ನವ ದೆಹಲಿ: ತಂತ್ರಜ್ಞಾನ ದಿಗ್ಗಜ ಗೂಗಲ್‌ನ ಸೇವೆಯಲ್ಲಿ ಗುರುವಾರ ಬೆಳಗ್ಗೆ ವ್ಯತ್ಯಯ ಉಂಟಾಗಿದೆ. ಇದರ ಪರಿಣಾಮ ಯೂಟ್ಯೂಬ್, ಡ್ರೈವ್, ಜಿಮೇಲ್ ಮತ್ತು ಸರ್ಚ್ ಎಂಜಿನ್‌ನಲ್ಲಿ (Google service down) ಬಳಕೆದಾರರಿಗೆ ಅಡಚಣೆ ಎದುರಾಯಿತು. ಟೆಕ್ ಅಡಚಣೆಗಳ ಬಗ್ಗೆ ದಾಖಲಾತಿ ಮಾಡಿಕೊಳ್ಳುವ ಡೌನ್‌ಡಿಟೆಕ್ಟರ್ ಆನ್‌ಲೈನ್ ಟೂಲ್ ಪ್ರಕಾರ ಭಾರತದಲ್ಲಿ 1,500 ಬಳಕೆದಾರರು ತಮಗೆ ಸಮಸ್ಯೆ ಆಗಿರುವುದರ ಬಗ್ಗೆ ದೂರಿದ್ದಾರೆ.
ಟ್ವಿಟರ್‌ನಲ್ಲಿ ಅನೇಕ ಮಂದಿ ತಮ್ಮ ಅಸಮಾಧಾನವನ್ನು ತೋಡಿಕೊಂಡಿದ್ದಾರೆ.
ಯೂಟ್ಯೂಬ್, ಡ್ರೈವ್, ಜಿಮೇಲ್, ಮೀಟ್, ಹ್ಯಾಂಗೌಟ್ಸ್, ಶೀಟ್ಸ್ ಕೂಡ ತಾಂತ್ರಿಕ ಅಡಚಣೆಯಿಂದ ಗ್ರಾಹಕರಿಗೆ ಸಮರ್ಪಕವಾಗಿ ಲಭಿಸಲಿಲ್ಲ. ಅನೇಕ ಮಂದಿ ಸ್ಕ್ರೀನ್ ಶಾಟ್‌ಗಳನ್ನು ಜಾಲತಾಣಗಳಲ್ಲಿ ಪೋಸ್ಟ್ ಮಾಡಿದರು.