ನವ ದೆಹಲಿ: ಜಾರಿ ನಿರ್ದೇಶನಾಲಯವು ಚೀನಿ ಸಾಲದ ಆ್ಯಪ್‌ಗಳ ವಂಚನೆ ಪ್ರಕರಣಕ್ಕೆ ( loan app) ಸಂಬಂಧಿಸಿ 46.67 ಕೋಟಿ ರೂ.ಗಳನ್ನು ಜಪ್ತಿ ಮಾಡಿಕೊಂಡಿದೆ.
ಪೇಮೆಂಟ್ ಗೇಟ್‌ವೇಸ್‌ಗಳಾದ ಈಸ್‌ಬಿಜ್, ರಾಜೊರ್‌ಪೇ, ಕ್ಯಾಶ್‌ಫ್ರೀ ಮತ್ತು ಪೇಟಿಎಂ ಖಾತೆಗಳಲ್ಲಿದ್ದ 46.67 ಕೋಟಿ ರೂ.ಗಳನ್ನು ಇ.ಡಿ ಜಪ್ತಿ ಮಾಡಿದೆ.
ಜಾರಿ ನಿರ್ದೇಶನಾಲಯವು ಇತ್ತೀಚೆಗೆ ಚೀನಾದ ನಿಯಂತ್ರಣದಲ್ಲಿರುವ ಹಲವಾರು ಸಾಲದ ಆ್ಯಪ್‌ಗಳ ಮೇಲೆ ದಾಳಿ ನಡೆಸಿತ್ತು. ಅಕ್ರಮ ಹಣ ವರ್ಗಾವಣೆ ತಡೆ ಕಾಯಿದೆಯ ಅಡಿಯಲ್ಲಿ ಕ್ರಮ ಜರುಗಿಸಲಾಗಿತ್ತು. ಸೆಪ್ಟೆಂಬರ್ 14ರಂದು ದಿಲ್ಲಿ, ಮುಂಬಯಿ, ಬೆಂಗಳೂರು, ಗಾಜಿಯಾಬಾದ್, ಲಖನೌ, ಗಯಾದಲ್ಲಿ ಶೋಧ ಕಾರ್ಯಾಚರಣೆ ನಡೆದಿತ್ತು.