ನವ ದೆಹಲಿ: ಹಿರಿಯ ಆರ್ಥಿಕ ತಜ್ಞ, ಸಾರ್ವಜನಿಕ ವಿತರಣೆ ವ್ಯವಸ್ಥೆಯ ಪ್ರಬಲ ಪ್ರತಿಪಾದಕರಾಗಿದ್ದ ಅಭಿಜಿತ್ ಸೇನ್ (೭೨) ಸೋಮವಾರ ಹೃದಯಾಘಾತಕ್ಕೀಡಾಗಿ ನಿಧನರಾಗಿದ್ದಾರೆ. ಭಾರತದ ಗ್ರಾಮೀಣ ಆರ್ಥಿಕತೆ ಬಗ್ಗೆ ಆಳವಾದ ಅಧ್ಯಯನ ಮತ್ತು ಸಂಶೋಧನೆ ನಡೆಸಿದ್ದ ಸೇನ್ (Economist Abhijit Sen) ಅವರು ಯೋಜನಾ ಆಯೋಗದ ಮಾಜಿ ಸದಸ್ಯರಾಗಿದ್ದರು. ಆಕ್ಸ್‌ಫರ್ಡ್, ಕೇಂಬ್ರಿಡ್ಜ್, ಜೆಎನ್‌ಯುವಿನಲ್ಲಿ ಅರ್ಥಶಾಸ್ತ್ರವನ್ನು ಬೋಧಿಸಿದ್ದರು.
ಅರ್ಥಶಾಸ್ತ್ರಜ್ಞರಾಗಿ ನಾನಾ ಸಂಸ್ಥೆಗಳು, ಆಯೋಗಗಳಲ್ಲಿ ಅವರು ಹಲವು ದಶಕಗಳ ಸೇವೆ ಸಲ್ಲಿಸಿದ್ದರು. ಕೃಷಿ ವೆಚ್ಚ ಮತ್ತು ದರ ಆಯೋಗದ ಮುಖ್ಯಸ್ಥರಾಗಿದ್ದಾರೆ. ೨೦೦೪ರಿಂದ ೨೦೧೪ರ ತನಕ ಮನಮೋಹನ್ ಸಿಂಗ್ ಪ್ರಧಾನಿಯಾಗಿದ್ದಾಗ ಯೋಜನಾ ಆಯೋಗದ ಸದಸ್ಯರಾಗಿದ್ದರು. ೨೦೧೦ರಲ್ಲಿ ಪದ್ಮಭೂಷಣ ಪ್ರಶಸ್ತಿ ಸ್ವೀಕರಿಸಿದ್ದರು. ೨೦೧೪ರಲ್ಲಿ ಎನ್‌ಡಿಎ ಸರ್ಕಾರ ಅಸ್ತಿತ್ವಕ್ಕೆ ಬಂದ ಬಳಿಕ ದೀರ್ಘಕಾಲೀನ ಧಾನ್ಯ ನೀರಿ ಕುರಿತ ಕಾರ್ಯಪಡೆಯ ಮುಖ್ಯಸ್ಥರಾಗಿದ್ದರು. ಅವರು ಗೋಧಿ ಮತ್ತು ಅಕ್ಕಿಯನ್ನು ಪಡಿತರ ವಿತರಣೆಯಲ್ಲಿ ಅಳವಡಿಸುವುದರ ಪ್ರಬಲ ಪ್ರತಿಪಾದಕರಾಗಿದ್ದರು.
ಏಷ್ಯನ್ ಡೆವಲಪ್‌ಮೆಮಟ್ ಬ್ಯಾಂಕ್, ಯುಎನ್‌ಡಿಪಿ, ಆಹಾರ ಮತ್ತು ಕೃಷಿ ಸಂಘಟನೆ ಮೊದಲಾದ ಸಂಸ್ಥೆಗಳ ಜತೆಗೆ ಸಂಶೋಧನೆ ನಡೆಸಿದ್ದರು.