Site icon Vistara News

Edible oil prices : ಅಡುಗೆ ಎಣ್ಣೆ ದರದಲ್ಲಿ ಶೀಘ್ರ 8-12 ರೂ. ಇಳಿಕೆ

Edible oil in shops

#image_title

ನವ ದೆಹಲಿ: ಅಡುಗೆ ಎಣ್ಣೆಯ ರಿಟೇಲ್‌ ದರದಲ್ಲಿ ತಕ್ಷಣದಿಂದಲೇ ಲೀಟರ್‌ಗೆ 8-12 ರೂ. ಇಳಿಸುವಂತೆ ಕೇಂದ್ರ ಸರ್ಕಾರ ಶನಿವಾರ ಖಾದ್ಯ ತೈಲ ಸಂಸ್ಥೆಗಳಿಗೆ (Edible oil prices) ತಿಳಿಸಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಖಾದ್ಯ ತೈಲದ ದರ ಇಳಿಕೆಯಾಗಿರುವ ಹಿನ್ನೆಲೆಯಲ್ಲಿ ರಿಟೇಲ್‌ ದರ ಇಳಿಸಬೇಕು ಎಂದು ಕೇಂದ್ರ ಸರ್ಕಾರ ತಿಳಿಸಿದೆ.

ಜಾಗತಿಕ ಮಾರುಕಟ್ಟೆಯಲ್ಲಿ ದರ ಇಳಿದಿದ್ದರೂ, ಕೆಲವು ಕಂಪನಿಗಳು ರಿಟೇಲ್‌ ದರವನ್ನು ಇಳಿಸಿಲ್ಲ. ಇತರ ಬ್ರಾಂಡ್‌ಗಳಿಗಿಂತ ಹೆಚ್ಚಿನ ದರದಲ್ಲಿ ಮುಂದುವರಿಸಿವೆ. ಆದ್ದರಿಂದ ಕಂಪನಿಗಳಿಗೆ ಸೂಚಿಸಲಾಗಿದೆ ಎಂದು ಆಹಾರ ಸಚಿವಾಲಯ ತಿಳಿಸಿದೆ. ಆಹಾರ ಕಾರ್ಯದರ್ಶಿ ಸಂಜೀವ್‌ ಛೋಪ್ರಾ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ.

ಉತ್ಪಾದಕರು ಮತ್ತು ರಿಫೈನರ್‌ಗಳು ಕೂಡ ದರವನ್ನು ಇಳಿಸಬೇಕು. ಇದರಿಂದ ಯಾವುದೇ ಹಂತದಲ್ಲಿ ದರಗಳು ಇಳಿಕೆಯಾಗುವುದಿಲ್ಲ ಎಂದು ಆಹಾರ ಸಚಿವಾಲಯದ ಅಧಿಕಾರಿಗಳು ತಿಳಿಸಿದ್ದಾರೆ. ಉತ್ಪಾದಕರು ಮತ್ತು ರಿಫೈನರ್‌ಗಳಲ್ಲಿ ದರ ಇಳಿಕೆಯಾದ ಬಳಿಕ ಅದು ಗ್ರಾಹಕರಿಗೂ ವರ್ಗಾವಣೆಯಾಗಬೇಕು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಖಾದ್ಯ ತೈಲ ದರ ಇಳಿಕೆಯ ಪರಿಣಾಮ ಹಣದುಬ್ಬರ ಕೂಡ ತಗ್ಗಲಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಳೆದ ಕೆಲ ತಿಂಗಳುಗಳಿಂದ ಖಾದ್ಯ ತೈಲ ದರಗಳು ಇಳಿದಿವೆ. ಆದರೆ ಇದು ಭಾರತದಲ್ಲಿ ಕಟ್ಟಕಡೆಯ ಗ್ರಾಹಕರಿಗೆ ಸರಿಯಾಗಿ ವರ್ಗಾವಣೆಯಾಗುತ್ತಿಲ್ಲ ಎಂಬುದನ್ನು ಸರ್ಕಾರ ಪರಿಗಣಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. 2021-22ರಲ್ಲಿ ನಾನಾ ಕಾರಣಗಳಿಂದಾಗಿ ಖಾದ್ಯ ತೈಲ ದರಗಳು ಗಗನಕ್ಕೇರಿತ್ತು. ಆದರೆ 2022ರ ಜೂನ್‌ ಬಳಿಕ ದರಗಳು ಇಳಿಕೆಯಾಗುತ್ತಿವೆ.

ಅಡುಗೆ ಎಣ್ಣೆಯ ಆಮದು ಹೆಚ್ಚಳ: ಮಲೇಷಿಯಾ, ಇಂಡೋನೇಷ್ಯಾದಲ್ಲಿ ದರ ಇಳಿಕೆಯ ಹಿನ್ನೆಲೆಯಲ್ಲಿ ಭಾರತವು ಕಳೆದ ಹಲವಾರು ತಿಂಗಳಲ್ಲಿ 17.12 ಲಕ್ಷ ಟನ್‌ನಷ್ಟು ಸಂಸ್ಕರಿಸಿದ ತಾಳೆ ಎಣ್ಣೆ ಆಮದು ಮಾಡಿಕೊಂಡಿದೆ. ಇದರೊಂದಿಗೆ ಆಮದಿನ ಪ್ರಮಾಣ ಎರಡೂವರೆ ಪಟ್ಟು ಏರಿಕೆಯಾಗಿದೆ ಎಂದು ಕೈಗಾರಿಕಾ ಸಂಸ್ಥೆ SEA ತಿಳಿಸಿದೆ. ಭಾರತ, 2022 ನವೆಂಬರ್-ಸೆಪ್ಟೆಂಬರ್ ಅವಧಿಯಲ್ಲಿ 130.1 ಲಕ್ಷ ಟನ್ ತೈಲವನ್ನು ಆಮದು ಮಾಡಿತ್ತು.

ದೇಶದಲ್ಲಿ ಅಡುಗೆಮನೆಯ ಅವಶ್ಯಕ ಪದಾರ್ಥವಾದ (Price rises ) ತೊಗರಿ ಮತ್ತು ಉದ್ದಿನ ಬೇಳೆ ದರದಲ್ಲಿ ಏರಿಕೆ ಆಗಿರುವುದರಿಂದ ದಾಸ್ತಾನಿಗೆ ಮಿತಿಯನ್ನು ಕೇಂದ್ರ ಸರ್ಕಾರ ಶುಕ್ರವಾರ ವಿಧಿಸಿದೆ. ( Govt caps tur and urad dal stock) ಹೋಲ್‌ಸೇಲ್‌ ವರ್ತಕರು ಮತ್ತು ರಿಟೇಲ್‌ ವ್ಯಾಪಾರಿಗಳು ತೊಗರಿ ಮತ್ತು ಉದ್ದಿನ ಬೇಳೆಯನ್ನು ನಿಗದಿತ ಮಿತಿಗಿಂತ ಹೆಚ್ಚು ದಾಸ್ತಾನು ಮಾಡುವಂತಿಲ್ಲ. ಈ ಆದೇಶ ತಕ್ಷಣ ಜಾರಿಯಾಗಿದ್ದು, ಅಕ್ಟೋಬರ್‌ 31ರ ತನಕ ಜಾರಿಯಲ್ಲಿರಲಿದೆ.

ಹೋಲ್‌ಸೇಲ್‌ ಅಥವಾ ಸಗಟು ವರ್ತಕರು 200 ಟನ್‌ನಷ್ಟು ತೊಗರಿ, ಉದ್ದು ದಾಸ್ತಾನು ಇಡಬಹುದು. ರಿಟೇಲ್‌ ವರ್ತಕರು 5 ಟನ್‌ ದಾಸ್ತಾನಿಡಬಹುದು. ಕೆಲದ ದಿನಗಳಿಂದ ತೊಗರಿ ಮತ್ತು ಉದ್ದಿನ ಮತ್ತು ತೊಗರಿ ದರ ಗಣನೀಯ ಏರಿಕೆಯಾಗಿದೆ. ಈ ವರ್ಷದ ಆರಂಭದಿಂದಲೂ ಏರುಗತಿಯಲ್ಲಿತ್ತು. ಮಾರುಕಟ್ಟೆಗೆ ಆವಕ ಕಡಿಮೆಯಾಗಿರುವುದು ಹಾಗೂ ದರ ಏರುಗತಿಯಲ್ಲಿದ್ದರೂ, ಮುಂದುವರಿದಿರುವ ಬೇಡಿಕೆಯ ಪರಿಣಾಮ ದರ ಏರುಗತಿಯಲ್ಲಿದೆ.

ಕೇಂದ್ರ ಸರ್ಕಾರ ಶೂನ್ಯ ಸುಂಕದಲ್ಲಿ ತೊಗರಿ ಮತ್ತು ಉದ್ದಿನ ಆಮದಿಗೆ 2024 ಮಾರ್ಚ್‌ ತನಕ ಅನುಮತಿ ನೀಡಿದೆ. ಇದರಿಂದ ಆಮದು ಸುಗಮವಾಗಲಿದ್ದು, ದರ ನಿಯಂತ್ರಣಕ್ಕೆ ಸಹಕಾರಿಯಾಗಲಿದೆ. ವರ್ತಕರು 30 ದಿನಗಳೊಳಗೆ ಮಿತಿ ಬಗ್ಗೆ ವಿವರ ನೀಡಬೇಕಾಗುತ್ತದೆ. ಇತ್ತೀಚಿನ ಅಕಾಲಿಕ ಮಳೆಯ ಪರಿಣಾಮ ತೊಗರಿ ಬೆಳೆಯುವ ರಾಜ್ಯಗಳಲ್ಲಿ ಗಣನೀಯ ಬೆಳೆಹಾನಿ ಸಂಭವಿಸಿದೆ. ದೇಶೀಯ ಮತ್ತು ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ತೊಗರಿ ದರಗಳು ಏರಿಕೆಯಾಗಿದೆ. ಸಗಟು ಮಾರುಕಟ್ಟೆಯಲ್ಲಿ ಪ್ರತಿ ಕೆ.ಜಿಗೆ 110-115 ರೂ.ನಷ್ಟಿದ್ದ ತೊಗರಿ ದರ ಈಗ 145-150 ರೂ.ಗೆ ಜಿಗಿದಿದೆ. ರಿಟೇಲ್‌ ಮಾರುಕಟ್ಟೆಯಲ್ಲಿ ಉತ್ತಮ ಗುಣಮಟ್ಟದ ತೊಗರಿ ದರ 165-170 ರೂ.ಗೆ ಏರಿದೆ. ಹೊಸ ಬೆಳೆ ಮಾರುಕಟ್ಟೆಗೆ ಬರಲು ಇನ್ನೂ 6-7 ತಿಂಗಳು ಕಾಯಬೇಕಾಗುತ್ತದೆ.

ಇದನ್ನೂ ಓದಿ: Edible oil price : ಅಡುಗೆ ಎಣ್ಣೆ ದರ ಶೀಘ್ರ 6% ಇಳಿಕೆ ಸಂಭವ

Exit mobile version