ನವ ದೆಹಲಿ: ಸಾರ್ವಜನಿಕ ವಲಯದ ತೈಲ ಕಂಪನಿಗಳು ಅಡುಗೆ ಅನಿಲ ದರದಲ್ಲಿ ಮತ್ತೆ ಏರಿಕೆ ಮಾಡಿದ್ದು, ಬಳಕೆದಾರರಿಗೆ ದುಬಾರಿ ಹೊರೆ ಬೀಳುವಂತಾಗಿದೆ.
೧೪.೨ ಕೆಜಿ ಎಲ್ಪಿಜಿ ಸಿಲಿಂಡರ್ ದರದಲ್ಲಿ ಜುಲೈ ೬ರಿಂದ ಅನ್ವಯವಾಗುವಂತೆ ೫೦ ರೂ. ಹೆಚ್ಚಳವಾಗಿದೆ. ಬೆಂಗಳೂರಿನಲ್ಲಿ ದರ ೧,೦೫೫ ರೂ.ಗೆ ವೃದ್ಧಿಸಿದೆ.
ಪ್ರಮುಖ ನಗರಗಳಲ್ಲಿ ೧೪.೨ ಕೆಜಿ ಎಲ್ಪಿಜಿ ದರ ಇಂತಿದೆ. ಬೆಂಗಳೂರು- ೧,೦೫೫ ರೂ. ದಿಲ್ಲಿ-೧೦೫೩ ರೂ, ಕೋಲ್ಕೊತಾ-೧೦೭೯ ರೂ, ಮುಂಬಯಿ-೧೦೫೨ ರೂ, ಚೆನ್ನೈ-೧೦೬೮ ರೂ.
5 ಕೆಜಿ ಸಿಲಿಂಡರ್ ದರದಲ್ಲಿ ೧೮ ರೂ. ಏರಿಸಲಾಗಿದೆ. ೧೯ ಕೆ.ಜಿ ವಾಣಿಜ್ಯೋದ್ದೇಶದ ಎಲ್ಪಿಜಿ ಸಿಲಿಂಡರ್ ದರದಲ್ಲಿ ೮.೫೦ ರೂ. ಇಳಿಕೆಯಾಗಿದೆ.