ಹೊಸದಿಲ್ಲಿ: ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳ ವಿಮೆ ಪ್ರೀಮಿಯಂ ಏರಿಕೆಯಾಗುವ ಸಾಧ್ಯತೆ ಇದೆ.
ಇತ್ತೀಚೆಗೆ ಎಲೆಕ್ಟ್ರಿಕ್ ವಾಹನಗಳಲ್ಲಿ ಸಂಭವಿಸಿದ ಬೆಂಕಿ ಅವಘಡಗಳ ಹಿನ್ನೆಲೆಯಲ್ಲಿ ವಿಮೆ ಕಂಪನಿಗಳು ರಿಸ್ಕ್‌ಗಳ ಮರು ಮೌಲ್ಯಮಾಪನ ಮಾಡಲು ಆರಂಭಿಸಿವೆ.
ಎಲೆಕ್ಟ್ರಾನಿಕ್ ವಾಹನಗಳ ವಲಯದಲ್ಲಿ ವಿಮೆ ಕ್ಲೇಮ್‌ಗಳ ಬಗ್ಗೆ ಅಧಯಯನ ನಡೆಯುತ್ತಿದೆ. ಇತ್ತೀಚಿನ ಬೆಂಕಿ ಆಕಸ್ಮಿಕಗಳ ಬಗ್ಗೆಯೂ ಪರಾಮರ್ಶೆ ನಡೆಸಲಾಗುವುದು ಎಂದು ಡಿಜಿಟ್ ಇನ್ಷೂರೆನ್ಸ್ ಸಂಸ್ಥೆಯ ಮುಖ್ಯ ವಿತರಣೆ ಅಧಿಕಾರಿ ಆದರ್ಶ್ ಅಗರವಾಲ್ ತಿಳಿಸಿದ್ದಾರೆ.
ಐಸಿಐಸಿಐ ಲ್ಯಾಂಬೋರ್ಡ್ ಕೂಡ ಪರಿಸ್ಥಿತಿಯನ್ನು ಅವಲೋಕಿಸುತ್ತಿದೆ. ಇತ್ತೀಚಿನ ಬೆಂಕಿ ಆಕಸ್ಮಿಕಗಳನ್ನೂ ಈ ನಿಟ್ಟಿನಲ್ಲಿ ಪರಿಗಣಿಸಲಾಗುವುದು ಎಂದು ಕಂಪನಿಯ ಮೂಲಗಳು ತಿಳಿಸಿವೆ.