Site icon Vistara News

Elon Musk : ವರ್ಕ್‌ ಫ್ರಮ್‌ ಹೋಮ್‌ ನೈತಿಕವಾಗಿ ತಪ್ಪು ಎಂದ ಎಲಾನ್‌ ಮಸ್ಕ್‌, ಕಾರಣವೇನು?

musk

ಕ್ಯಾಲಿಫೋರ್ನಿಯಾ: ವರ್ಕ್‌ ಫ್ರಮ್‌ ಹೋಮ್‌ ಪರಿಕಲ್ಪನೆ ಈಗ ಸಾಮಾನ್ಯವಾಗಿದೆ. ಐಟಿ ವಲಯದಲ್ಲಿ ಇದು ಹೆಚ್ಚು. ಆದರೆ ನೈತಿಕವಾಗಿ ಇದು ಸರಿಯಲ್ಲ ಎಂದು ಜಗತ್ತಿನ ಸಿರಿವಂತ ಉದ್ಯಮಿ ಎಲಾನ್‌ ಮಸ್ಕ್‌ (Elon Musk) ಹೇಳಿದ್ದಾರೆ. ಉದ್ಯೋಗಿಗಳು ಕಚೇರಿಯಲ್ಲಿ ತಮ್ಮ ಕೆಲಸವನ್ನು ಮಾಡಿ ತೋರಿಸಬೇಕು. ವರ್ಕ್‌ ಫ್ರಮ್‌ ಹೋಮ್‌ ಪದ್ಧತಿಯಿಂದ (work from home) ಉದ್ಯೋಗಿಗಳ ಉತ್ಪಾದಕತೆ (productivity) ಕಡಿಮೆಯಾಗಬಹುದು. ತೀರಾ ಅನಿವಾರ್ಯ ಇದ್ದರೆ ಮಾತ್ರ ವರ್ಕ್‌ ಫ್ರಮ್‌ ಹೋಮ್‌ ನೀಡಬಹುದು ಎಂದು ಟೆಸ್ಲಾ ಕಂಪನಿಯ ಸಿಇಒ ಎಲಾನ್‌ ಮಸ್ಕ್‌ (Tesla CEO Elon Musk) ಹೇಳಿದ್ದಾರೆ.

ಇದನ್ನೂ ಓದಿ :Elon Musk : ಟ್ವಿಟರ್‌ ವೈಯಕ್ತಿಕ ಖಾತೆಯಿಂದ ಎಲಾನ್‌ ಮಸ್ಕ್‌ಗೆ ತಿಂಗಳಿಗೆ 80 ಲಕ್ಷ ರೂ. ಆದಾಯ! ಇದು ಹೇಗೆ?

ಜನ ಕಾರುಗಳನ್ನು ತಯಾರಿಸುತ್ತಾರೆ. ಮನೆಗಳನ್ನು ಕಟ್ಟುತ್ತಾರೆ. ಆಹಾರವನ್ನು ಉತ್ಪಾದಿಸುತ್ತಾರೆ. ಕೃಷಿ ಮಾಡುತ್ತಾರೆ. ಅವರೆಲ್ಲರೂ ಕೆಲಸಕ್ಕೆ ಹೋಗಲೇಬೇಕಾಗುತ್ತದೆ. ಆದರೆ ನೀವು ಮನೆಯಿಂದಲೇ ಕೆಲಸ ಮಾಡಿ ಎನ್ನುವುದು ನೈತಿಕವಾಗಿ ಸರಿಯಲ್ಲ ಎಂದು ಸಿಎನ್‌ಬಿಸಿಗೆ ನೀಡಿದ ಸಂದರ್ಶನದಲ್ಲಿ ಎಲಾನ್‌ ಮಸ್ಕ್‌ ಹೇಳಿದ್ದಾರೆ.

ಎಲಾನ್‌ ಮಸ್ಕ್‌ ಅವರು ವರ್ಕ್‌ ಫ್ರಮ್‌ ಹೋಮ್‌ ಪದ್ಧತಿ ಬದಲಿಗೆ ಕಚೇರಿಗೆ ಬಂದು ಕೆಲಸ ಮಾಡುವ ವ್ಯವಸ್ಥೆ ಬಗ್ಗೆ ಬಲವಾಗಿ ವಾದಿಸುತ್ತಲೇ ಬಂದಿದ್ದಾರೆ. ಟೆಸ್ಲಾದಲ್ಲಿ ಸಿಬ್ಬಂದಿಗೆ ಪ್ರತಿ ವಾರ ಕನಿಷ್ಠ 40 ಗಂಟೆ ಕಚೇರಿಯಲ್ಲಿ ಇರಬೇಕು ಎಂದು ಸೂಚಿಸಲಾಗಿದೆ.

ಕೋವಿಡ್‌ ಬಿಕ್ಕಟ್ಟಿಗೆ ಮೊದಲೂ ಐಟಿ ವಲಯದಲ್ಲಿ ವರ್ಕ್‌ ಫ್ರಮ್‌ ಹೋಮ್‌ ಚಾಲ್ತಿಯಲ್ಲಿ ಇತ್ತು. ಕೋವಿಡ್‌ ಸಂದರ್ಭ ವ್ಯಾಪಕವಾಗಿ ಬಳಕೆ ಆಯಿತು. ಇದರಿಂದ ಅನೇಕ ಅನುಕೂಲಗಳೂ ಆಗಿತ್ತು. ಐಟಿ ಕಂಪನಿಗಳಲ್ಲಿ ನೇಮಕಾತಿಯೂ ಚುರುಕಾಗಿತ್ತು. ಇತರ ಕ್ಷೇತ್ರಗಳಲ್ಲೂ ವರ್ಕ್‌ ಫ್ರಮ್‌ ಹೋಮ್‌ ವಿಸ್ತರಿಸಿತ್ತು. ಕೋವಿಡ್‌ ಕಡಿಮೆಯಾದ ಬಳಿಕ ಕಂಪನಿಗಳು ಮತ್ತೆ ಕಚೇರಿಗೆ ಸಿಬ್ಬಂದಿಯನ್ನು ಕರೆಯಿಸಿಕೊಳ್ಳುತ್ತಿವೆ.

Exit mobile version