ಸಾಮಾನ್ಯ ಹೂಡಿಕೆದಾರರಿಗೆ ಈಕ್ವಿಟಿ ಮಾರುಕಟ್ಟೆಯ್ಲಲಿ ಹೂಡಿಕೆ ಮಾಡಿ ಲಾಭ ಗಳಿಸಲು ಮ್ಯೂಚುವಲ್ ಫಂಡ್‌ಗಳು ಉತ್ತಮ ಎಂದು ಸಾಬೀತಾಗಿದೆ. ದೀರ್ಘಕಾಲೀನವಾಗಿ ಉತ್ತಮ ಗಳಿಕೆಗೆ ಸಹಕಾರಿ ಎಂದು ತಜ್ಞರು ಹೇಳುತ್ತಾರೆ. ಆದರೆ ಮ್ಯೂಚುವಲ್ ಫಂಡ್‌ಗಳಲ್ಲಿ ಹೂಡುವವರಲ್ಲಿ ಕೆಲವರಿಗೆ, ನೇರವಾಗಿ ಷೇರುಗಳಲ್ಲಿ ಹೂಡಿಕೆ ಮಾಡಿ ಲಾಭ ಗಳಿಸಬಹುದಲ್ಲವೇ ಎಂಬ ಆಲೋಚನೆ ಬರಬಹುದು. ಈ ಬಗ್ಗೆ ನೋಡೋಣ.
ದೀರ್ಘಕಾಲೀನವಾಗಿ ಇತರ ಹಲವು ಅಸೆಟ್‌ಗಳಿಗಿಂತ ಈಕ್ವಿಟಿ ಹೆಚ್ಚಿನ ರಿಟರ್ನ್ ಅನ್ನು ಹೂಡಿಕೆದಾರರಿಗೆ ನೀಡಿದೆ. ಹೀಗಿದ್ದರೂ ಹೆಚ್ಚು ರಿಸ್ಕ್ ತೆಗೆದುಕೊಳ್ಳಲು ಆಸಕ್ತರಿರುವ ಹೂಡಿಕೆದಾರರಿಗೆ ಕಂಫರ್ಟ್ ಅನ್ನಿಸುವುದಿಲ್ಲ. ಆದರೆ ಹೂಡಿಕೆದಾರರು ಮ್ಯೂಚುವಲ್ ಫಂಡ್ ಮೂಲಕ ಈಕ್ವಿಟಿಗಳಲ್ಲಿ ಹೂಡಿಕೆ ಮಾಡಿ, ಬಳಿಕ ಷೇರು ಮಾರುಕಟ್ಟೆಯಲ್ಲಿ ನೇರವಾಗಿ ಹೂಡಿಕೆ ಮಾಡಲು ಬಯಸುತ್ತಾರೆ. ಆದರೆ ಹೆಚ್ಚಿನ ಆದಾಯ ಗಳಿಸಬಹುದು ಎಂಬ ಆಕಾಂಕ್ಷೆಯಿಂದ ಷೇರುಗಳಲ್ಲಿ ನೇರವಾಗಿ ಹೂಡಿಕೆ ಮಾಡಿದವರಿಗೆ ಬಯಸಿದ ರಿಸಲ್ಟ್ ಸಿಗದೆ ಹೋಗಬಹುದು. ಷೇರು ಮಾರುಕಟ್ಟೆಯ ಬಗ್ಗೆ ಸರಿಯಾದ ಅಧ್ಯಯನ ನಡೆಸದಿದ್ದರೆ ಇಂಥ ಸಮಸ್ಯೆಯಾಗುತ್ತದೆ.
ಹಾಗಾದರೆ ಇಂಥ ಮ್ಯೂಚುವಲ್ ಫಂಡ್ ಹೂಡಿಕೆದಾರರು ಈಕ್ವಿಟಿಗಳಲ್ಲಿ ಹೂಡಿಕೆ ಆರಂಭಿಸಲು ಸರಿಯಾದ ಸಮಯ ಯಾವುದು? ಯಾವೆಲ್ಲ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬೇಕು? ಈಕ್ವಿಟಿಗಳಲ್ಲಿ ನೇರವಾಗಿ ಹೂಡಿಕೆ ಮಾಡಲು ತೊಡಗುವುದಕ್ಕಿಂತ ಮುನ್ನ ಸಾಕಷ್ಟು ಅಧ್ಯಯನ ಅಗತ್ಯ. ಆರಂಭದಲ್ಲಿ ಮ್ಯೂಚುವಲ್ ಫಂಡ್‌ಗಳಲ್ಲಿ ಹೂಡಿಕೆ ಮಾಡಿ, ಬಳಿಕ ನೇರವಾಗಿ ಷೇರುಗಳಲ್ಲಿ ಹೂಡಿಕೆ ಮಾಡುವುದು ಸೂಕ್ತ ಎನ್ನುತ್ತಾರೆ ಮೈ ವೆಲ್ತ್ ಗ್ರೋತ್ ಡಾಟ್ ಕಾಮ್‌ನ ಸ್ಥಾಪಕ ಹರ್ಷದ್ ಚೇತನ್‌ವಾಲಾ.
ಬಹುತೇಕ ಹಣಕಾಸು ತಜ್ಞರ ಪ್ರಕಾರ ಮ್ಯೂಚುವಲ್ ಫಂಡ್‌ಗಳಲ್ಲಿ ಕನಿಷ್ಠ ಒಂದು ವರ್ಷ ಹೂಡಿಕೆ ಮಾಡಿ, ಬಳಿಕ ಷೇರುಗಳಲ್ಲಿ ನೇರವಾಗಿ ಹೂಡಿಕೆ ಮಾಡುವುದು ಸೂಕ್ತ. ಹೂಡಿಕೆಯ ಬೇಸಿಕ್ಸ್ ಅನ್ನು ಅರ್ಥ ಮಾಡಿಕೊಳ್ಳಲು ಮ್ಯೂಚುವಲ್ ಸಿಪ್ ಹೂಡಿಕೆ ಪರಿಣಾಮಕಾರಿಯಾಗುತ್ತದೆ. ಸುಮಾರು ಮೂರು ವರ್ಷ ಹೂಡಿಕೆ ಮಾಡಿದ ಬಳಿಕ ಷೇರು ವ್ಯವಹಾರ ನಡೆಸಿದರೂ ಓಕೆ ಎನ್ನುತ್ತಾರೆ ಹಣಕಾಸು ಸಲಹೆಗಾರರು.
ಕಡಿಮೆ ಮಾಹಿತಿ ಅಥವಾ ಅರ್ಧಂಬರ್ಧ ತಿಳುವಳಿಕೆಯೊಂದಿಗೆ ನೇರವಾಗಿ ಷೇರುಗಳಲ್ಲಿ ಹೂಡಿಕೆ ಮಾಡುವುದರಿಂದ ನಷ್ಟ ಸಂಭವಿಸುವ ಸಾಧ್ಯತೆಯೇ ಹೆಚ್ಚು ಎಂದು ಮೈವೆಲ್ತ್ ಗ್ರೋತ್ ಡಾಟ್ ಕಾಮ್‌ನ ಸ್ಥಾಪಕ ಹರ್ಷದ್ ಚಿಂತನ್‌ವಾಲಾ.
ಹಮ್ ಫೌಜಿ ಇನೀಶಿಯೇಟಿವ್ಸ್ ಸಂಸ್ಥೆಯ ಸಿಇಒ ಸಂಜೀವ್ ಗೋವಿಲಾ ಪ್ರಕಾರ 2-4 ವರ್ಷ ಮ್ಯೂಚುವಲ್ ಫಂಡ್ ಹೂಡಿಕೆಯ ಬಳಿಕ ಈಕ್ವಿಟಿಗಳಲ್ಲಿ ನೇರವಾಗಿ ಹೂಡಿಕೆ ಮಾಡುವುದು ಸೂಕ್ತ. ಮ್ಯೂಚುವಲ್ ಫಂಡ್‌ಗಳಲ್ಲೂ ವೈವಿಧ್ಯಮಯ ಹೂಡಿಕೆ ಅಗತ್ಯ. ನಿಧಾನವಾಗಿ ಷೇರು ಹೂಡಿಕೆಯನ್ನು ಹೆಚ್ಚಿಸುತ್ತಾ ಹೋಗಿ. ಸ್ಥಿರವಾದ ಷೇರುಗಳಲ್ಲಿ ಹೂಡಿಕೆ ಆರಂಭಿಸುವುದು ಸೂಕ್ತ. ಫಂಡಮೆಂಟಲಿ ಪ್ರಬಲವಾಗಿ ಇರುವ ಕಂಪನಿಗಳ ಷೇರುಗಳಲ್ಲಿ ಆರಂಭದಲ್ಲಿ ಹೂಡಿಕೆ ಮಾಡುವುದು ಉತ್ತಮ ಎನ್ನುತ್ತಾರೆ ತಜ್ಞರು.