ಟ್ಯಾಕ್ಸ್ ಸೇವಿಂಗ್ ಮ್ಯೂಚುವಲ್ ಫಂಡ್ಸ್ (Tax saving mutual funds -ELSS) ಮೂಲಕ ಹೂಡಿಕೆದಾರರು ಸೆಕ್ಷನ್ 80 ಸಿ ಅಡಿಯಲ್ಲಿ ತೆರಿಗೆ ಉಳಿತಾಯ ಮಾಡಬಹುದು. ಈ ಯೋಜನೆಯಲ್ಲಿ ದೀರ್ಘಾವಧಿಗೆ ಉತ್ತಮ ಲಾಭ ಪಡೆಯಬಹುದು ಎಂದು ಬಹುಪಾಲು ಮಂದಿ ನಂಬಿದ್ದಾರೆ. ಹೀಗಿದ್ದರೂ ಎಎಲ್‌ಎಸ್‌ಎಲ್ ಫಂಡ್‌ಗಳಲ್ಲಿ ಹೂಡಿಕೆಯ ಮೂಲಕ ಹೇಗೆ ಕಡಿಮೆ ಅವಧಿಯಲ್ಲೂ ಲಾಭ ಮಾಡಬಹುದು ಎಂಬುದು ಬಹಳ ಮಂದಿಗೆ ಗೊತ್ತಿಲ್ಲ. ಒಬ್ಬ ಹೂಡಿಕೆದಾರ ಮೂರು ವರ್ಷಗಳ ಹಿಂದೆ 1 ಲಕ್ಷ ರೂ.ಗಳನ್ನು ಇಎಲ್‌ಎಸ್‌ಎಸ್ ಫಂಡ್‌ನಲ್ಲಿ ಹೂಡಿಕೆ ಮಾಡಿರುತ್ತಿದ್ದರೆ ಈಗ ಅವರ ಸಂಪತ್ತು ಸುಮಾರು 2 ಲಕ್ಷ ರೂ. ಆಗುತ್ತಿತ್ತು! ಆಶ್ಚರ್ಯವಾಗುತ್ತಿದೆಯೇ? ಕೆಳಕಂಡ ಉದಾಹರಣೆಗಳನ್ನು ಗಮನಿಸಿ.
ಕ್ವಾಂಟ್ ಟ್ಯಾಕ್ಸ್ ಪ್ಲಾನ್(Quant Tax Plan): ಕ್ವಾಂಟ್ ಟ್ಯಾಕ್ಸ್ ಪ್ಲಾನ್ ಹೂಡಿಕೆದಾರರ ಹಣವನ್ನು ಮೂರು ವರ್ಷಗಳಲ್ಲಿ 2.31 ಪಟ್ಟು ಹೆಚ್ಚಿಸಿದೆ. 32.26% CAGR ಲಭಿಸಿದೆ. ಸರಳವಾಗಿ ಹೇಳುವುದಿದ್ದರೆ, ಯಾರಾದರೂ 2020ರ ಆಗಸ್ಟ್ 24ರಂದು ಕ್ವಾಂಟ್ ಟ್ಯಾಕ್ಸ್ ಪ್ಲಾನ್ ಅಡಿಯಲ್ಲಿ 1.5 ಲಕ್ಷ ರೂ. ಹೂಡಿಕೆ ಮಾಡಿರುತ್ತಿದ್ದರೆ ಮೂರು ವರ್ಷಗಳಲ್ಲಿ 3.46 ಲಕ್ಷ ರೂ. ಬೆಳೆದಿರುತ್ತಿತ್ತು. ಬಂಧನ್ ಟ್ಯಾಕ್ಸ್ ಅಡ್ವಾಂಟೇಜ್ (ELSS) ಫಂಡ್ ಹೂಡಿಕೆದಾರರ ಹಣವನ್ನು 2.16 ಪಟ್ಟು ಹೆಚ್ಚಿಸಿದೆ. ಈ ಯೋಜನೆ 29.38% CAGR ನೀಡಿದೆ. CAGR ಎಂದರೆ Compound Annual Growth Rate) ಅಂದರೆ ನಿರ್ದಿಷ್ಟ ಅವಧಿಯಲ್ಲಿ, ಉದಾಹರಣೆಗೆ ಒಂದು ವರ್ಷದಲ್ಲಿ ನಿಮ್ಮ ಹೂಡಿಕೆಯ ಒಟ್ಟಾರೆ ಬೆಳವಣಿಗೆಯ ಪ್ರಮಾಣ.
ಮಿರಾಯ್ ಅಸೆಟ್ ಟ್ಯಾಕ್ಸ್ ಸೇವರ್ ಫಂಡ್ (Mirae Asset Tax Saver Fund) : ಇದು ಇಎಲ್‌ಎಸ್‌ಎಸ್ ಕೆಟಗರಿಯಲ್ಲಿ ಎರಡನೇ ಅತಿ ದೊಡ್ಡ ಯೋಜನೆಯಾಗಿದೆ. ಮೂರು ವರ್ಷಗಳಲ್ಲಿ ಹೂಡಿಕೆದಾರರ ಹೂಡಿಕೆಯಲ್ಲಿ 1.86 ಪಟ್ಟು ಏರಿಕೆಯಾಗಿದೆ. ಸ್ಕೀಮ್ 17,418 ಕೋಟಿ ರೂ. ಅಸೆಟ್ ಅನ್ನು ನಿರ್ವಹಿಸುತ್ತದೆ. ಎಸ್‌ಬಿಐ ಲಾಂಗ್ ಟರ್ಮ್ ಈಕವಿಟಿ ಫಂಡ್ 25.26% ಸಿಎಜಿಆರ್ ಅನ್ನು ಆಫರ್ ಮಾಡಿದೆ. 1.5 ಲಕ್ಷ ರೂ. ಹೂಡಿಕೆ 1.96 ಪಟ್ಟು ಅಂದರೆ 2.94 ಲಕ್ಷ ರೂ.ಗೆ ಬೆಳೆದಿರುತ್ತಿತ್ತು. ಸ್ಕೀಮ್ ಮಾರುಕಟ್ಟೆಯಲ್ಲಿ 30.42 ವರ್ಷಗಳನ್ನು ಪೂರೈಸಿದೆ.
ಪರಾಗ್ ಪಾರಿಖ್ ಟ್ಯಾಕ್ಸ್ ಸೇವರ್ ಫಂಡ್ (Parag Parikh Saver Fund) : ಮಾರುಕಟ್ಟೆಯಲ್ಲಿ 4 ವರ್ಷಗಳಿಂದ ಇರುವ ಪರಾಗ್ ಪಾರೀಖ್ ಟ್ಯಾಕ್ಸ್ ಸೇವರ್ ಫಂಡ್ 22.88% ಸಿಎಜಿಆರ್ ನೀಡಿದೆ. 1.5 ಲಕ್ಷ ರೂ.ಗಳನ್ನು ಮೂರು ವರ್ಷ ಹಿಂದೆ ಹೂಡಿದ್ದರೆ 2.78 ಲಕ್ಷ ರೂ. ಆಗಿರುತ್ತಿತ್ತು.
ಇಎಲ್‌ಎಸ್‌ಎಸ್ ಫಂಡ್ಸ್ : ಮೂರು ವರ್ಷಗಳ ಪರ್ಫಾರ್ಮೆನ್ಸ್
ಯೋಜನೆಯ ಹೆಸರು | ಸಿಎಜಿಆರ್ | ಎಷ್ಟು ಪಟ್ಟು ಹೆಚ್ಚಳ |
ಕ್ವಾಂಟ್ ಟ್ಯಾಕ್ಸ್ ಪ್ಲಾನ್ | 32.26% | 2.31 |
ಬಂಧನ್ ಟ್ಯಾಕ್ಸ್ ಅಡ್ವಾಂಟೇಜ್ ಫಂಡ್ | 29.38% | 2.16 |
ಫ್ರಾಂಕ್ಲಿನ್ ಇಂಡಿಯಾ ಟ್ಯಾಕ್ಸ್ ಶೀಲ್ಡ್ | 25.60% | 1.98 |
ಎಸ್‌ಬಿಐ ಲಾಂಗ್ ಟರ್ಮ್ ಈಕ್ವಿಟಿ ಫಂಡ್ | 25.26% | 1.96 |
ನಿಪ್ಪಾನ್ ಇಂಡಿಯಾ ಟ್ಯಾಕ್ಸ್ ಸೇವರ್ ಫಂಡ್ | 25.18% | 1.96 |
ಎಚ್‌ಡಿಎಫ್‌ಸಿ ಟ್ಯಾಕ್ಸ್ ಸೇವರ್ | 25.04% | 1.95 |
ಜೆಎಂ ಟ್ಯಾಕ್ಸ್ ಗೇನ್ ಫಂಡ್ | 24.68% | 1.94 |
ಮಹೀಂದ್ರಾ ಮಾನ್ಯುಲೈಫ್ ಇಎಲ್‌ಎಸ್‌ಎಸ್ ಫಂಡ್ | 24.47% | 1.93 |
ಕೋಟಕ್ ಟ್ಯಾಕ್ಸ್ ಸೇವರ್ ಫಂಡ್ | 23.96 % | 1.90 |