Site icon Vistara News

Economic review : ಭಾರತದ ಆರ್ಥಿಕತೆಗೆ ಎಲ್‌ ನಿನೋ ಎಫೆಕ್ಟ್?‌ ಹಣಕಾಸು ಸಚಿವಾಲಯ ವರದಿಯಲ್ಲೇನಿದೆ

Economic review The challenge of El Niño not coming to India's economy: What did the finance ministry report say?

ನವ ದೆಹಲಿ: ಭಾರತದ ಆರ್ಥಿಕತೆ ಸಮಗ್ರವಾಗಿ ಸ್ಥಿರತೆಯ ಹಾದಿಯಲ್ಲಿ ಇರುವುದರಿಂದ ಬೆಳವಣಿಗೆಗೆ ಸಹಕಾರಿಯಾಗಿದೆ ಎಂದು ಹಣಕಾಸು ಸಚಿವಾಲಯದ ಮಾರ್ಚ್‌ ತಿಂಗಳಿನ (Economic review) ವರದಿ ತಿಳಿಸಿದೆ. ಹೀಗಿದ್ದರೂ ಎಲ್‌ ನಿನೊ (El Nino) ಪ್ರೇರಿತ ಬರ ಪರಿಸ್ಥಿತಿ, ವಿದೇಶಗಳಲ್ಲಿನ ರಾಜಕೀಯ ವಿದ್ಯಮಾನಗಳು ಹಾಗೂ (geopolitical development) ಜಾಗತಿಕ ಆರ್ಥಿಕತೆಯ ಬಿಕ್ಕಟ್ಟಿನ ಸವಾಲುಗಳನ್ನು ಆರ್ಥಿಕತೆ ಎದುರಿಸುತ್ತಿದೆ ಎಂದು ಎಚ್ಚರಿಸಿದೆ.

ಈ ಮೂರು ಪ್ರಮುಖ ಸವಾಲುಗಳು ಬೆಳವಣಿಗೆ ಮತ್ತು ಹಣದುಬ್ಬರದ ಸ್ಥಿತಿಯನ್ನು ಸೃಷ್ಟಿಸಲಿವೆ ಎಂದು ವರದಿ ತಿಳಿಸಿದೆ. ವರದಿಯಲ್ಲಿ ಪಾಸಿಟಿವ್‌ ಮತ್ತು ನೆಗೆಟಿವ್‌ ಅಂಶಗಳನ್ನು ಉಲ್ಲೇಖಿಸಲಾಗಿದ್ದು, ವಿವರ ಇಂತಿದೆ.

ಹಣಕಾಸು ಸಚಿವಾಲಯದ ವರದಿಯಲ್ಲಿರುವ ಪಾಸಿಟಿವ್‌ ಅಂಶಗಳೇನು?

ಹಣದುಬ್ಬರ ಇಳಿಕೆಯಾಗುವ ಸಾಧ್ಯತೆ ಇದೆ. ಸಮಗ್ರವಾಗಿ ಆರ್ಥಿಕತೆ ಸ್ಥಿರ ಬೆಳವಣಿಗೆ ಸಾಧಿಸುತ್ತಿದೆ.

ವಿತ್ತೀಯ ಕೊರತೆ (CAD) ಜನವರಿ-ಮಾರ್ಚ್‌ ಅವಧಿಯಲ್ಲಿ ಜಿಡಿಪಿಯ 2.2%ಕ್ಕೆ ಇಳಿಕೆಯಾಗುವ ಸಾಧ್ಯತೆ ಇದೆ.

ಭಾರತೀಯ ಬ್ಯಾಂಕ್‌ಗಳಿಗೆ ಅಮೆರಿಕದ ಬ್ಯಾಂಕಿಂಗ್‌ ಬಿಕ್ಕಟ್ಟಿನಿಂದ ಯಾವುದೇ ಅಪಾಯ ಇಲ್ಲ.

ಕೇಂದ್ರ ಸರ್ಕಾರದ ಬಂಡವಾಳ ವೆಚ್ಚದ ಪರಿಣಾಮ ರಾಜ್ಯಗಳಿಗೆ ಬಂಡವಾಳ ವೆಚ್ಚವನ್ನು ಪ್ಲಾನ್‌ ಮಾಡಲು ಸಾಧ್ಯವಾಗುತ್ತಿದೆ.

ಬಹುತೇಕ ರಾಜ್ಯಗಳು 2023-24ರಲ್ಲಿ ವಿತ್ತೀಯ ಕೊರತೆಯನ್ನು 3-3.5%ರ ಗುರಿಯ ಒಳಗೆ ನಿಯಂತ್ರಿಸುವ ಸಾಧ್ಯತೆ ಇದೆ.

ಭಾರತದ ಆರ್ಥಿಕತೆಗೆ ಸವಾಲುಗಳೇನು?

ಜಾಗತಿಕ ಆರ್ಥಿಕ ಬೆಳವಣಿಗೆಯ ಮಂದಗತಿ

ಎಲ್‌ ನಿನೊ ಎಫೆಕ್ಟ್‌ನಿಂದ ಬರದ ಪರಿಸ್ಥಿತಿ ನಿರ್ಮಾಣ ಸಂಭವ. ಇದರಿಂದ ದರ ಏರಿಕೆ ಸಾಧ್ಯತೆ.

ಅಭಿವೃದ್ಧಿ ಹೊಂದಿದ ದೇಶಗಳಲ್ಲಿನ ಆರ್ಥಿಕ ಬಿಕ್ಕಟ್ಟು

ಕಚ್ಚಾ ತೈಲ ದರ ಏರಿದರೆ ಹಣದುಬ್ಬರ ಹೆಚ್ಚಲಿದೆ.

Exit mobile version