ಮುಂಬಯಿ: ಐಟಿ ದಿಗ್ಗಜ ಟಿಸಿಎಸ್ (ಟಾಟಾ ಕನ್ಸಲ್ಟೆನ್ಸಿ ಸರ್ವೀಸ್) ಕೋವಿಡ್ ಬಿಕ್ಕಟ್ಟಿನ ವೇಳೆ ಕಲ್ಪಿಸಿದ್ದ ವರ್ಕ್ ಫ್ರಮ್ ಹೋಮ್ ಪದ್ಧತಿಯನ್ನು ಅಂತ್ಯಗೊಳಿಸುತ್ತಿದೆ. (TCS) ಈ ವರ್ಷ ನವೆಂಬರ್ ೧೫ರೊಳಗೆ ಕಚೇರಿಗೆ ಹಾಜರಾಗುವಂತೆ ತನ್ನ ಉದ್ಯೋಗಿಗಳಿಗೆ ಸೂಚಿಸಿದೆ.
ನವೆಂಬರ್ ನಂತರ ವರ್ಕ್ ಫ್ರಮ್ ಹೋಮ್ ಪದ್ಧತಿಯನ್ನು ಮುಂದುವರಿಸದಿರಲು ಟಿಸಿಎಸ್ ನಿರ್ಧರಿಸಿದೆ. ಹೀಗಾಗಿ ಉದ್ಯೋಗಿಗಳು ಕಚೇರಿಗೆ ಬರಬೇಕಾಗಿದೆ. ಕಂಪನಿಯ ೭೦%ಕ್ಕೂ ಹೆಚ್ಚು ಉದ್ಯೋಗಿಗಳು ಸಂಪೂರ್ಣ ಕೋವಿಡ್ ಲಸಿಕೆ ಹಾಕಿಕೊಂಡಿದ್ದಾರೆ. ಸದ್ಯಕ್ಕೆ ೨೦-೨೫% ಸಿಬ್ಬಂದಿ ಕಚೇರಿಗೆ ಬರುತ್ತಿದ್ದಾರೆ.
ಟಿಸಿಎಸ್ ಇತ್ತೀಚೆಗೆ ತನ್ನ ೬ ಲಕ್ಷ ಉದ್ಯೋಗಿಗಳಿಗೂ ಏಪ್ರಿಲ್-ಜೂನ್ ಅವಧಿಯ ವೆರಿಯೆಬಲ್ ಪೇಯನ್ನು ಪೂರ್ಣವಾಗಿ ನೀಡುವುದಾಗಿ ಘೋಷಿಸಿತ್ತು. ವಿಪ್ರೊದಲ್ಲಿ ಹಿರಿಯ ಮತ್ತು ಮಧ್ಯಮ ಸ್ತರದ ಉದ್ಯೋಗಿಗಳಿಗೆ ವೆರಿಯೆಬಲ್ ಪೇ ವಿತರಣೆಯನ್ನು ತಡೆ ಹಿಡಿಯಲಾಗಿದೆ.
ದೇಶದ ನಂ.೧ ಐಟಿ ಕಂಪನಿಯಾದ ಟಿಸಿಎಸ್, ಮನೆಯಿಂದಲೇ ಕೆಲಸ ಮಾಡುವ ಅವಕಾಶವನ್ನು ಕೊನೆಗೊಳಿಸುತ್ತಿರುವುದು ಕಾರ್ಪೊರೇಟ್ ವಲಯದ ಗಮನ ಸೆಳೆದಿದೆ.
ಇದನ್ನೂ ಓದಿ: TCS | 100% ವೆರಿಯೆಬಲ್ ಪೇ ವಿತರಣೆ ಮಾಡುವುದಾಗಿ ಟಿಸಿಎಸ್ ಭರವಸೆ