Site icon Vistara News

Disney layoffs : ಡಿಸ್ನಿಯಿಂದ 7000 ಉದ್ಯೋಗ ಕಡಿತ

disney

#image_title

ವಾಷಿಂಗ್ಟನ್:‌ ಅಮೆರಿಕದ ಮನರಂಜನಾ ವಲಯದ ದಿಗ್ಗಜ ಕಂಪನಿಯಾದ ವಾಲ್ಟ್‌ ಡಿಸ್ನಿ ಕಂಪನಿ ಬುಧವಾರ 7000 ಉದ್ಯೋಗಗಳನ್ನು ಕಡಿತಗೊಳಿಸಿದೆ. (Disney layoffs) ಕಂಪನಿಯ ವೆಚ್ಚ ಇಳಿಕೆ, ಪುನಾರಚನೆಯ ಭಾಗವಾಗಿ ಉದ್ಯೋಗ ಕಡಿತ ಮಾಡಲಾಗುತ್ತಿದೆ ಎಂದು ಸಿಇಒ ಬಾಬ್‌ ಐಗರ್‌ ತಿಳಿಸಿದ್ದಾರೆ. ಡಿಸ್ನಿಯ ಒಟ್ಟು ಉದ್ಯೋಗ ಬಲದಲ್ಲಿ 3.6% ಮಂದಿಯನ್ನು ವಜಾಗೊಳಿಸಲಾಗಿದೆ. ಷೇರು ಮಾರುಕಟ್ಟೆಯಲ್ಲಿ ಡಿಸ್ನಿ ಷೇರು ದರ 4.7% ಏರಿಕೆಯಾಗಿದೆ.

ಷೇರುದಾರರಿಗೆ ಡಿವಿಡೆಂಡ್‌ ಘೋಷಣೆ ಮಾಡುವುದಾಗಿಯೂ ಕಂಪನಿ ತಿಳಿಸಿದೆ. ವ್ಯಾಪಾರ ಮತ್ತು ಆಡಳಿತಾತ್ಮಕ ವೆಚ್ಚದಲ್ಲಿ 2.5 ಶತಕೋಟಿ ಡಾಲರ್‌ ಕಡಿತ ಮಾಡುವುದಾಗಿ ಡಿಸ್ನಿ ತಿಳಿಸಿದೆ. ಜನವರಿಯಲ್ಲಿ 5 ಪ್ರಮುಖ ಟೆಕ್‌ ಕಂಪನಿಗಳು 50,000 ಮಂದಿಯನ್ನು ವಜಾಗೊಳಿಸಿವೆ.

Exit mobile version