ನವ ದೆಹಲಿ: ಎಫ್‌ಎಂಸಿಜಿ ವಲಯದ ದಿಗ್ಗಜ ಯುನಿಲಿವರ್ (Unilever) ತನ್ನ ಡವ್ ಬ್ರಾಂಡ್‌ನ ಡ್ರೈ ಶ್ಯಾಂಪೂ ಉತ್ಪನ್ನಗಳನ್ನು ಅಮೆರಿಕ ಮತ್ತು ಕೆನಡಾದ ಮಾರುಕಟ್ಟೆಯಲ್ಲಿ ಹಿಂತೆಗೆದುಕೊಂಡಿದೆ. ಆದರೆ ಇದರಿಂದಾಗಿ ಭಾರತೀಯ ಮಾರುಕಟ್ಟೆಯ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ ಎಂದು ಯುನಿಲಿವರ್‌ನ ಭಾರತೀಯ ಘಟಕ ಹಿಂದುಸ್ಥಾನ್ ಯುನಿಲಿವರ್ (ಎಚ್‌ಯುಎಲ್) ತಿಳಿಸಿದೆ.
ಯುನಿಲಿವರ್ ಅಮೆರಿಕ ಮತ್ತು ಕೆನಡಾದಲ್ಲಿ ಹಿಂತೆಗೆದುಕೊಂಡಿರುವ ಡವ್ ಉತ್ಪನ್ನಗಳು ಭಾರತದಲ್ಲಿ ಉತ್ಪಾದನೆ ಅಥವಾ ಮಾರಾಟ ಆಗುತ್ತಿಲ್ಲ. ಹೀಗಾಗಿ ಯಾವುದೇ ಸಮಸ್ಯೆ ಇಲ್ಲಿ ಉಂಟಾಗುವುದಿಲ್ಲ ಎಂದು ಹಿಂದುಸ್ಥಾನ್ ಯುನಿಲಿವರ್ ತಿಳಿಸಿದೆ.
ಎಚ್‌ಯುಎಲ್ ಯಾವುದೇ ಡ್ರೈ ಶ್ಯಾಂಪೂಗಳನ್ನು ಭಾರತದಲ್ಲಿ ಮಾರಾಟ ಮಾಡುತ್ತಿಲ್ಲ. ಅಮೆರಿಕ ಮತ್ತು ಕೆನಡಾದಲ್ಲಿ ಸ್ವಯಂಪ್ರೇರಿತವಾಗಿ 2021ರ ಅಕ್ಟೋಬರ್‌ಗೆ ಮೊದಲು ಉತ್ಪಾದಿಸಿರುವ ಡ್ರೈ ಶ್ಯಾಂಪೂಗಳನ್ನು ಹಿಂತೆಗೆದುಕೊಳ್ಳಲಾಗಿದೆ ಎಂದು ಕಂಪನಿ ತಿಳಿಸಿದೆ. ಆದರೆ ಕಂಪನಿಯು ಕ್ಯಾನ್ಸರ್‌ಕಾರಕ ಅಂಶಗಳು ಇರುವ ಹಿನ್ನೆಲೆಯಲ್ಲಿ ತನ್ನ ಉತ್ಪನ್ನಗಳನ್ನು ಹಿಂತೆಗೆದುಕೊಂಡಿದೆ ಎಂದು ವರದಿಯಾಗಿತ್ತು.