ನವ ದೆಹಲಿ: ಭಾರತೀಯ ಜೀವ ವಿಮಾ ನಿಗಮ (LIC) ತನ್ನ ಷೇರುದಾರರಿಗೆ ಡಿವಿಡೆಂಡ್ ಹಾಗೂ ಬೋನಸ್ ಷೇರುಗಳನ್ನು ಬಿಡುಗಡೆಗೊಳಿಸಲು ಸಿದ್ಧತೆ ನಡೆಸಿದೆ ಎಂದು ವರದಿಯಾಗಿದೆ.
ಎಲ್‌ಐಸಿಯು ತನ್ನ ಪಾಲಿಸಿದಾರರ ನಿಧಿಯಿಂದ 22 ಶತಕೋಟಿ ಡಾಲರ್ ಮೊತ್ತವನ್ನು ( 1.80 ಲಕ್ಷ ಕೋಟಿ ರೂ.) ವರ್ಗಾಯಿಸಲು ಉದ್ದೇಶಿಸಿದೆ. ಈ ಹಣವನ್ನು ಷೇರುದಾರರಿಗೆ ಡಿವಿಡೆಂಡ್ ಹಾಗೂ ಬೋನಸ್ ಷೇರುಗಳನ್ನು ಬಿಡುಗಡೆಗೊಳಿಸಲು ಬಳಸಲಿದೆ ಎಂದು ವರದಿಯಾಗಿದೆ.
ಎಲ್‌ಐಸಿ ತನ್ನ ನಿವ್ವಳ ಸಂಪತ್ತು ವೃದ್ಧಿಸಲು ಹಾಗೂ ಹೂಡಿಕೆದಾರರಲ್ಲಿ ವಿಶ್ವಾಸ ವೃದ್ಧಿಸಲು ಮಂದಾಗಿದೆ. ಕಳೆದ ಮೇನಲ್ಲಿ ಷೇರು ಪೇಟೆಯಲ್ಲಿ ನೋಂದಣಿಯಾಗಿರುವ ಎಲ್‌ಐಸಿ ಷೇರಿನ ಮೌಲ್ಯದಲ್ಲಿ 35% ಇಳಿಕೆಯಾಗಿದೆ. ಇದರ ಪರಿಣಾಮ ಷೇರುದಾರರ ಸಂಪತ್ತಿನಲ್ಲಿ 2.23 ಲಕ್ಷ ಕೋಟಿ ರೂ. ಕರಗಿದೆ. ಎಲ್‌ಐಸಿ ಇದೀಗ ಷೇರಿನ ಮೌಲ್ಯವನ್ನು ಹೆಚ್ಚಿಸಲು ಉದ್ದೇಶಿಸಿದ್ದು, ಈ ನಿಟ್ಟಿನಲ್ಲಿ ಡಿವಿಡೆಂಡ್, ಬೋನಸ್ ಷೇರು ಬಿಡುಗಡೆಗೆ ಉದ್ದೇಶಿಸಿದೆ ಎಂದು ಮೂಲಗಳು ತಿಳಿಸಿವೆ.