Site icon Vistara News

Edible oil price : ಅಡುಗೆ ಎಣ್ಣೆ ದರ ಶೀಘ್ರ 6% ಇಳಿಕೆ ಸಂಭವ

Edible oil price Cooking oil price may decrease by 6% soon

ಪುಣೆ: ಖಾದ್ಯ ತೈಲ ಕಂಪನಿಗಳು ಅಡುಗೆ ಅನಿಲ ದರದಲ್ಲಿ (Edible oil price) ಕನಿಷ್ಠ 6% ಕಡಿತ ಮಾಡುವ ಸಾಧ್ಯತೆ ಇದೆ. ಅಂತಾರಾಷ್ಟ್ರೀಯ ಮಟ್ಟದ ದರಗಳಿಗೆ ಅನುಗುಣವಾಗಿ ಖಾದ್ಯ ತೈಲಗಳ ರಿಟೇಲ್ ದರ ಇರಬೇಕು ಎಂದು ಸರ್ಕಾರ ಸೂಚಿಸಿರುವ ಹಿನ್ನೆಲೆಯಲ್ಲಿ ದರ (maximum retail price) ಇಳಿಕೆ ಸನ್ನಿಹಿತವಾಗಿದೆ.

ಅದಾನಿ ವಿಲ್ಮರ್‌ ಫಾರ್ಚ್ಯೂನ್‌ ಬ್ರಾಂಡ್‌ ಹೆಸರಿನಲ್ಲಿ ಅಡುಗೆ ಅನಿಲವನ್ನು ಮಾರಾಟ ಮಾಡುತ್ತಿದೆ. ಜೆಮಿನಿ ಈಡೆಬಲ್‌ & ಫ್ಯಾಟ್ಸ್‌ ಇಂಡಿಯಾ ಜೆಮಿನಿ ಬ್ರಾಂಡ್‌ ಅನ್ನು ಹೊಂದಿದೆ. ಇವೆರಡೂ ಬ್ರಾಂಡ್‌ಗಳ ಅಡುಗೆ ಎಣ್ಣೆ ದರದಲ್ಲಿ ಲೀಟರ್‌ಗೆ ಅನುಕ್ರಮವಾಗಿ 5 ರೂ. ಮತ್ತು 10 ರೂ. ಇಳಿಕೆಯಾಗಲಿದೆ. ಮುಂದಿನ ಮೂರು ವಾರಗಳಲ್ಲಿ ದರ ಇಳಿಕೆಯ ಲಾಭ ಗ್ರಾಹಕರಿಗೆ ಸಿಗಲಿದೆ.

ಸಾಲ್ವೆಂಟ್‌ ಎಕ್ಸ್‌ಟ್ರಾಕ್ಟರ್ಸ್‌ ಅಸೋಸಿಯೇಶನ್‌ ( Solvent extarctors association) ಮಂಗಳವಾರ ಬಿಡುಗಡೆಗೊಳಿಸಿರುವ ಹೇಳಿಕೆಯಲ್ಲಿ ಆಹಾರ ಮತ್ತು ನಾಗರಿಕ ವ್ಯವಹಾರ ಇಲಾಖೆಯು ಎಸ್‌ಇಎಗೆ ಖಾದ್ಯ ತೈಲದ ಎಂಆರ್‌ಪಿ ದರದಲ್ಲಿ ಇಳಿಸಲು ಹಾಗೂ ಅದರ ಪ್ರಯೋಜನವನ್ನು ಗ್ರಾಹಕರಿಗೆ ವರ್ಗಾಯಿಸಲು ಕೋರಿದೆ ಎಂದು ತಿಳಿಸಿದೆ.

ಕಾರಣವೇನು?

ಕಳೆದ ಆರು ತಿಂಗಳುಗಳಲ್ಲಿ ಅಂತಾರಾಷ್ಟ್ರೀಯ ದರಗಳು ಗಣನೀಯವಾಗಿ ಇಳಿಕೆಯಾಗಿದೆ. ಮುಖ್ಯವಾಗಿ ಕಳೆದ 60 ದಿನಗಳಲ್ಲಿ ಕಡಿಮೆಯಾಗಿದೆ. ನೆಲಗಡಲೆ, ಸಾಸಿವೆ, ಸೋಯಾಬೀನ್‌ ಉತ್ಪಾದನೆ ಬಂಪರ್‌ ಆಗಿತ್ತು. ಇಷ್ಟಿದ್ದರೂ ಸ್ಥಳೀಯವಾಗಿ ಖಾದ್ಯ ತೈಲ ದರಗಳು ಇಳಿದಿರಲಿಲ್ಲ. ಹೀಗಾಗಿ ಸರ್ಕಾರ ಈ ಸೂಚನೆ ನೀಡಿತ್ತು. ಖಾದ್ಯ ತೈಲಗಳಲ್ಲಿ ದರ ಇಳಿಕೆಯಾಗುವುದರಿಂದ ಆಹಾರ ಹಣದುಬ್ಬರ ಇಳಿಕೆಗೆ ಸಹಕಾರಿಯಾಗಲಿದೆ.

Exit mobile version