Site icon Vistara News

Direct tax collection : ನೇರ ತೆರಿಗೆ ಸಂಗ್ರಹ 16.61 ಲಕ್ಷ ಕೋಟಿ ರೂ.ಗೆ ಏರಿಕೆ, ಬಜೆಟ್‌ ಪರಿಷ್ಕೃತ ಅಂದಾಜಿಗಿಂತಲೂ ಹೆಚ್ಚು

income tax office

ನವ ದೆಹಲಿ: ಸರ್ಕಾರದ ಬೊಕ್ಕಸಕ್ಕೆ 2022-23 ಸಾಲಿನಲ್ಲಿ 16.61 ಲಕ್ಷ ಕೋಟಿ ರೂ. ನಿವ್ವಳ ನೇರ ತೆರಿಗೆ ಸಂಗ್ರಹವಾಗಿದೆ ಎಂದು ಸೋಮವಾರ ಬಿಡುಗಡೆಯಾದ ಅಂಕಿ ಅಂಶಗಳು (Direct tax collection) ತಿಳಿಸಿವೆ. ಇದು ಬಜೆಟ್‌ನ ಪರಿಷ್ಕೃತ ಅಂದಾಜಿಗಿಂತ 11,000 ಕೋಟಿ ರೂ. ಹೆಚ್ಚು. ಆರ್ಥಿಕತೆಯ ಚೇತರಿಕೆಯನ್ನು ಇದು ಬಿಂಬಿಸಿದೆ. ಒಟ್ಟಾರೆ 17.6% ಹೆಚ್ಚಳ ದಾಖಲಿಸಿದೆ.

2022-23ರಲ್ಲಿ 14.20 ಲಕ್ಷ ಕೋಟಿ ರೂ. ನೇರ ತೆರಿಗೆ ಸಂಗ್ರಹ ಆಗಬಹುದು ಎಂದು ಅಂದಾಜಿಸಲಾಗಿತ್ತು. ಬಳಿಕ ಪರಿಷ್ಕೃತ ಅಂದಾಜಿನಲ್ಲಿ 16.50 ಲಕ್ಷ ಕೋಟಿ ರೂ.ಗೆ ಏರಿಸಲಾಗಿತ್ತು. ಆದರೆ 16.61 ಲಕ್ಷ ಕೋಟಿ ರೂ. ಸಂಗ್ರಹವಾಗಿದೆ.

ಏನಿದು ನೇರ ತೆರಿಗೆ? ವ್ಯಕ್ತಿ ಅಥವಾ ಸಂಘಟನೆ ನೇರವಾಗಿ ಪಾವತಿಸುವ ತೆರಿಗೆ ನೇರ ತೆರಿಗೆ. ಉದಾಹರಣೆಗೆ ಆದಾಯ ತೆರಿಗೆ, ರಿಯಲ್‌ ಪ್ರಾಪರ್ಟಿ ತೆರಿಗೆ, ಅಸೆಟ್‌ ಮೇಲಿನ ತೆರಿಗೆ.

ಸಂಗ್ರಹ2022-232021-22ಹೆಚ್ಚಳ
ನೇರ ತೆರಿಗೆ16.61 ಲಕ್ಷ ಕೋಟಿ ರೂ.14.12 ಲಕ್ಷ ಕೋಟಿ ರೂ.17.63%
ಒಟ್ಟಾರೆ ಆದಾಯ19.68 ಲಕ್ಷ ಕೋಟಿ ರೂ.16.36 ಲಕ್ಷ ಕೋಟಿ ರೂ.20.33%
ಕಾರ್ಪೊರೇಟ್‌ ತೆರಿಗೆ10 ಲಕ್ಷ ಕೋಟಿ ರೂ.8.59 ಲಕ್ಷ ಕೋಟಿ ರೂ.16.91%
ವೈಯಕ್ತಿಕ ಆದಾಯ ತೆರಿಗೆ9.6 ಲಕ್ಷ ಕೋಟಿ ರೂ.7.73 ಲಕ್ಷ ಕೋಟಿ ರೂ.24.23%

Exit mobile version