ನವ ದೆಹಲಿ: ನೇರ ತೆರಿಗೆ ಸಂಗ್ರಹ (Tax) ಕಳೆದ ಸೆಪ್ಟೆಂಬರ್ 8ರ ವೇಳೆಗೆ 35% ಏರಿಕೆಯಾಗಿದೆ. 6.48 ಲಕ್ಷ ಕೋಟಿ ರೂ.ಗೆ ಏರಿಕೆಯಾಗಿದೆ.
ರಿಫಂಡ್ ಕಳೆದ ಬಳಿಕ ನೇರ ತೆರಿಗೆ ಸಂಗ್ರಹ 5.29 ಲಕ್ಷ ಕೋಟಿ ರೂ.ಗಳಾಗಿದ್ದು, ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದರೆ 30% ಏರಿಕೆಯಾಗಿದೆ.
ಏಪ್ರಿಲ್ 1 ರಿಂದ ಸೆಪ್ಟೆಂಬರ್ 8 ತನಕ 1.19 ಲಕ್ಷ ಕೋಟಿ ರೂ. ರಿಫಂಡ್ ಮಾಡಲಾಗಿದೆ. ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದರೆ 65.29% ಹೆಚ್ಚಳವಾಗಿದೆ. ಕಾರ್ಪೊರೇಟ್ ಆದಾಯ ತೆರಿಗೆ ಸಂಗ್ರಹದಲ್ಲೂ 26% ಬೆಳವಣಿಗೆ ಆಗಿದೆ ಎಂದು ಅಂಕಿ ಅಂಶಗಳು ತಿಳಿಸಿವೆ.