Site icon Vistara News

Economic offendres : ಮನೀಶ್‌ ಸಿಸೋಡಿಯಾ, ಮಲ್ಯ ಮತ್ತಿತರರಿಗೆ ಸಿಗಲಿದೆ ವಿಶಿಷ್ಟ ಕೋಡ್‌, ಏಕೆ-ಹೇಗೆ?

Economic offenders Manish Sisodia Mallya and others will get unique code why-how

#image_title

ನವ ದೆಹಲಿ: ಕೇಂದ್ರ ಸರ್ಕಾರ ಆರ್ಥಿಕ ಅಪರಾಧಿಗಳನ್ನು (Economic offendres) ಮಟ್ಟ ಹಾಕಲು ವಿಶಿಷ್ಟ ಕೋಡ್‌ ಅನ್ನು (unique code) ಪರಿಚಯಿಸಲು ಯೋಜಿಸಿದೆ. ಇದರಲ್ಲಿ ಆರ್ಥಿಕ ಅಪರಾಧಗಳಲ್ಲಿ ಷಾಮೀಲಾದ ಕಂಪನಿಗಳು ಮತ್ತು ವ್ಯಕ್ತಿಗಳಿಗೆ ವಿಶಿಷ್ಟ ಕೋಡ್‌ ನೀಡಲಾಗುವುದು. ಈ ಕೋಡ್‌ ಅನ್ನು ಅವರ ಪ್ಯಾನ್‌ ಮತ್ತು ಆಧಾರ್‌ಗೆ ಲಿಂಕ್‌ ಮಾಡಲಾಗುವುದು ಎಂದು ವರದಿಯಾಗಿದೆ.

ಈ ಕೋಡ್‌ ಅಲ್ಫಾ-ನ್ಯೂಮರಿಕ್‌ ಹಾಗೂ ಸಿಸಟ್ಮ್‌ ಜನರೇಟೆಡ್‌ ಆಗಿರಲಿದೆ. ಪೊಲೀಸ್‌ ಇಲಾಖೆ ಅಥವಾ ಕೇಂದ್ರೀಯ ತನಿಖಾ ಸಂಸ್ಥೆಗಳು ನ್ಯಾಶನಲ್‌ ಎಕನಾಮಿಕ್‌ ಅಫೆನ್ಸ್‌ ರೆಕಾರ್ಡ್ಸ್‌ಗೆ (national economic offence records) ಅಂಕಿ ಅಂಶಗಳನ್ನು ನೀಡಿದ ಬಳಿಕ ಅಂಥ ಆರೋಪಿಗೆ ಈ ವಿಶಿಷ್ಟ ಕೋಡ್‌ ಸಿಗಲಿದೆ.

ಇದನ್ನೂ ಓದಿ: Vijay Mallya : ಪಲಾಯನಗೈದ ಆರ್ಥಿಕ ಅಪರಾಧಿ ಪಟ್ಟವನ್ನು ತೆಗೆಯುವಂತೆ ಮಲ್ಯ ಸಲ್ಲಿಸಿದ್ದ ಅರ್ಜಿ ವಜಾಗೊಳಿಸಿದ ಸುಪ್ರೀಮ್​ ಕೋರ್ಟ್​

ಪ್ರಸ್ತುತ ಆರೋಪಿಗಳ ವಿರುದ್ಧ ತನಿಖೆಗೆ ತನಿಖಾ ಸಂಸ್ಥೆಗಳು ಚಾರ್ಜ್‌ ಶೀಟ್‌ ದಾಖಲಾಗುವ ತನಕ ಕಾಯಬೇಕಾಗುತ್ತದೆ. ವಿಶಿಷ್ಟ ಕೋಡ್‌ ಮೂಲಕ ತನಿಖೆಯನ್ನು ಚುರುಕುಗೊಳಿಸಲು ಸಹಕಾರಿಯಾಗಲಿದೆ ಎಂದು ವರದಿಯಾಗಿದೆ.

ಇದರಿಂದ ಹಲವಾರು ತನಿಖಾ ಸಂಸ್ಥೆಗಳಿಗೆ ಆರೋಪಿತ ಕಂಪನಿ ಅಥವಾ ವ್ಯಕ್ತಿ ವಿರುದ್ಧ ತನಿಖೆಗೆ ಸಹಕಾರಿಯಾಗಲಿದೆ. ಪ್ರಮುಖ ನಗರಗಳ ಪೈಕಿ ಮುಂಬಯಿನಲ್ಲಿ ಆರ್ಥಿಕ ಅಪರಾಧಗಳು 19% ಏರಿಕೆಯಾಗಿದೆ. ದಿಲ್ಲಿಯ ಮಾಜಿ ಡಿಸಿಎಂ ಮನೀಶ್‌ ಸಿಸೋಡಿಯಾ, ಮದ್ಯದ ಉದ್ಯಮಿ ವಿಜಯ್‌ ಮಲ್ಯ, ಮಾಜಿ ಕೇಂದ್ರ ವಿತ್ತ ಸಚಿವ ಪಿ.ಚಿದಂಬರಂ ಮೊದಲಾದವರಿಗೆ ಈ ವಿಶಿಷ್ಟ ಕೋಡ್‌ ಸಿಗಲಿದೆ. ಮುಂದಿನ 4-5 ತಿಂಗಳಲ್ಲಿ ಈ ವ್ಯವಸ್ಥೆ ಜಾರಿಯಾಗಲಿದೆ. ಈ ವರ್ಷ ನಡೆಯಲಿರುವ ಪ್ಯಾರಿಸ್‌ ಮೂಲದ ಫೈನಾನ್ಷಿಯಲ್‌ ಆಕ್ಷನ್‌ ಟಾಸ್ಕ್‌ ಫೋರ್ಸ್‌ ಜತೆಗಿನ ಸಭೆಯಲ್ಲಿ ಈ ಪ್ರಾಜೆಕ್ಟ್‌ ಬಗ್ಗೆ ಭಾರತ ವಿವರಿಸಲಿದೆ.

Exit mobile version