ಹೊಸದಿಲ್ಲಿ: ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಅಬಕಾರಿ ಸುಂಕ ಕಡಿತದ ಹಿನ್ನೆಲೆಯಲ್ಲಿ ಶೀಘ್ರದಲ್ಲಿಯೇ ಹಣದುಬ್ಬರ ಶೇ.20ರಿಂದ ಶೇ.40ರ ತನಕ ಇಳಿಕೆಯಾಗುವ ಸಾಧ್ಯತೆ ಇದೆ ಎಂದು ಹಣಕಾಸು ತಜ್ಞರು ತಿಳಿಸಿದ್ದಾರೆ.
ಉಕ್ಕು ಮತ್ತು ಪ್ಲಾಸ್ಟಿಕ್ ತಯಾರಿಕೆಯ ಕಚ್ಚಾ ವಸ್ತುಗಳ ಮೇಲಿನ ಕಸ್ಟಮ್ಸ್ ಸುಂಕವನ್ನೂ ಕಡಿತಗೊಳಿಸಿರುವುದರಿಂದ ಹಣದುಬ್ಬರ ಅಥವಾ ಬೆಲೆ ಏರಿಕೆ ಇಳಿಕೆಯಾಗಲಿದೆ ಎಂದು ತಜ್ಞರು ತಿಳಿಸಿದ್ದಾರೆ.
ಪೆಟ್ರೋಲ್‌ನ ರಿಟೇಲ್ ದರದಲ್ಲಿ ಲೀಟರ್‌ಗೆ 9.5ರೂ. ಮತ್ತು ಡೀಸೆಲ್‌ನ ದರದಲ್ಲಿ 7 ರೂ. ಇಳಿಕೆಯಾಗಿದೆ. ಕೇಂದ್ರ ಸರಕಾರ ಅಬಕಾರಿ ಸುಂಕವನ್ನು ಅನುಕ್ರಮವಾಗಿ 8 ರೂ. ಮತ್ತು 6 ರೂ. ಕಡಿತಗೊಳಿಸಿದೆ.
ಕಳೆದ ಏಪ್ರಿಲ್‌ನಲ್ಲಿ ಚಿಲ್ಲರೆ ಹಣದುಬ್ಬರ 8 ವರ್ಷಗಳಲ್ಲಿಯೇ ಗರಿಷ್ಠ ಮಟ್ಟವಾದ ಶೇ.7.79ಕ್ಕೆ ಕಡಿತವಾಗಿತ್ತು. ಆರ್‌ಬಿಐ ರೆಪೊ ದರವನ್ನು ಶೇ.4.4ಕ್ಕೆ ಇತ್ತೀಚೆಗೆ ಪರಿಷ್ಕರಿಸಿದೆ. ಬ್ಯಾಂಕ್ ಆಫ್ ಬರೋಡಾ, ಎಚ್‌ಡಿಎಫ್‌ಸಿ ಬ್ಯಾಂಕ್, ಕೋಟಕ್ ಮಹೀಂದ್ರಾ ಬ್ಯಾಂಕ್, ನೊಮುರಾದ ಆರ್ಥಿಕ ತಜ್ಞರ ಪ್ರಕಾರ ಹಣದುಬ್ಬರ ಇಳಿಕೆಯಾಗಲಿದೆ.
ಪೆಟ್ರೋಲ್ ಮತ್ತು ಡೀಸೆಲ್ ದರ ಇಳಿಕೆಯ ಪರಿಣಾಮ ಸಾರಿಗೆ, ಪ್ರಯಾಣ ಮತ್ತು ಲಾಜಿಸ್ಟಿಕ್ಸ್ ವೆಚ್ಚಗಳು ಕಡಿತವಾಗಲಿದೆ. ಜೂನ್‌ನಿಂದ ಹಣದುಬ್ಬರ ಇಳಿಕೆ ಕಂಡು ಬರಲಿದೆ ಎಂದು ಎಚ್‌ಡಿಎಫ್‌ಸಿ ಬ್ಯಾಂಕ್‌ನ ಪ್ರಧಾನ ಆರ್ಥಿಕ ತಜ್ಞ ಸಾಕ್ಷಿ ಗುಪ್ತಾ ತಿಳಿಸಿದ್ದಾರೆ.
ಇದನ್ನೂ ಓದಿ: Money Guide: ಶೇ.7.79ಕ್ಕೆ ಜಿಗಿದ ಹಣದುಬ್ಬರ, ಉಳಿತಾಯ ಖಾತೆಗೆ ಸಾಲದು ಬಡ್ಡಿದರ