಿಯಾಗಲಿದೆ. (OTP -based digital locking system) ಈ ಡಿಜಿಟಲ್‌ ಸ್ಮಾರ್ಟ್‌ ಲಾಕ್‌ಗಳು (Digital locking) ಜಿಪಿಎಸ್‌ ತಂತ್ರಜ್ಞಾನವನ್ನು ಹೊಂದಿದ್ದು, ಕಳ್ಳತನವನ್ನು ತಡೆಯಲು ಉಪಯುಕ್ತವಾಗಿವೆ. ಇದು ಅತ್ಯಂತ ಸುರಕ್ಷಿತವಾಗಿದ್ದು, ಲಾಕ್‌ ತೆರೆಯಲು ಹಾಗೂ ಮುಚ್ಚಲು ಒಟಿಪಿ ಅಗತ್ಯವಾಗಿರುತ್ತದೆ.

ಈ ಡಿಜಿಟಲ್‌ ಲಾಕ್‌ ಹಾಕಲು ಮತ್ತು ತೆಗೆಯಲು ಒಟಿಪಿ ಅಗತ್ಯವಾಗಿರುವುದರಿಂದ ನಡುವೆ ಯಾವುದೇ ಇತರ ಮಧ್ಯಪ್ರವೇಶಕ್ಕೆ ಆಸ್ಪದ ಇರುವುದಿಲ್ಲ. ಪ್ರಸ್ತುತ ಸೀಲ್‌ ಹಾಕುವ ವ್ಯವಸ್ಥೆ ಇದ್ದು, ಪ್ರತಿ ನಿಲ್ದಾಣದಲ್ಲಿಯೂ ಸೀಲ್‌ ಭದ್ರವಾಗಿದೆಯೇ ಎಂದು ಪರಿಶೀಲಿಸಬೇಕಾಗುತ್ತದೆ. ಆದ್ದರಿಂದ ಡಿಜಿಟಲ್‌ ಲಾಕ್‌ ಅನುಕೂಲಕರ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಈ ಡಿಜಿಟಲ್‌ ಲಾಕ್‌ ವ್ಯವಸ್ಥೆಯಲ್ಲಿ ರೈಲಿನ ಚಲನೆಯನ್ನೂ ಟ್ರ್ಯಾಕ್‌ ಮಾಡಬಹುದು. ರೈಲು ಅವಘಡಕ್ಕೀಡಾದರೆ, ಬೋಗಿಯ ಬಾಗಿಲನ್ನು ತಿರುಚಿದರೆ ಅಧಿಕಾರಿಗಳಿಗೆ ಸಂದೇಶ ರವಾನೆಯಾಗುತ್ತದೆ.

Exit mobile version