ಬೆಂಗಳೂರು: ಸಾರ್ವಜನಿಕ ವಲಯದ ಬಿಇಎಲ್ ( ಭಾರತ್ ಎಲೆಕ್ಟ್ರಾನಿಕ್ಸ್) ಸಂಸ್ಥೆಯ ನೂತನ ಅಧ್ಯಕ್ಷ ಹಾಗೂ ವ್ಯವಸ್ಥಾಪಕ ನಿರ್ದೇಶಕರಾಗಿ (ಸಿಎಂಡಿ) ದಿನೇಶ್ ಕುಮಾರ್ ಬಾತ್ರಾ ನೇಮಕವಾಗಿದ್ದಾರೆ.
ಬಿಇಎಲ್‌ನ ಮುಖ್ಯ ಹಣಕಾಸು ಅಧಿಕಾರಿಯಾಗಿ (ಸಿಎಫ್‌ಒ) ದಿನೇಶ್ ಕುಮಾರ್ ಬಾತ್ರಾ ಅವರು ೨೦೨೧-೨೨ರಲ್ಲಿ ಕಂಪನಿಯ ಲಾಭ ೨,೩೪೯ ಕೋಟಿ ರೂ.ಗೆ ಏರಿಕೆಯಾಗುವಲ್ಲಿ ನಿರ್ಣಾಯಕ ಪಾತ್ರ ವಹಿಸಿದ್ದರು. ವಹಿವಾಟು ೧೫,೦೪೪ ಕೋಟಿ ರೂ.ಗೆ ವೃದ್ಧಿಸಿತ್ತು. ಕಂಪನಿಯು Li-on ಬ್ಯಾಟರಿ ಉತ್ಪಾದನೆಗೂ ಆರಂಭಿಸಿತ್ತು. ಅವರು ಸಿಎಫ್‌ಒ ಆಗಿದ್ದಾಗ ಬಿಇಎಲ್‌ನ ಮಾರುಕಟ್ಟೆ ಬಂಡವಾಳ ಮೌಲ್ಯ ಗಣನೀಯ ಏರಿಕೆಯಾಗಿತ್ತು.
ಬೆಂಗಳೂರಿನಲ್ಲಿ ೧೯೫೪ರಲ್ಲಿ ಬಿಇಎಲ್ ಸ್ಥಾಪನೆಯಾಗಿತ್ತು. ರಕ್ಷಣಾ ಇಲಾಖೆಯ ವ್ಯಾಪ್ತಿಯಲ್ಲಿರುವ ಬಿಇಎಲ್, ನವರತ್ನ ಸ್ಥಾನಮಾನ ಪಡೆದಿರುವ ಸಂಸ್ಥೆಯಾಗಿದೆ.