Site icon Vistara News

BEML | ಬೆಂಗಳೂರಿನ ಬೆಮೆಲ್‌ನಿಂದ ಬಂಡವಾಳ ಹಿಂತೆಗೆತ ಶೀಘ್ರ ಸಂಭವ

beml

ನವ ದೆಹಲಿ: ರಕ್ಷಣಾ ವಲಯದ ಸಾರ್ವಜನಿಕ ಕಂಪನಿ, ಬೆಂಗಳೂರು ಮೂಲದ ಬೆಮೆಲ್‌ನಿಂದ (BEML) ಬಂಡವಾಳ ಹಿಂತೆಗೆತದ ಬಗ್ಗೆ ಕೇಂದ್ರ ಸರ್ಕಾರ, ಶೀಘ್ರ ನಿರ್ಧರಿಸುವ ನಿರೀಕ್ಷೆ ಇದೆ. ಸಂಭವನೀಯ ಬಿಡ್‌ದಾರರ ಪಟ್ಟಿಯನ್ನು ಅಂತಿಮಪಡಿಸಲು ಇಒಐ ( Invite expressions of interest) ಪ್ರಕ್ರಿಯೆಯನ್ನು ಶೀಘ್ರ ಪೂರ್ಣಗೊಳಿಸುವ ಸಾಧ್ಯತೆ ಇದೆ.

ಸರ್ಕಾರ ಶಿಪ್ಪಿಂಗ್‌ ಕಾರ್ಪೊರೇಷನ್‌ ಆಫ್‌ ಇಂಡಿಯಾದಿಂದ ( SCI) ಕೂಡ ಬಂಡವಾಳ ಹಿಂತೆಗೆತಕ್ಕೆ ಸಜ್ಜಾಗಿದೆ. ಬೆಮೆಲ್‌ ಮತ್ತು ಶಿಪ್ಪಿಂಗ್‌ ಕಾರ್ಪೊರೇಷನ್‌ನ ಭೂಮಿ ಮತ್ತು ಇತರ ಆಸ್ತಿಗಳ ವರ್ಗೀಕರಣ ಪ್ರಕ್ರಿಯೆಯನ್ನು ನಿರೀಕ್ಷಿಸಲಾಗಿದೆ. ಇದು ಅಕ್ಟೋಬರ್‌ ವೇಳೆಗೆ ಮುಕ್ತಾಯವಾಗುವ ಸಾಧ್ಯತೆ ಇದೆ.

ಸರ್ಕಾರ ಐಡಿಬಿಐ ಬ್ಯಾಂಕ್‌ನಿಂದಲೂ ಬಂಡವಾಳ ಹಿಂತೆಗೆತಕ್ಕೆ ನಿರ್ಧರಿಸಿದೆ. ಪ್ರಸಕ್ತ ಸಾಲಿನಲ್ಲಿ ಬಂಡವಾಳ ಹಿಂತೆಗೆತದ ಮೂಲಕ ಸರ್ಕಾರ ೨೪,೫೪೪ ಕೋಟಿ ರೂ.ಗಳನ್ನು ಸಂಗ್ರಹಿಸಿದೆ. ಪ್ರಸಕ್ತ ಸಾಲಿಗೆ ೬೫,೦೦೦ ಕೋಟಿ ರೂ.ಗಳ ಬಂಡವಾಳ ಹಿಂತೆಗೆತದ ಗುರಿಯನ್ನು ಸರ್ಕಾರ ಹೊಂದಿದೆ.

Exit mobile version