Site icon Vistara News

Direct tax collection : ನೇರ ತೆರಿಗೆ ಸಂಗ್ರಹ 15.67 ಲಕ್ಷ ಕೋಟಿ ರೂ.ಗೆ ಏರಿಕೆ, 24% ಹೆಚ್ಚಳ

income tax office

ನವ ದೆಹಲಿ: ಭಾರತದ ನೇರ ತೆರಿಗೆ ಸಂಗ್ರಹ 2022ರ ಏಪ್ರಿಲ್‌ 1ರಿಂದ 2023 ಫೆಬ್ರವರಿ 10 ತನಕದ ಅವಧಿಯಲ್ಲಿ 15.67 ಲಕ್ಷ ಕೋಟಿ ರೂ.ಗೆ ಏರಿದ್ದು, 24.09% ಹೆಚ್ಚಳವಾಗಿದೆ ಎಂದು ಹಣಕಾಸು ಸಚಿವಾಲಯದ ಪ್ರಕಟಣೆ ತಿಳಿಸಿದೆ. ರಿಫಂಡ್‌ ವಿತರಣೆಯ ಬಳಿಕ ನಿವ್ವಳ ತೆರಿಗೆ ಸಂಗ್ರಹ 12.98 ಲಕ್ಷ ಕೋಟಿ ರೂ. ಆಗಿದೆ. ( Direct tax collection) ಅಂದರೆ 2022-23 ಸಾಲಿನ ತೆರಿಗೆ ಸಂಗ್ರಹ ಕುರಿತ ಬಜೆಟ್‌ ಗುರಿಯ 91.39% ಆಗಿದೆ. 2022-23 ಸಾಲಿನ ಪರಿಷ್ಕೃತ ನೇರ ತೆರಿಗೆ ಸಂಗ್ರಹದ ಗುರಿ 16.50 ಲಕ್ಷ ಕೋಟಿ ರೂ. ಆಗಿದೆ.

ಕಾರ್ಪೊರೇಟ್‌ ಆದಾಯ ತೆರಿಗೆ 19.33% ವೃದ್ಧಿಸಿದ್ದರೆ, ವೈಯಕ್ತಿಕ ಆದಾಯ ತೆರಿಗೆ 29.63% ಹೆಚ್ಚಳವಾಗಿದೆ. 2.69 ಲಕ್ಷ ಕೋಟಿ ರೂ. ರಿಫಂಡ್‌ ವಿತರಣೆಯಾಗಿದೆ. ಕಾರ್ಪೊರೇಟ್‌ ಮತ್ತು ವೈಯಕ್ತಿಕ ಆದಾಯ ತೆರಿಗೆಗಳ ಮೂಲಕ 2023-24ರಲ್ಲಿ 18.23 ಲಕ್ಷ ಕೋಟಿ ರೂ. ಸಂಗ್ರಹವಾಗುವ ನಿರೀಕ್ಷೆಯನ್ನು ಸರ್ಕಾರ ಹೊಂದಿದೆ.

Exit mobile version