ನವ ದೆಹಲಿ: ಪ್ರಸಕ್ತ ಸಾಲಿನಲ್ಲಿ ಸೆಪ್ಟೆಂಬರ್ 17ರ ತನಕ ನೇರ ತೆರಿಗೆ ಸಂಗ್ರಹದಲ್ಲಿ 30% ಏರಿಕೆಯಾಗಿದೆ. ಅದು 8.36 ಲಕ್ಷ ಕೋಟಿ ರೂ.ಗೆ ವೃದ್ಧಿಸಿದೆ ಎಂದು ಹಣಕಾಸು ಸಚಿವಾಲಯವು ಭಾನುವಾರ ಬಿಡುಗಡೆಗೊಳಿಸಿದ ಅಂಕಿ ಅಂಶಗಳು ತಿಳಿಸಿವೆ.
2022-23ರ ಒಟ್ಟಾರೆ ನೇರ ತೆರಿಗೆ ಸಂಗ್ರಹವು 8,36,225 ಕೋಟಿ ರೂ.ಗೆ ಏರಿಕೆಯಾಗಿದೆ. ಕಳೆದ ಸಾಲಿನ ಇದೇ ಅವಧಿಯಲ್ಲಿ 6,42,287 ಕೋಟಿ ರೂ. ಸಂಗ್ರಹವಾಗಿತ್ತು. ಇದರೊಂದಿಗೆ 30% ಹೆಚ್ಚಳವಾದಂತಾಗಿದೆ.
ಕಳೆದ ಏಪ್ರಿಲ್-ಸೆಪ್ಟೆಂಬರ್‌ನಲ್ಲಿ ಒಟ್ಟಾರೆ ಮುಂಗಡ ತೆರಿಗೆ ಸಂಗ್ರಹ 2,95,308 ಕೋಟಿ ರೂ.ಗಳಾಗಿದ್ದು, 17% ಹೆಚ್ಚಳವಾಗಿದೆ.
ಒಟ್ಟಾರೆ 8.36 ಲಕ್ಷ ಕೋಟಿ ರೂ. ನೇರ ತೆರಿಗೆ ಸಂಗ್ರಹದಲ್ಲಿ, ಕಾರ್ಪೊರೇಟ್ ಆದಾಯ ತೆರಿಗೆ 4.36 ಲಕ್ಷ ಕೋಟಿ ರೂ.ಗಳಾಗಿದ್ದರೆ, ವೈಯಕ್ತಿಕ ಆದಾಯ ತೆರಿಗೆ 3.98 ಲಕ್ಷ ಕೋಟಿ ರೂ.ಗಳಾಗಿದೆ.