Elon Musk 80 lakh rupees per month to Elon Musk from Twitter personal account Income! How is thisElon Musk : ಟ್ವಿಟರ್‌ ವೈಯಕ್ತಿಕ ಖಾತೆಯಿಂದ ಎಲಾನ್‌ ಮಸ್ಕ್‌ಗೆ ತಿಂಗಳಿಗೆ 80 ಲಕ್ಷ ರೂ. ಆದಾಯ! ಇದು ಹೇಗೆ? - Vistara News Elon Musk : ಟ್ವಿಟರ್‌ ವೈಯಕ್ತಿಕ ಖಾತೆಯಿಂದ ಎಲಾನ್‌ ಮಸ್ಕ್‌ಗೆ ತಿಂಗಳಿಗೆ 80 ಲಕ್ಷ ರೂ. ಆದಾಯ! ಇದು ಹೇಗೆ?

ವಾಣಿಜ್ಯ

Elon Musk : ಟ್ವಿಟರ್‌ ವೈಯಕ್ತಿಕ ಖಾತೆಯಿಂದ ಎಲಾನ್‌ ಮಸ್ಕ್‌ಗೆ ತಿಂಗಳಿಗೆ 80 ಲಕ್ಷ ರೂ. ಆದಾಯ! ಇದು ಹೇಗೆ?

ಟ್ವಿಟರ್‌ನಲ್ಲಿ ಕ್ರಿಯೇಟರ್‌ ಸಬ್‌ಸ್ಕ್ರಿಪ್ಷನ್‌ ಎಂಬ ಹೊಸ ಯೋಜನೆಯನ್ನು ಎಲಾನ್‌ ಮಸ್ಕ್‌ ಇತ್ತೀಚೆಗೆ ಜಾರಿಗೊಳಿಸಿದ್ದಾರೆ. ಅದರ ಪ್ರಕಾರ ಮಸ್ಕ್‌ ಮಾಸಿಕ 80 ಲಕ್ಷ ರೂ. ಆದಾಯವನ್ನು (Elon Musk) ತಮ್ಮ ವೈಯಕ್ತಿಕ ಟ್ವಿಟರ್‌ ಖಾತೆಯಿಂದ ಪಡೆಯಲಿದ್ದಾರೆ. ವಿವರ ಇಲ್ಲಿದೆ.

VISTARANEWS.COM


on

Elon Musk
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಸ್ಯಾನ್‌ ಫ್ರಾನ್ಸಿಸ್ಕೊ: ಸಾಮಾಜಿಕ ಜಾಲ ತಾಣ ಟ್ವಿಟರ್‌ (Twitter) ಅನ್ನು ಖರೀದಿಸಿದ ಮೇಲೆ ಎಲಾನ್‌ ಮಸ್ಕ್‌ (Elon Musk) ಅವರು ಅದರಲ್ಲಿ ಹಲವಾರು ಬದಲಾವಣೆಯನ್ನು ಜಾರಿಗೊಳಿಸಿದ್ದಾರೆ. ಮಾತ್ರವಲ್ಲದೆ ಇನ್ನು ಮುಂದೆ ಪ್ರತಿ ತಿಂಗಳು ತಮ್ಮ ವೈಯಕ್ತಿಕ ಟ್ವಿಟರ್‌ ಖಾತೆಯಿಂದ 80 ಲಕ್ಷ ರೂ. ಆದಾಯ ಗಳಿಸಲಿದ್ದಾರೆ. ಇದು ಹೇಗೆ ಎನ್ನುತ್ತೀರಾ?! ಇಲ್ಲಿದೆ ಇಂಟರೆಸ್ಟಿಂಗ್‌ ಮಾಹಿತಿ. ಬ್ಲೂ ಟಿಕ್‌ (blue tick service) ಗುರುತು ಪಡೆಯಬೇಕಿದ್ದರೆ ಮಾಸಿಕ 4 ಡಾಲರ್‌ ಚಂದಾದಾರಿಕೆಯ ಪ್ಲಾನ್‌ ಖರೀದಿಸಬೇಕಾಗುತ್ತದೆ.

ಇತ್ತೀಚೆಗೆ ಮಸ್ಕ್‌ ಅವರು ಟ್ವಿಟರ್‌ನಲ್ಲಿ Monetization ಸ್ಕೀಮ್‌ ಅನ್ನೂ ಅಳವಡಿಸಿದ್ದಾರೆ. ಟ್ವಿಟರ್‌ ಕ್ರಿಯೇಟರ್‌ ಸಬ್‌ಸ್ಕ್ರಿಪ್ಷನ್‌ ಪ್ರೋಗ್ರಾಮ್‌ (Twitter Creator Subscription) ಈ ಫೀಚರ್‌ ಮೂಲಕ ಎಲಾನ್‌ ಮಸ್ಕ್‌ ಅವರು ತಿಂಗಳಿಗೆ 80 ಲಕ್ಷ ರೂ. ಆದಾಯ ಗಳಿಸಲು ಹಾದಿ ಸುಗಮವಾಗಿದೆ. ಈ ಫೀಚರ್‌ ಉಚಿತವಲ್ಲ, ಇದರ ಚಂದಾದಾರಿಕೆಗೆ ಪ್ರತಿ ತಿಂಗಳು 4 ಡಾಲರ್‌ ಅಥವಾ 330 ರೂ.ಗಳನ್ನು ಕೊಡಬೇಕಾಗುತ್ತದೆ. ಇಲ್ಲಿ ತಮ್ಮ ವಿಶೇಷ ಕಂಟೆಂಟ್‌ಗಳನ್ನು (exclusive content) ಮಸ್ಕ್‌ ಪೋಸ್ಟ್‌ ಮಾಡಲಿದ್ದಾರೆ.

ಟ್ವಿಟರ್‌ ಸಿಇಒ ಎಲಾನ್‌ ಮಸ್ಕ್‌ ಅವರು 24,700 ಸೂಪರ್ ಫಾಲೋವರ್‌ಗಳನ್ನು ಹೊಂದಿದ್ದಾರೆ.‌ ಲೆಕ್ಕಾಚಾರದ ಪ್ರಕಾರ 24.7 ಸಾವಿರ ಚಂದಾದಾರರನ್ನು ಹೊಂದಿರುವ (subscibers) ಎಲಾನ್‌ ಮಸ್ಕ್‌ ಅವರು ಮಾಸಿಕ 68,42,000 ರೂ. ಸಂಪಾದಿಸಲಿದ್ದಾರೆ.

ಮುಂದಿನ 12 ತಿಂಗಳುಗಳಲ್ಲಿ ಟ್ವಿಟರ್‌ ತನ್ನ ಬಳಕೆದಾರರಿಂದ ಪಡೆದ ಹಣವನ್ನು ತಾನು ಇಟ್ಟುಕೊಳ್ಳುವುದಿಲ್ಲ, ಬದಲಿಗೆ ಕಂಟೆಂಟ್‌ಗಳಿಗೆ ಪ್ರತಿಯಾಗಿ ವಿತರಿಸಲಿದೆ ಎಂದು ಮಸ್ಕ್‌ ಅವರು ಹೇಳಿದ್ದಾರೆ.

ಏಪ್ರಿಲ್ 1ರಿಂದ ಟ್ವಿಟ್ಟರ್‌ ತನ್ನ ಬ್ಲೂ ಟಿಕ್‌ ಕುರಿತ ನಿಯಮಗಳನ್ನು ಬದಲಿಸಿ ಬೇಗ ಸಬ್‌ಸ್ಕ್ರೈಬ್ ಮಾಡಿಕೊಳ್ಳುವಂತೆ ಟ್ವಿಟ್ಟರ್ ಹೇಳಿತ್ತು. ಕೆಲವರು ಮುನ್ನೆಚ್ಚರಿಕೆ ವಹಿಸಿದ ಕಾರಣ ಅವರ ಖಾತೆಗಳ ಬ್ಲೂಟಿಕ್ ಉಳಿದುಕೊಂಡಿದೆ. ಇನ್ನು ಈ ಟ್ವಿಟರ್ ಬ್ಲೂಟಿಕ್‌ಗಾಗಿ ಒಂದು ತಿಂಗಳಿಗೆ 900 ಅಥವಾ ವರ್ಷಕ್ಕೆ 9400 ರೂ. ಹಣ ಪಾವತಿಸಬೇಕು. ಬ್ಲೂಟಿಕ್ ಚಂದಾದಾರರಿಗೆ ಅಕ್ಷರಮಿತಿ ಹೆಚ್ಚಿಸುವುದಾಗಿ ಹೇಳಿದ್ದರು. ವಿದೇಶಿ ಸೆಲೆಬ್ರಿಟಿಗಳಿಗೂ ಇದೇ ರೀತಿ ಆಗಿದೆ. ಟ್ವೀಟ್​ನ ಅಕ್ಷರ ಮಿತಿಯನ್ನು ಶೀಘ್ರದಲ್ಲೇ 10,000ಕ್ಕೆ ಹೆಚ್ಚಿಸಲಾಗುವುದು ಎಂದು ಎಲಾನ್ ಮಸ್ಕ್ ಹೇಳಿದ್ದರು.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App

ಮನಿ-ಗೈಡ್

Money Guide: ಮ್ಯೂಚುವಲ್‌ ಫಂಡ್‌ನಲ್ಲಿ ಹೂಡಿಕೆ ಮಾಡಲು ಯೋಚಿಸುತ್ತಿದ್ದೀರಾ? ಇದರಲ್ಲಿನ ವಿಧಗಳ ಬಗ್ಗೆ ಇಲ್ಲಿದೆ ಮಾಹಿತಿ

Money Guide: ಹೂಡಿಕೆಗೆ ಸಂಬಂಧಿಸಿದಂತೆ ಇತ್ತೀಚಿನ ದಿನಗಳಲ್ಲಿ ಹೆಚ್ಚಾಗಿ ಕೇಳಿ ಬರುತ್ತಿರುವ ಹೆಸರೇ ಮ್ಯೂಚುವಲ್‌ ಫಂಡ್‌. ನೇರವಾಗಿ ಷೇರುಗಳು ಹಾಗೂ ಬಾಂಡ್‌ಗಳಲ್ಲಿ ಹೂಡಿಕೆ ಮಾಡಲು ಬಯಸದವರಿಗೆ ಇದು ಸೂಕ್ತ. ಹಾಗಾದರೆ ಮ್ಯೂಚುವಲ್‌ ಫಂಡ್‌ ಎಂದರೇನು? ಇದರಲ್ಲಿ ಹೂಡಿಕೆ ಮಾಡುವ ಮುನ್ನ ಯಾವೆಲ್ಲ ಅಂಶಗಳನ್ನು ಗಮನಿಸಬೇಕು? ವಿಧಗಳು ಯಾವುವು? ಎನ್ನುವ ವಿವರ ಇಲ್ಲಿದೆ.

VISTARANEWS.COM


on

Money Guide
Koo

ಬೆಂಗಳೂರು: ಅನೇಕ ಮಂದಿ ಮ್ಯೂಚುವಲ್‌ ಫಂಡ್‌ (Mutual Fund)ನಲ್ಲಿ ಹೂಡಿಕೆ ಮಾಡಬೇಕು ಎಂದುಕೊಳ್ಳುತ್ತಾರೆ. ಇನ್ನು ಕೆಲವು ಮಂದಿ ನೇರವಾಗಿ ಷೇರುಗಳು ಹಾಗೂ ಬಾಂಡ್‌ಗಳಲ್ಲಿ ಹೂಡಿಕೆ ಮಾಡಲು ಬಯಸುವುದಿಲ್ಲ. ಸ್ಟಾಕ್‌ಗಳು ಮತ್ತು ಬಾಂಡ್‌ಗಳಲ್ಲಿ ಲಾಭ ಇದೆ ಎಂದು ಗೊತ್ತಿದ್ದರೂ, ಅದು ಹೇಗೆ ಎಂಬುದು ಕರಗತವಾಗಿರುವುದಿಲ್ಲ. ಅವರಿಗೆ ಮಾರುಕಟ್ಟೆ ಮತ್ತು ಕಂಪೆನಿಗಳ ಫಂಡಮೆಂಟಲ್‌ ಅನಾಲಿಸಿಸ್‌ ನಡೆಸಲು ಸಮಯದ ಅಭಾವ ಇರುವುದೂ ಇದಕ್ಕೆ ಕಾರಣ ಇರಬಹುದು. ಅಂತಹ ಮಂದಿ ಮ್ಯೂಚುವಲ್‌ ಫಂಡ್‌ ಮೂಲಕ ಷೇರುಗಳಲ್ಲಿ ಹೂಡಿಕೆ ಮಾಡಬಹುದು. ಹಾಗಾದರೆ ಮ್ಯೂಚುವಲ್‌ ಫಂಡ್‌ ಎಂದರೇನು? ಇದರಲ್ಲಿ ಹೂಡಿಕೆ ಮಾಡುವ ಮುನ್ನ ಯಾವೆಲ್ಲ ಅಂಶಗಳನ್ನು ಗಮನಿಸಬೇಕು? ವಿಧಗಳು ಯಾವುವು? ಎನ್ನುವ ವಿವರ ಮನಿಗೈಡ್‌ (Money Guide)ನಲ್ಲಿದೆ.

ಮ್ಯೂಚುವಲ್‌ ಫಂಡ್‌ ಎಂದರೇನು?

ಪ್ರಸ್ತುತ ಅತ್ಯುತ್ತಮ ಹೂಡಿಕೆ ವಿಧಾನಗಳಲ್ಲಿ ಮ್ಯೂಚುವಲ್ ಫಂಡ್ ಕೂಡ ಒಂದು ಎಂದು ಪರಿಗಣಿಸಲಾಗುತ್ತದೆ. ಮಾರುಕಟ್ಟೆಯ ಬಗ್ಗೆ ಸರಿಯಾದ ಮಾಹಿತಿ ಇದ್ದರೆ ವೈಯಕ್ತಿಕವಾಗಿ ಷೇರುಗಳಲ್ಲಿ ಹೂಡಿಕೆ ಮಾಡಬಹುದು. ಇಲ್ಲದಿದ್ದರೆ ಮ್ಯೂಚುವಲ್ ಫಂಡ್ ನಿಮಗಿರುವ ಅತ್ಯುತ್ತಮ ಮಾರ್ಗ ಎಂದು ಹಣಕಾಸು ತಜ್ಞರು ಹೇಳುತ್ತಾರೆ. ಮ್ಯೂಚುವಲ್ ಫಂಡ್​ಗಳನ್ನು ವೃತ್ತಿಪರರು ನಿಭಾಯಿಸುತ್ತಾರೆ. ವಿವಿಧ ಸ್ತರದ ಕಂಪೆನಿಗಳ ಷೇರುಗಳ ಮೇಲೆ ಮ್ಯೂಚುವಲ್ ಫಂಡ್​ನ ಹಣ ಹೂಡಿಕೆ ಆಗಿರುತ್ತದೆ. ಅಂದರೆ ನೀವು ಮ್ಯೂಚುವಲ್ ಫಂಡ್​ಗೆ ಹಾಕುವ ಹಣವನ್ನು ವಿವಿಧ ಷೇರುಗಳಲ್ಲಿ ಹೂಡಿಕೆ ಮಾಡಲಾಗುತ್ತದೆ. ಲಾಭದ ಉದ್ದೇಶಕ್ಕಾಗಿ ಮ್ಯೂಚುವಲ್ ಫಂಡ್ ನಿರ್ವಾಹಕರು ಹೂಡಿಕೆಯನ್ನು ಅಲ್ಲಿಂದಿಲ್ಲಿಗೆ ಬದಲಾಯಿಸುತ್ತಿರುತ್ತಾರೆ. ಗಮನಿಸಿ, ದೀರ್ಘಾವಧಿ ದೃಷ್ಟಿಯಿಂದ ಇವು ಬಹಳ ಲಾಭಕಾರಿ ಎನಿಸುತ್ತದೆ. ಅಲ್ಪಾವಧಿಗೆ ಅಲ್ಲ.

ಆದಾಗ್ಯೂ ಮ್ಯೂಚುವಲ್ ಫಂಡ್ ಹೂಡಿಕೆಗಳು ಮಾರುಕಟ್ಟೆ ಅಪಾಯಗಳಿಗೆ ಒಳಪಟ್ಟಿರುತ್ತವೆ. ಹೂಡಿಕೆದಾರರು ಹೂಡಿಕೆ ಮಾಡುವ ಮೊದಲು ಯೋಜನೆಯ ಮಾಹಿತಿ ದಾಖಲೆಯನ್ನು ಎಚ್ಚರಿಕೆಯಿಂದ ಓದಬೇಕು. ಅಲ್ಲದೆ ಯೋಜನೆಯ ಹಿಂದಿನ ಕಾರ್ಯಕ್ಷಮತೆಯು ಭವಿಷ್ಯದ ಆದಾಯವನ್ನು ಸೂಚಿಸುವುದಿಲ್ಲ. ಯಾವುದೇ ಕನಿಷ್ಠ ಅಥವಾ ಗರಿಷ್ಠ ಆದಾಯದ ಭರವಸೆ ಅಥವಾ ಖಾತರಿ ಇರಲು ಸಾಧ್ಯವಿಲ್ಲ ಮುಂತಾದ ಅಂಶಗಳನ್ನು ಹೂಡಿಕೆ ಮೊದಲೇ ಗಮನಿಸಬೇಕು ಎಂದು ತಜ್ಞರು ಸಲಹೆ ನೀಡುತ್ತಾರೆ.

ಭಾರತದಲ್ಲಿ ಲಭ್ಯವಿರುವ ಮ್ಯೂಚುವಲ್‌ ಫಂಡ್‌ನ ವಿಧಗಳು

ಈಕ್ವಿಟಿ ಫಂಡ್‌ (Equity Funds): ಈ ಫಂಡ್‌ ಮುಖ್ಯವಾಗಿ ಕಂಪೆನಿಗಳ ಸ್ಟಾಕ್‌ಗಳು / ಷೇರುಗಳಲ್ಲಿ ಹೂಡಿಕೆ ಮಾಡುತ್ತದೆ. ಇದು ದೀರ್ಘಕಾಲೀನ ಹೂಡಿಕೆಗೆ ಸೂಕ್ತ ಮತ್ತು ಹೆಚ್ಚಿನ ಅಪಾಯವನ್ನು ಹೊಂದಿವೆ. ಇದರ ಮೂಲಕ ಕಂಪೆನಿಗಳ ಷೇರುಗಳಲ್ಲಿ ಹೂಡಿಕೆ ಮಾಡಲಾಗುತ್ತದೆ. ಅವು ಹೆಚ್ಚಿನ ಆದಾಯವನ್ನು ನೀಡುವ ಜತೆಗೆ ಆದರೆ ಹೆಚ್ಚಿನ ಅಪಾಯವನ್ನು ಹೊಂದಿರುತ್ತವೆ. ಈಕ್ವಿಟಿ ಫಂಡ್‌ಗಳನ್ನು ಲಾರ್ಜ್ ಕ್ಯಾಪ್, ಮಿಡ್ ಕ್ಯಾಪ್, ಸ್ಮಾಲ್ ಕ್ಯಾಪ್, ಬ್ಯಾಂಕಿಂಗ್, ತಂತ್ರಜ್ಞಾನ, ಇತ್ಯಾದಿ ಆಧಾರದ ಮೇಲೆ ಮತ್ತಷ್ಟು ವರ್ಗೀಕರಿಸಬಹುದು.

ಡೆಬ್ಟ್ ಫಂಡ್ (Debt Fund): ಡೆಬ್ಟ್ ಫಂಡ್ ಪ್ರಾಥಮಿಕವಾಗಿ ಬಾಂಡ್‌ಗಳು, ಸರ್ಕಾರಿ ಸೆಕ್ಯುರಿಟಿಗಳಂತಹ ಸ್ಥಿರ-ಆದಾಯದ ಸೆಕ್ಯುರಿಟಿಗಳಲ್ಲಿ ಹೂಡಿಕೆ ಮಾಡುತ್ತದೆ. ಈಕ್ವಿಟಿ ಫಂಡ್‌ಗೆ ಹೋಲಿಸಿದರೆ ನಿಯಮಿತ ಆದಾಯ ಮತ್ತು ಕಡಿಮೆ ಅಪಾಯವನ್ನು ಬಯಸುವ ಹೂಡಿಕೆದಾರರಿಗೆ ಇದು ಸೂಕ್ತ.

ಹೈಬ್ರಿಡ್ ಫಂಡ್ (Hybrid Funds): ಬ್ಯಾಲೆನ್ಸ್ಡ್ ಫಂಡ್ (Balanced funds) ಎಂದೂ ಕರೆಯಲ್ಪಡುವ ಇದರಲ್ಲಿ ಈಕ್ವಿಟಿ ಮತ್ತು ಡೆಬ್ಟ್ ಫಂಡ್‌ಗಳಲ್ಲಿ ಹೂಡಿಕೆ ಮಾಡಲಾಗುತ್ತದೆ. ತುಲನಾತ್ಮಕವಾಗಿ ಕಡಿಮೆ ಅಪಾಯದೊಂದಿಗೆ ಮಧ್ಯಮ ಆದಾಯವನ್ನು ಬಯಸುವ ಹೂಡಿಕೆದಾರರು ಇದನ್ನು ಆಯ್ಕೆ ಮಾಡಬಹುದು.

ಇಂಡಕ್ಸ್‌ ಫಂಡ್‌ (Index Funds): ಇದು ನಿರ್ದಿಷ್ಟ ಮಾರುಕಟ್ಟೆ ಸೂಚ್ಯಂಕದಂತೆ ಅದೇ ಪ್ರಮಾಣದಲ್ಲಿ ಅದೇ ಸ್ಟಾಕ್ ಗಳಲ್ಲಿ ಹೂಡಿಕೆ ಮಾಡುವ ಯೋಜನೆ. ಸೂಚ್ಯಂಕಕ್ಕೆ ಹೋಲುವ ಆದಾಯವನ್ನು ನೀಡುವ ಗುರಿಯನ್ನು ಹೊಂದಿದೆ.

ಸೆಕ್ಟರಲ್‌ ಫಂಡ್‌ (Sectoral Funds): ಬ್ಯಾಂಕಿಂಗ್, ಐಟಿ, ಆರೋಗ್ಯ ರಕ್ಷಣೆ ಮುಂತಾದ ನಿರ್ದಿಷ್ಟ ಕ್ಷೇತ್ರಗಳ ಮೇಲೆ ಹೂಡಿಕೆ ಮಾಡುವ ವಿಧಾನ ಇದು. ಇದು ಹೆಚ್ಚಿನ ಅಪಾಯವನ್ನು ಹೊಂದಿದೆ.

ಥೀಮಾಟಿಕ್‌ ಫಂಡ್‌ (Thematic Funds): ಮೂಲಸೌಕರ್ಯ ಅಥವಾ ತಂತ್ರಜ್ಞಾನದಂತಹ ನಿರ್ದಿಷ್ಟ ವಿಷಯಗಳು ಅಥವಾ ಪ್ರವೃತ್ತಿಗಳಲ್ಲಿ ಹೂಡಿಕೆ ಮಾಡಲಾಗುತ್ತದೆ. ಇದರಲ್ಲಿಯೂ ಅಪಾಯ ಸಾಧ್ಯತೆ ಅಧಿಕ.

ಟ್ಯಾಕ್ಸ್‌ ಸೇವಿಂಗ್‌ ಫಂಡ್‌ (Tax Saving Funds): ಈ ಈಕ್ವಿಟಿ ಲಿಂಕ್ಡ್ ಸೇವಿಂಗ್ಸ್ ಸ್ಕೀಮ್‌ (Equity Linked Savings Schemes) ಆದಾಯ ತೆರಿಗೆ ಕಾಯ್ದೆಯ ಸೆಕ್ಷನ್ 80 ಸಿ ಅಡಿಯಲ್ಲಿ ತೆರಿಗೆ ಪ್ರಯೋಜನಗಳನ್ನು ನೀಡುತ್ತವೆ. ಇದರಲ್ಲಿ ಈಕ್ವಿಟಿಯಲ್ಲಿ ಹೂಡಿಕೆ ಮಾಡಲಾಗುತ್ತದೆ ಮತ್ತು ಮೂರು ವರ್ಷಗಳ ಲಾಕ್-ಇನ್ ಅವಧಿಯನ್ನು ಹೊಂದಿರುತ್ತದೆ.

ಲಿಕ್ವಿಡ್ ಫಂಡ್ (Liquid Funds): ಲಿಕ್ವಿಡ್ ಫಂಡ್‌ 91 ದಿನಗಳಲ್ಲಿ ಮುಕ್ತಾಯಗೊಳ್ಳುವ ಅಲ್ಪಾವಧಿಯ ಹೂಡಿಕೆಯಾಗಿದೆ. ಅಲ್ಪಾವಧಿಯ ಹೂಡಿಕೆದಾರರಿಗೆ ಇದು ಸೂಕ್ತ.

ಗಿಲ್ಟ್‌ ಫಂಡ್‌ (Gilt Funds): ಇದು ಉಳಿದ ಎಲ್ಲ ಹೂಡಿಕೆಗಳಿಗೆ ಹೋಲಿಸಿದರೆ ಅತ್ಯಂತ ಸುರಕ್ಷಿತ ಎಂದೇ ಹೇಳಬಹುದು. ಹೂಡಿಕೆ ಮಾಡಿದ ಹೆಚ್ಚಿನ ಹಣಗಳು ಸರ್ಕಾರ ಅಭಯವಿರುವ ಕಡೆಯೇ ಇರುತ್ತವೆ. ಇಲ್ಲಿ ಹಣ ಕಳೆದುಕೊಳ್ಳುವ ಆತಂಕ ಇರುವುದಿಲ್ಲ.

ಇಂಟರ್‌ನ್ಯಾಷನಲ್‌ ಫಂಡ್‌ (International Funds): ಈ ಸ್ಕೀಮ್‌ ಮೂಲಕ ಭಾರತದ ಹೊರಗಿನ ಸ್ವತ್ತುಗಳಲ್ಲಿ ಹೂಡಿಕೆ ಮಾಡಲಾಗುತ್ತದೆ. ಇದು ಜಾಗತಿಕ ಮಾರುಕಟ್ಟೆಗಳಲ್ಲಿನ ವೈವಿಧ್ಯತೆಯನ್ನು ನೀಡುತ್ತದೆ. ಸ್ಟಾಕ್, ಬಾಂಡ್ ಅಥವಾ ವಿದೇಶಿ ಕಂಪನಿಗಳಲ್ಲಿ ಹೂಡಿಕೆ ಮಾಡಬಹುದು.

ಇದನ್ನೂ ಓದಿ: Money Guide: ನಿಮ್ಮ ಷೇರಿನಿಂದಲೂ ಸಾಲ ಪಡೆದುಕೊಳ್ಳಬಹುದು; ಹೇಗೆ ಎನ್ನುವ ವಿವರ ಇಲ್ಲಿದೆ

Continue Reading

ವಿದೇಶ

Workers protest: ಇಸ್ರೇಲ್​ ಜತೆಗಿನ ಒಪ್ಪಂದ ವಿರೋಧಿಸಿ ಪ್ರತಿಭಟಿಸಿದ್ದ ಗೂಗಲ್​​ನ 28​ ಉದ್ಯೋಗಿಗಳ ವಜಾ

Workers protest: ಸಿಯಾಟಲ್, ನ್ಯೂಯಾರ್ಕ್ ಮತ್ತು ಕ್ಯಾಲಿಫೋರ್ನಿಯಾದ ಸನ್ನಿವೇಲ್‌ನಲ್ಲಿರುವ ಗೂಗಲ್ ಕಂಪೆನಿಯ ಕಚೇರಿಗಳಲ್ಲಿ ಪ್ರತಿಭಟನೆ ನಡೆಸಿದ ಒಂಬತ್ತು ಉದ್ಯೋಗಿಗಳನ್ನು ಬಂಧಿಸಲಾಗಿದ್ದು, ಇದೀಗ 28 ಮಂದಿಯನ್ನು ವಜಾಗೊಳಿಸಲಾಗಿದೆ.

VISTARANEWS.COM


on

By

Workers protest
Koo

ನ್ಯೂಯಾರ್ಕ್: ಇಸ್ರೇಲ್ ನೊಂದಿಗಿನ (Israel) ಕಂಪೆನಿ ಒಪ್ಪಂದವನ್ನು ವಿರೋಧಿಸಿ ಪ್ರತಿಭಟನೆ ನಡೆಸಿದ 28 ಉದ್ಯೋಗಿಗಳನ್ನು (Workers protest) ಟೆಕ್ ದೈತ್ಯ ಗೂಗಲ್ (google) ವಜಾಗೊಳಿಸಿದೆ. ಇಸ್ರೇಲ್ ಸರ್ಕಾರ ಮತ್ತು ಸೇನೆಗೆ ಕ್ಲೌಡ್ ಮತ್ತು ಕೃತಕ ಬುದ್ಧಿಮತ್ತೆ ಸೇವೆಗಳನ್ನು ಒದಗಿಸಲು ಗೂಗಲ್ ಅಮೆಜಾನ್ ನೊಂದಿಗೆ (Amazon) ಸೇರಿ 1.2 ಬಿಲಿಯನ್ ಡಾಲರ್ ನ ಒಪ್ಪಂದ ಮಾಡಿಕೊಂಡಿತ್ತು.

ಇಸ್ರೇಲ್ ಸರ್ಕಾರದೊಂದಿಗೆ ಗೂಗಲ್ ಮಾಡಿರುವ 1.2 ಬಿಲಿಯನ್ ಡಾಲರ್ ಜಂಟಿ ಒಪ್ಪಂದವಾದ ಪ್ರಾಜೆಕ್ಟ್ ನಿಂಬಸ್‌ (Project Nimbus) ಅನ್ನು ವಿರೋಧಿಸಿ ಸಿಯಾಟಲ್, ನ್ಯೂಯಾರ್ಕ್ (New York) ಮತ್ತು ಕ್ಯಾಲಿಫೋರ್ನಿಯಾದ (California) ಸನ್ನಿವೇಲ್‌ನಲ್ಲಿರುವ ಕಂಪೆನಿಯ ಕಚೇರಿಗಳಲ್ಲಿ ಕಾರ್ಮಿಕರು ಏಪ್ರಿಲ್ 16 ರಂದು ಪ್ರತಿಭಟನೆ ನಡೆಸಿದ್ದರು.

ಸಿಯಾಟಲ್, ನ್ಯೂಯಾರ್ಕ್ ಮತ್ತು ಕ್ಯಾಲಿಫೋರ್ನಿಯಾದ ಸನ್ನಿವೇಲ್‌ನಲ್ಲಿರುವ ಕಂಪನಿಯ ಕಚೇರಿಗಳಲ್ಲಿ ಮಂಗಳವಾರ ರಾತ್ರಿ ಧರಣಿ ನಡೆಸಿದ ಒಂಬತ್ತು ಉದ್ಯೋಗಿಗಳನ್ನು ಬಂಧಿಸಲಾಗಿತ್ತು. ಇದೀಗ 28 ಮಂದಿಯನ್ನು ವಜಾ ಮಾಡಲಾಗಿದೆ.

ಇದನ್ನೂ ಓದಿ: Infosys Q4 Result: ಇನ್ಫೋಸಿಸ್‌ಗೆ 7,969 ಕೋಟಿ ರೂ. ನಿವ್ವಳ ಲಾಭ; 28 ರೂ.ಗಳ ಡಿವಿಡೆಂಡ್‌ ಘೋಷಣೆ

ಒಂಬತ್ತು ಮಂದಿ ಬಂಧನ

ಪ್ರಾಜೆಕ್ಟ್ ನಿಂಬಸ್ ವಿರುದ್ಧ ನೋ ಟೆಕ್ ಫಾರ್ ಅಪಾರ್ತೀಡ್ ಸಂಘಟನೆಯ ನೇತೃತ್ವದಲ್ಲಿ ಗೂಗಲ್ ಸಿಬ್ಬಂದಿ ಪ್ರತಿಭಟನೆ ನಡೆಸಿದ್ದರು. ಗೂಗಲ್ ಕ್ಲೌಡ್ ಸಿಇಒ ಥಾಮಸ್ ಕುರಿಯನ್ ಅವರ ನ್ಯೂಯಾರ್ಕ್ ಕಚೇರಿ ಹಾಗೂ ಕ್ಯಾಲಿಫೋರ್ನಿಯಾದ ಸನ್ನಿವೇಲ್‌ನಲ್ಲಿರುವ ಕಂಪೆನಿಯ ಕಚೇರಿಗಳಲ್ಲಿ ನಡೆದ ಪ್ರತಿಭಟನೆ ವೇಳೆ ಒಂಬತ್ತು ಗೂಗಲ್ ಉದ್ಯೋಗಿಗಳು ಅತಿಕ್ರಮಣ ಮಾಡಿದ್ದಾರೆ ಎಂದು ಆರೋಪಿಸಿ ಬಂಧಿಸಲಾಗಿದೆ.

ಇಸ್ರೇಲ್ ಜೊತೆಗಿನ ಒಪ್ಪಂದ ಏನು ?

ಇಸ್ರೇಲ್ ಸರ್ಕಾರ ಮತ್ತು ಮಿಲಿಟರಿಗೆ ಕ್ಲೌಡ್ ಕಂಪ್ಯೂಟಿಂಗ್ ಸೇವೆಗಳನ್ನು ನೀಡಲು ಗೂಗಲ್ ಮತ್ತು ಅಮೆಜಾನ್ ಜಂಟಿಯಾಗಿ 1.2 ಶತಕೋಟಿ ಡಾಲರ್ ಒಪ್ಪಂದ ಮಾಡಿಕೊಂಡಿತ್ತು. ಇದರಲ್ಲಿ ಕೃತಕ ಬುದ್ಧಿಮತ್ತೆ ಉಪಕರಣಗಳು, ಡೇಟಾ ಕೇಂದ್ರಗಳು ಮತ್ತು ಇತರ ಕ್ಲೌಡ್ ಮೂಲಸೌಕರ್ಯಗಳು ಸೇರಿವೆ.

ತನಿಖೆ ಮುಂದುವರಿಯಲಿದೆ

ಗೂಗಲ್ ಉದ್ಯೋಗಿಗಳ ಪ್ರತಿಭಟನೆ ಬಳಿಕ ಸಂದೇಶ ಕಳುಹಿಸಿರುವ ಗ್ಲೋಬಲ್ ಸೆಕ್ಯುರಿಟಿಯ ಗೂಗಲ್‌ನ ಉಪಾಧ್ಯಕ್ಷ ಕ್ರಿಸ್ ರಾಕೋವ್, ಪ್ರಕರಣದ ತನಿಖೆಯ ಬಳಿಕ ಇದೀಗ ಇಪ್ಪತ್ತೆಂಟು ಉದ್ಯೋಗಿಗಳನ್ನು ವಜಾಗೊಳಿಸಲಾಗಿದೆ. ಈ ಕುರಿತು ತನಿಖೆಯನ್ನು ಮುಂದುವರಿಸುತ್ತೇವೆ ಮತ್ತು ಅಗತ್ಯವಿರುವಂತೆ ಕ್ರಮವನ್ನು ಕೈಗೊಳ್ಳುತ್ತೇವೆ ಎಂದು ತಿಳಿಸಿದ್ದಾರೆ.

ಬಂಧಿತರಾಗಿರುವ ಕೆಲವರನ್ನು ಆಡಳಿತಾತ್ಮಕ ರಜೆಯಲ್ಲಿ ಇರಿಸಲಾಗಿದೆ. ಮುಂದೆ ಅವರು ಕೆಲಸಕ್ಕೆ ಮರಳಲು ಹೆಚ್ ಆರ್ ಮೂಲಕ ಸಂಪರ್ಕಿಸುವವರೆಗೆ ಕಾಯಲು ತಿಳಿಸಲಾಗಿದೆ ಎಂದು ಅವರು ಹೇಳಿದ್ದಾರೆ.

ಈ ನಡುವೆ ನೋ ಟೆಕ್ ಫಾರ್ ವರ್ಣಭೇದ ನೀತಿಯು ಹೇಳಿಕೆಯನ್ನು ಬಿಡುಗಡೆ ಮಾಡಿದ್ದು, ಗೂಗಲ್ 28 ಮಂದಿ ಉದ್ಯೋಗಿಗಳನ್ನು ನಿರ್ದಾಕ್ಷಿಣ್ಯವಾಗಿ ವಜಾ ಮಾಡಿದೆ. 10 ಗಂಟೆಗಳ ಧರಣಿಯಲ್ಲಿ ನೇರವಾಗಿ ಭಾಗವಹಿಸದೇ ಇರುವವರೂ ಇದರಲ್ಲಿ ಇದ್ದಾರೆ. ಕಳೆದ ಮೂರು ವರ್ಷಗಳಿಂದ ಪ್ರಾಜೆಕ್ಟ್ ನಿಂಬಸ್ ವಿರುದ್ಧ ಗುಂಪು ಸಂಘಟಿಸಲಾಗುತ್ತಿದೆ. ಅವರ ಕಾಳಜಿಗಳ ಬಗ್ಗೆ ಎಕ್ಸಿಕ್ಯೂಟಿವ್‌ನಿಂದ ಇದುವರೆಗೂ ಏನೂ ಕೇಳಿಲ್ಲ ಎಂದು ಅದು ಹೇಳಿದೆ.

ಗೂಗಲ್ ಏನು ಹೇಳಿದೆ?

ಕಚೇರಿಗಳಲ್ಲಿ ನಡೆದ ಪ್ರತಿಭಟನೆಗಳ ವರದಿಗಳ ಬಗ್ಗೆ ನೋಡಿದ್ದೀರಿ, ಕೇಳಿದ್ದೀರಿ. ದುರದೃಷ್ಟವಶಾತ್ ಹಲವಾರು ಉದ್ಯೋಗಿಗಳು ನ್ಯೂಯಾರ್ಕ್ ಮತ್ತು ಸನ್ನಿವೇಲ್‌ನಲ್ಲಿರುವ ಕಟ್ಟಡಗಳಿಗೆ ಸೇರಿದ ಆಸ್ತಿಗೆ ಹಾನಿಗೊಳಿಸಿದ್ದಾರೆ. ಇತರ ಸಿಬ್ಬಂದಿಯ ಕೆಲಸಕ್ಕೆ ಅಡ್ಡಿ ಮಾಡಿದ್ದಾರೆ. ಅವರ ನಡವಳಿಕೆಯು ಸ್ವೀಕಾರಾರ್ಹವಲ್ಲ. ಇದು ಇತರ ಸಹೋದ್ಯೋಗಿಗಳಲ್ಲಿ ಬೆದರಿಕೆಯನ್ನುಂಟು ಮಾಡಿತು. ಹೀಗಾಗಿ ಪ್ರತಿಭಟನೆಯಲ್ಲಿ ಪಾಲ್ಗೊಂಡ ಉದ್ಯೋಗಿಗಳನ್ನು ತನಿಖೆಯ ಅಡಿಯಲ್ಲಿ ಇರಿಸಿದ್ದೇವೆ. ನಮ್ಮ ಸಿಸ್ಟಮ್‌ಗಳಿಗೆ ಅವರ ಪ್ರವೇಶವನ್ನು ಕಡಿತಗೊಳಿಸಿದ್ದೇವೆ. ತನಿಖೆಯ ಬಳಿಕ ಇಪ್ಪತ್ತೆಂಟು ಉದ್ಯೋಗಿಗಳನ್ನು ವಜಾಗೊಳಿಸಲಾಗಿದೆ. ಇನ್ನೂ ತನಿಖೆ ಮುಂದುವರಿಯಲಿದೆ. ಅಗತ್ಯವಿರುವಂತೆ ಕ್ರಮ ತೆಗೆದುಕೊಳ್ಳುತ್ತೇವೆ.

ಈ ರೀತಿಯ ವರ್ತನೆಗೆ ನಮ್ಮ ಕೆಲಸದ ಸ್ಥಳದಲ್ಲಿ ಸ್ಥಾನವಿಲ್ಲ ಮತ್ತು ನಾವು ಅದನ್ನು ಸಹಿಸುವುದಿಲ್ಲ. ನಮ್ಮ ನೀತಿ ಸಂಹಿತೆ ಮತ್ತು ಕಿರುಕುಳ, ತಾರತಮ್ಯ, ಪ್ರತೀಕಾರ, ನಡವಳಿಕೆಯ ಮಾನದಂಡಗಳು ಮತ್ತು ಕಾರ್ಯಸ್ಥಳದ ಕಾಳಜಿಗಳನ್ನು ಒಳಗೊಂಡಂತೆ ಎಲ್ಲಾ ಉದ್ಯೋಗಿಗಳು ಅನುಸರಿಸಬೇಕಾದ ಬಹು ನೀತಿಗಳನ್ನು ಇದು ಸ್ಪಷ್ಟವಾಗಿ ಉಲ್ಲಂಘಿಸುತ್ತದೆ. ನೀತಿಗಳನ್ನು ಉಲ್ಲಂಘಿಸುವವರ ವಿರುದ್ಧ ಕಂಪೆನಿಯು ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳುತ್ತದೆ ಎಂದು ಹೇಳಿದೆ.

Continue Reading

ವಾಣಿಜ್ಯ

Wipro Q4 Results: ಐಟಿ ದೈತ್ಯ ವಿಪ್ರೋದ ನಿವ್ವಳ ಲಾಭದಲ್ಲಿ ಶೇ. 8ರಷ್ಟು ಕುಸಿತ

Wipro Q4 Results: ಐಟಿ ದೈತ್ಯ ವಿಪ್ರೋದ ಆದಾಯದಲ್ಲಿ ಕುಸಿತ ಕಂಡು ಬಂದಿದೆ. ಮಾರ್ಚ್ 2024 ತ್ರೈಮಾಸಿಕದ ನಿವ್ವಳ ಲಾಭ ಶೇ. 8ರಷ್ಟು ಕುಸಿತ ಕಂಡು 2,835 ಕೋಟಿ ರೂ.ಗೆ ತಲುಪಿದೆ. ಹಿಂದಿನ ವರ್ಷದ ಇದೇ ಅವಧಿಯಲ್ಲಿ 23,190.3 ಕೋಟಿ ರೂ. ಆದಾಯ ಇತ್ತು. ಈ ವರ್ಷ ಇದು 22,208.3 ಕೋಟಿ ರೂ.ಗೆ ಇಳಿದಿದೆ. ಕೆಲವು ದಿನಗಳ ಹಿಂದೆಯಷ್ಟೇ ವಿಪ್ರೋದ ಸಿಇಒ, ಎಂ.ಡಿ. ಥಿಯೆರ್ರಿ ಡೆಲಾಪೋರ್ಟೆ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಅವರ ಸ್ಥಾನಕ್ಕೆ ಭಾರತ ಮೂಲದ ಶ್ರೀನಿವಾಸ್ (ಶ್ರೀನಿ) ಪಲ್ಲಿಯಾ ಅವರನ್ನು ನೇಮಕ ಮಾಡಲಾಗಿದೆ.

VISTARANEWS.COM


on

Wipro Q4 Results
Koo

ನವದೆಹಲಿ: ಐಟಿ ದೈತ್ಯ ವಿಪ್ರೋ (Wipro)ದ ಮಾರ್ಚ್ 2024 ತ್ರೈಮಾಸಿಕದ (ನಾಲ್ಕನೇ ತ್ರೈ ಮಾಸಿಕ) ನಿವ್ವಳ ಲಾಭ ಶೇ. 8ರಷ್ಟು ಕುಸಿತ ಕಂಡು 2,835 ಕೋಟಿ ರೂ.ಗೆ ತಲುಪಿದೆ ಎಂದು ವರದಿ ತಿಳಿಸಿದೆ. 2024ರ ಜನವರಿ-ಮಾರ್ಚ್ ಅವಧಿಯಲ್ಲಿ ವಿಪ್ರೋದ ಆದಾಯ 22,208.3 ಕೋಟಿ ರೂ.ಗೆ ಇಳಿದಿದೆ. ಹಿಂದಿನ ವರ್ಷದ ಇದೇ ಅವಧಿಯಲ್ಲಿ 23,190.3 ಕೋಟಿ ರೂ. ಆದಾಯ ಇತ್ತು (Wipro Q4 Results).

ಕಳೆದ ವರ್ಷ ಇದೇ ಅವಧಿಯಲ್ಲಿ ವಿಪ್ರೋ 3,074 ಕೋಟಿ ರೂ. ನಿವ್ವಳ ಲಾಭ ದಾಖಲಿಸಿತ್ತು. ವಿಪ್ರೋ ನಿರ್ದೇಶಕರ ಮಂಡಳಿಯು 1 ರೂ.ಗಳ ಮಧ್ಯಂತರ ಲಾಭಾಂಶ (ಡಿವಿಡೆಂಡ್‌)ವನ್ನು ಘೋಷಿಸಿದೆ. ಇದನ್ನು 2023-24ರ ಹಣಕಾಸು ವರ್ಷದ ಅಂತಿಮ ಲಾಭಾಂಶವೆಂದು ಪರಿಗಣಿಸಲಾಗುವುದು ಎಂದು ಫೈಲಿಂಗ್‌ನಲ್ಲಿ ತಿಳಿಸಲಾಗಿದೆ. ಡಾಲರ್ ಲೆಕ್ಕದಲ್ಲಿ ಹೇಳುವುದಾದರೆ, ವಿಪ್ರೋದ ಐಟಿ ಸೇವೆಗಳ ಆದಾಯವು 2,657.4 ಮಿಲಿಯನ್ ಡಾಲರ್ ಆಗಿದೆ.

ಜೂನ್ 30ಕ್ಕೆ ಕೊನೆಗೊಳ್ಳುವ ತ್ರೈ ಮಾಸಿಕದಲ್ಲಿ ನಮ್ಮ ಐಟಿ ಸೇವೆಗಳ ವ್ಯವಹಾರ ವಿಭಾಗದಿಂದ ಆದಾಯವು 2.62 ಬಿಲಿಯನ್ ಡಾಲರ್‌ನಿಂದ 2.67 ಬಿಲಿಯನ್ ಡಾಲರ್ ಆಸುಪಾಸಿನಲ್ಲಿರಲಿದೆ ಎನ್ನುವ ನಿರೀಕ್ಷೆ ಇದೆ. ವಿಪ್ರೋದ ಸ್ವಯಂ ಪ್ರೇರಿತ ಹೊರಗುಳಿಯುವಿಕೆಯು 12 ತಿಂಗಳ ಆಧಾರದ ಮೇಲೆ ಶೇಕಡಾ 14.2ರಷ್ಟಿದೆ. ಇದು ಹಿಂದಿನ ಡಿಸೆಂಬರ್ 2023ರ ತ್ರೈ ಮಾಸಿಕದಲ್ಲಿ ವರದಿಯಾದ ಶೇಕಡಾ 12.3ಕ್ಕಿಂತ ಹೆಚ್ಚು. 2023-24ರ ಆರ್ಥಿಕ ವರ್ಷದಲ್ಲಿ ವಿಪ್ರೋದ ಉದ್ಯೋಗಿಗಳ ಸಂಖ್ಯೆ ಶೇಕಡಾ 9.5ರಷ್ಟು ಕುಸಿದು 2,34,054ಕ್ಕೆ ತಲುಪಿದೆ ಎಂದು ಮೂಲಗಳು ತಿಳಿಸಿವೆ.

ವಿಪ್ರೋ ಸಿಇಒ ಮತ್ತು ವ್ಯವಸ್ಥಾಪಕ ನಿರ್ದೇಶಕ ಶ್ರೀನಿ ಪಲ್ಲಿಯಾ ಮಾತನಾಡಿ, “2024ರ ಹಣಕಾಸು ವರ್ಷವು ನಮ್ಮ ಉದ್ಯಮಕ್ಕೆ ಸವಾಲಿನ ವರ್ಷವೆಂದು ಸಾಬೀತಾಗಿದೆ. ಅದಾಗ್ಯೂ ಮುಂದೆ ಇರುವ ಅವಕಾಶಗಳ ಬಗ್ಗೆ ನಾವು ಭರವಸೆ ಹೊಂದಿದ್ದೇನೆವೆ. ನಾವು ಪ್ರಮುಖ ತಾಂತ್ರಿಕ ಬದಲಾವಣೆಯ ಅಂಚಿನಲ್ಲಿದ್ದೇವೆ. ಕೃತಕ ಬುದ್ಧಿಮತ್ತೆ, ನಮ್ಮ ಗ್ರಾಹಕರ ಅಗತ್ಯಗಳಿಗೆ ಒತ್ತು ನೀಡಲಿದ್ದೇವೆʼʼ ಎಂದು ಹೇಳಿದ್ದಾರೆ.

ಕೆಲವು ದಿನಗಳ ಹಿಂದೆಯಷ್ಟೇ ವಿಪ್ರೋದ ಸಿಇಒ, ಎಂ.ಡಿ. ಥಿಯೆರ್ರಿ ಡೆಲಾಪೋರ್ಟೆ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಶ್ರೀನಿವಾಸ್ (ಶ್ರೀನಿ) ಪಲ್ಲಿಯಾ ಹೊಸ ಸಿಇಒ ಮತ್ತು ವ್ಯವಸ್ಥಾಪಕ ನಿರ್ದೇಶಕರಾಗಿ ಆಯ್ಕೆಯಾಗಿದ್ದರು. ಶ್ರೀನಿವಾಸ್ ಮೂರು ದಶಕಗಳಿಂದ ವಿಪ್ರೋದಲ್ಲಿದ್ದಾರೆ ಮತ್ತು ಇತ್ತೀಚೆಗೆ ವಿಪ್ರೋದ ಅತಿದೊಡ್ಡ ಮತ್ತು ವೇಗವಾಗಿ ಬೆಳೆಯುತ್ತಿರುವ ಕಾರ್ಯತಂತ್ರದ ಮಾರುಕಟ್ಟೆಯಾದ ಅಮೇರಿಕಾಸ್ 1ರ ಸಿಇಒ ಆಗಿ ಅಧಿಕಾರ ಸ್ವೀಕರಿಸಿದ್ದರು. ಜತೆಗೆ ವಿಪ್ರೋ ಕಾರ್ಯನಿರ್ವಾಹಕ ಮಂಡಳಿಯ ಸದಸ್ಯರಾಗಿದ್ದಾರೆ.

ಇದನ್ನೂ ಓದಿ: Infosys Q4 Result: ಇನ್ಫೋಸಿಸ್‌ಗೆ 7,969 ಕೋಟಿ ರೂ. ನಿವ್ವಳ ಲಾಭ; 28 ರೂ.ಗಳ ಡಿವಿಡೆಂಡ್‌ ಘೋಷಣೆ

ವಿಪ್ರೋ ಕಳೆದ ತಿಂಗಳು ಆರು ಉದ್ಯೋಗಿಗಳನ್ನು ಹಿರಿಯ ಉಪಾಧ್ಯಕ್ಷ ಸ್ಥಾನಕ್ಕೆ ನೇಮಿಸಿತ್ತು ಮತ್ತು ಇತರ 25 ಉದ್ಯೋಗಿಗಳಿಗೆ ಉಪಾಧ್ಯಕ್ಷ ಸ್ಥಾನ ನೀಡಿ ಭಡ್ತಿ ಒದಗಿಸಿತ್ತು. ಹಣಕಾಸು ಮುಖ್ಯಸ್ಥ ಜತಿನ್ ದಲಾಲ್, ಚೀಫ್‌ ಗ್ರೋತ್‌ ಆಫೀಸರ್‌ ಸ್ಟೆಫನಿ ಟ್ರೌಟ್ಮನ್ ಮತ್ತು ಡಿಜಿಟಲ್ ಮತ್ತು ಕ್ಲೌಡ್ ಮುಖ್ಯಸ್ಥ ಭರತ್ ನಾರಾಯಣನ್ ಸೇರಿದಂತೆ ಅನೇಕ ಹಿರಿಯ ಕಾರ್ಯನಿರ್ವಾಹಕರು ಕಳೆದ ವರ್ಷದಲ್ಲಿ ವಿಪ್ರೋವನ್ನು ತೊರೆದಿದ್ದರು.

Continue Reading

ಪ್ರಮುಖ ಸುದ್ದಿ

Narayana Murthy : 4.2 ಕೋಟಿ ರೂಪಾಯಿ ಡಿವಿಡೆಂಡ್​ ಜೇಬಿಗಿಳಿಸಿದ ನಾರಾಯಣ ಮೂರ್ತಿಯ 5 ತಿಂಗಳ ಮೊಮ್ಮಗ!

Narayana Murthy : ಕಳೆದ ವರ್ಷ ನವೆಂಬರ್ 10ರಂದು ಬೆಂಗಳೂರಿನಲ್ಲಿ ಜನಿಸಿದ ಏಕಾಗ್ರ ರೋಹನ್ ಮೂರ್ತಿ, ನಾರಾಯಣ ಮೂರ್ತಿ ಮತ್ತು ಸುಧಾ ಮೂರ್ತಿ ಅವರ ಮೂರನೇ ಮೊಮ್ಮಗಳು. ಏಕಾಗ್ರಹ ರೋಹನ್ ಮೂರ್ತಿ ಮತ್ತು ಅಪರ್ಣಾ ಕೃಷ್ಣನ್ ಅವರ ಪುತ್ರ. ಕೃಷ್ಣ ಮತ್ತು ಅನೌಷ್ಕಾ, ಅಕ್ಷತಾ ಮೂರ್ತಿ ಮತ್ತು ಯುಕೆ ಪ್ರಧಾನಿ ರಿಷಿ ಸುನಕ್ ಅವರ ಪುತ್ರಿಯರಾಗಿದ್ದಾರೆ.

VISTARANEWS.COM


on

Narayana Murthy
Koo

ಬೆಂಗಳೂರು: ಇನ್ಫೋಸಿಸ್ ಸಂಸ್ಥಾಪಕ ನಾರಾಯಣ ಮೂರ್ತಿ (Narayana Murthy) ಅವರ ಮೊಮ್ಮಗ ಏಕಾಗ್ರ ರೋಹನ್ ಕೇವಲ ಐದು ತಿಂಗಳ ವಯಸ್ಸಿನಲ್ಲಿ ಇನ್ಫೋಸಿಸ್​ ಸಂಸ್ಥೆಯಿಂದ 4.2 ಕೋಟಿ ರೂ.ಗಳ ಲಾಭಾಂಶವನ್ನು ಪಡೆದುಕೊಂಡಿದ್ದಾರೆ. ನಾರಾಯಣ ಮೂರ್ತಿ ಅವರು ಕಳೆದ ತಿಂಗಳು ಇನ್ಫೋಸಿಸ್​​ನ 240 ಕೋಟಿ ಮೌಲ್ಯದ 15 ಲಕ್ಷ ಷೇರುಗಳನ್ನು (0.04% ಪಾಲನ್ನು ಪುಟ್ಟ ಬಾಲಕನಿಗೆ ನೀಡಿದ್ದರು. ಆ ಷೇರುಗಳಿಗೆ ಈಗ ದೊಡ್ಡ ಮೊತ್ತದ ಡಿವಿಡೆಂಡ್​ ಸಿಕ್ಕಿದೆ.

ಎಕ್ಸ್​ಚೇಂಜ್​ ಫೈಲಿಂಗ್ ಪ್ರಕಾರ, ಏಕಾಗ್ರ ಇನ್ಫೋಸಿಸ್​ನ 15,00,000 ಷೇರುಗಳನ್ನು ಹೊಂದಿದ್ದಾನೆ. ಈ ವ್ಯವಹಾರವನ್ನು “ಆಫ್-ಮಾರ್ಕೆಟ್” ನಡೆಸಲಾಯಿತು ಎಂದು ಫೈಲಿಂಗ್ ಬಹಿರಂಗಪಡಿಸಿದೆ.

ಕಳೆದ ವರ್ಷ ನವೆಂಬರ್ 10ರಂದು ಬೆಂಗಳೂರಿನಲ್ಲಿ ಜನಿಸಿದ ಏಕಾಗ್ರ ರೋಹನ್ ಮೂರ್ತಿ, ನಾರಾಯಣ ಮೂರ್ತಿ ಮತ್ತು ಸುಧಾ ಮೂರ್ತಿ ಅವರ ಮೂರನೇ ಮೊಮ್ಮಗಳು. ಏಕಾಗ್ರಹ ರೋಹನ್ ಮೂರ್ತಿ ಮತ್ತು ಅಪರ್ಣಾ ಕೃಷ್ಣನ್ ಅವರ ಪುತ್ರ. ಕೃಷ್ಣ ಮತ್ತು ಅನೌಷ್ಕಾ, ಅಕ್ಷತಾ ಮೂರ್ತಿ ಮತ್ತು ಯುಕೆ ಪ್ರಧಾನಿ ರಿಷಿ ಸುನಕ್ ಅವರ ಪುತ್ರಿಯರಾಗಿದ್ದಾರೆ.

ಶೇಕಡಾ 30ರಷ್ಟು ಲಾಭ ಹೆಚ್ಚಳ

ಇನ್ಫೋಸಿಸ್ ನಾಲ್ಕನೇ ತ್ರೈಮಾಸಿಕದಲ್ಲಿ ಲಾಭದಲ್ಲಿ 30% ಹೆಚ್ಚಳವನ್ನು ಘೋಷಿಸಿದೆ. ಕಳೆದ ವರ್ಷದ 6,128 ಕೋಟಿ ರೂ.ಗೆ ಹೋಲಿಸಿದರೆ 7,969 ಕೋಟಿ ರೂ.ಗೆ ತಲುಪಿದೆ. ಆದಾಯವು 37,923 ಕೋಟಿ ರೂ.ಗೆ ಸ್ವಲ್ಪ ಏರಿಕೆ ಕಂಡಿದೆ. ಮಾರ್ಚ್ 2024 ಕ್ಕೆ ಕೊನೆಗೊಂಡ ಹಣಕಾಸು ವರ್ಷದಲ್ಲಿ, ಒಟ್ಟು ಲಾಭವು 8.9% ರಷ್ಟು ಏರಿಕೆಯಾಗಿ 26,233 ಕೋಟಿ ರೂ.ಗೆ ತಲುಪಿದೆ/ ಕಾರ್ಯಾಚರಣೆಗಳಿಂದ ವಾರ್ಷಿಕ ಆದಾಯವು 4.7% ರಷ್ಟು ಏರಿಕೆಯಾಗಿ 1,53,670 ಕೋಟಿ ರೂ.ಗೆ ತಲುಪಿದೆ. ಇನ್ಫೋಸಿಸ್ ಮಂಡಳಿಯು 2024ರ ಹಣಕಾಸು ವರ್ಷದಲ್ಲಿ ಪ್ರತಿ ಷೇರಿಗೆ 20 ರೂ.ಗಳ ಅಂತಿಮ ಲಾಭಾಂಶ ಶಿಫಾರಸು ಮಾಡಿದೆ. ಜೊತೆಗೆ ಪ್ರತಿ ಷೇರಿಗೆ 8 ರೂ.ಗಳ ವಿಶೇಷ ಲಾಭಾಂಶವನ್ನು ಶಿಫಾರಸು ಮಾಡಿದೆ. ಹೆಚ್ಚುವರಿಯಾಗಿ, ಇನ್ಫೋಸಿಸ್ ಜರ್ಮನಿಯ ಇನ್-ಟೆಕ್ ಸಂಸ್ಥೆಯನ್ನು 450 ಮಿಲಿಯನ್ ಯುರೋಗಳ ಒಪ್ಪಂದದಲ್ಲಿ ಸ್ವಾಧೀನಪಡಿಸಿಕೊಳ್ಳಲು ಯೋಜಿಸಿದೆ.

ಇದನ್ನೂ ಓದಿ: CET 2024 Exam: ಗಣಿತ, ಜೀವಶಾಸ್ತ್ರದ ಔಟ್‌ ಆಫ್‌ ಸಿಲಬಸ್‌ ಪ್ರಶ್ನೆ ವಿರುದ್ಧ ದೂರು; ಏಪ್ರಿಲ್‌ 24ಕ್ಕೆ ಸಮಿತಿ ರಚನೆಗೆ ಕೆಇಎ ನಿರ್ಧಾರ

ಮುಂದಿನ ಹಣಕಾಸು ವರ್ಷದಲ್ಲಿ ಇನ್ಫೋಸಿಸ್ 1-3% ಆದಾಯದ ಬೆಳವಣಿಗೆಯನ್ನು ನಿರೀಕ್ಷಿಸುತ್ತದೆ. ಸಂಶೋಧನಾ ಸಂಸ್ಥೆ ಮೋತಿಲಾಲ್ ಓಸ್ವಾಲ್ ಪ್ರಕಾರ, 2025ರ ಹಣಕಾಸು ವರ್ಷದಲ್ಲಿ ಇನ್ಫೋಸಿಸ್ ಆದಾಯ ನಿರೀಕ್ಷೆಗಿಂತ ಕಡಿಮೆಯಾಗಿದೆ. ಆದರೆ ಇನ್ಫೋಸಿಸ್ ಮಧ್ಯಮಾವಧಿಯಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸಬಹುದು ಎಂದು ಅವರು ಊಹೆ ಮಾಡಿದ್ದಾರೆ. ಇನ್ಫೋಸಿಸ್ 2025 ರ ಹಣಕಾಸು ವರ್ಷದ ನಂತರ ವೇಗವಾಗಿ ಬೆಳೆಯಲು ಪ್ರಾರಂಭಿಸಬಹುದು ಎಂದು ಹೇಳಿದೆ. ಟಿಸಿಎಸ್​ನಂತ ಕಂಪನಿಗಳಿಗೆ ಹೋಲಿಸಿದರೆ ಇನ್ಪೋಸಿಸ್​ ಷೇರುಗಳು ಉತ್ತಮವಾಗಿ ಕಾರ್ಯನಿರ್ವಹಿಸುವುದಿಲ್ಲ ಎಂದು ಬಿಸಿನೆಸ್ ಟುಡೇ ವರದಿ ಮಾಡಿದೆ.

Continue Reading
Advertisement
Ballari Lok Sabha constituency Congress candidate e Tukaram Election campaign
ಬಳ್ಳಾರಿ14 mins ago

Lok Sabha Election 2024: ಬಡವರ ಬಾಳು ಬಂಗಾರ ಮಾಡಿದ್ದು ಕಾಂಗ್ರೆಸ್‌: ಈ. ತುಕಾರಾಂ

Lok Sabha Election 2024
Lok Sabha Election 202414 mins ago

Lok Sabha Election 2024: 1 ವೋಟಿಗಾಗಿ ದಟ್ಟ ಕಾಡಿನಲ್ಲಿ 18 ಕಿ.ಮೀ. ನಡೆದ ಚುನಾವಣಾ ಸಿಬ್ಬಂದಿ

Narendra Modi
ಪ್ರಮುಖ ಸುದ್ದಿ24 mins ago

Narendra Modi : ಮತದಾನ ಮಾಡಿದವರಿಗೆ ಥ್ಯಾಂಕ್ಸ್ ಹೇಳಿದ ಮೋದಿ; ಎನ್​ಡಿಎಗೆ ಮತ ನೀಡಿದ್ದಾರೆ ಎಂದ ಪ್ರಧಾನಿ

Lok sabha Election
ರಾಜಕೀಯ44 mins ago

lok Sabha Election : ಮೊದಲ ಹಂತದಲ್ಲಿ ಶೇ.60.3ರಷ್ಟು ಮತದಾನ

Actor Darshan
ಕರ್ನಾಟಕ49 mins ago

Actor Darshan: ನಟ ದರ್ಶನ್‌ ಇದ್ದ ಪ್ರಚಾರ ವಾಹನಕ್ಕೆ ವಿದ್ಯುತ್‌ ಸ್ಪರ್ಶ; ತಪ್ಪಿದ ಭಾರೀ ಅನಾಹುತ!

Boat Capsizes
ದೇಶ1 hour ago

Boat Capsizes: ದೋಣಿ ಮುಳುಗಿ ಇಬ್ಬರು ಜಲಸಮಾಧಿ; ಏಳು ಮಂದಿ ನಾಪತ್ತೆ

Chikkaballapur Lok Sabha Constituency NDA candidate Dr K Sudhakar election campaign
ಚಿಕ್ಕಬಳ್ಳಾಪುರ1 hour ago

Lok Sabha Election: ಯಲಹಂಕದಲ್ಲಿ ಡಾ.ಕೆ.ಸುಧಾಕರ್ ಗೆ 1 ಲಕ್ಷ ಮತಗಳ ಲೀಡ್ ಕೊಡಿಸುತ್ತೇನೆ: ಎಸ್ ಆರ್ ವಿಶ್ವನಾಥ್ ಪ್ರತಿಜ್ಞೆ

Chikkaballapur Lok Sabha Constituency Congress candidate Raksha Ramaiah election campaign in Yalahanka
ಬೆಂಗಳೂರು2 hours ago

Lok Sabha Election 2024: ಬಿಜೆಪಿ ಆಡಳಿತದಲ್ಲಿ ಶೇ. 5ರಷ್ಟೂ ಉದ್ಯೋಗ ಸೃಷ್ಟಿಯಾಗಿಲ್ಲ: ರಕ್ಷಾ ರಾಮಯ್ಯ

kaalnadige Jatha programme in Uttara kannada
ಉತ್ತರ ಕನ್ನಡ2 hours ago

Lok Sabha Election 2024: ಉ.ಕ ಜಿಲ್ಲೆಯಲ್ಲಿ ದಾಖಲೆ ಪ್ರಮಾಣದ ಮತದಾನದ ಗುರಿ; ಡಿಸಿ

Bangalore Rural Lok Sabha Constituency Congress candidate D K Suresh Election campaign
ಬೆಂಗಳೂರು ಗ್ರಾಮಾಂತರ2 hours ago

Lok Sabha Election 2024: ಗ್ಯಾರಂಟಿ ಯೋಜನೆಗಳು ಇಡೀ ದೇಶಕ್ಕೆ ಮಾದರಿ: ಡಿ.ಕೆ. ಸುರೇಶ್

Sharmitha Gowda in bikini
ಕಿರುತೆರೆ7 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ6 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ6 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ5 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ7 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ6 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ4 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ5 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Neha Murder Case
ಹುಬ್ಬಳ್ಳಿ8 hours ago

Neha Murder Case : ನೇಹಾ ಕೊಂದವನ ಎನ್‌ಕೌಂಟರ್ ಮಾಡಿ ಬಿಸಾಕಿ; ಮುದ್ದು ಮಗಳಿಗೆ ಪೋಷಕರ ಕಣ್ಣೀರ ವಿದಾಯ

Dina bhavishya
ಭವಿಷ್ಯ18 hours ago

Dina Bhavishya: ರಹಸ್ಯ ಕಾರ್ಯಗಳಿಂದ ಈ ರಾಶಿಯವರಿಗೆ ಇಂದು ಯಶಸ್ಸು ಗ್ಯಾರಂಟಿ

Dina Bhavishya
ಭವಿಷ್ಯ3 days ago

Dina Bhavishya : ಈ ಎರಡು ರಾಶಿಯವರು ಇಂದು ಹೂಡಿಕೆ ವ್ಯವಹಾರಕ್ಕೆ ತಲೆ ಹಾಕಲೇಬೇಡಿ

dina bhavishya
ಭವಿಷ್ಯ4 days ago

Dina Bhavishya : ಇವತ್ತು ಒಂದು ದಿನ ಈ ರಾಶಿಯವರು ಹೊಸ ಕೆಲಸಕ್ಕೆ ಕೈ ಹಾಕ್ಬೇಡಿ

HD Kumaraswamy apologised to womens for his statement and slams DK Shivakumar
Lok Sabha Election 20244 days ago

HD Kumaraswamy: ನನ್ನ ಹೇಳಿಕೆಯಿಂದ ನೋವಾಗಿದ್ದರೆ ವಿಷಾದಿಸುತ್ತೇನೆ; ಡಿಕೆಶಿ ವಿರುದ್ಧ ಹರಿಹಾಯ್ದ ಎಚ್‌ಡಿಕೆ

Dina Bhavishya
ಭವಿಷ್ಯ5 days ago

Dina Bhavishya : ಈ ರಾಶಿಯ ಉದ್ಯೋಗಿಗಳಿಗೆ ಕಾರ್ಯಸ್ಥಳದಲ್ಲಿ ಕಿರಿಕಿರಿ ಸಾಧ್ಯತೆ

Modi in Karnataka Modi roadshow in coastal area Mangalore Watch video
Lok Sabha Election 20245 days ago

Modi in Karnataka: ಕರಾವಳಿಯಲ್ಲಿ ಮೋದಿ ಮೋಡಿ; ಭರ್ಜರಿ ರೋಡ್‌ ಶೋ! ವಿಡಿಯೊ ನೋಡಿ

dina bhavishya
ಭವಿಷ್ಯ6 days ago

Dina Bhavishya: ಸತ್ಯ ಹೇಳಿದ್ರೆ ಈ ರಾಶಿಯವರಿಗೆ ಬಂಧುಗಳಿಂದ ಟೀಕೆಗಳು ಎದುರಾಗುತ್ತವೆ

Dina Bhavishya
ಭವಿಷ್ಯ7 days ago

Dina Bhavishya : ಹಣಕಾಸಿನ ವ್ಯವಹಾರಗಳಲ್ಲಿ ಈ ರಾಶಿಯವರಿಗೆ ಯಶಸ್ಸು ಕಟ್ಟಿಟ್ಟಬುತ್ತಿ

Rameshwaram Cafe Blast Fake IDs created and captured bombers hiding in Kolkata
ಕ್ರೈಂ1 week ago

Rameshwaram Cafe Blast: ನಕಲಿ ಐಡಿ ಸೃಷ್ಟಿಸಿ ಕೋಲ್ಕತ್ತಾದಲ್ಲಿ ಅಡಗಿದ್ದ ಬಾಂಬರ್‌ಗಳನ್ನು ಸೆರೆ ಹಿಡಿದಿದ್ದೇ ರೋಚಕ!

ಟ್ರೆಂಡಿಂಗ್‌