Site icon Vistara News

EPF Accounts: ಇಪಿಎಫ್ ಖಾತೆಗಳ ಸ್ವಯಂಚಾಲಿತ ವರ್ಗಾವಣೆಗೂ ಇದೆ ಅವಕಾಶ; ಹೀಗೆ ಮಾಡಿ

EPF Accounts

ಬೆಂಗಳೂರು: ಉದ್ಯೋಗ ಬದಲಾವಣೆ (switching jobs) ಸಂದರ್ಭದಲ್ಲಿ ಹಣಕಾಸಿಗೆ (money) ಸಂಬಂಧಪಟ್ಟ ಸಾಕಷ್ಟು ಜಂಜಾಟಗಳಿಂದಾಗಿಯೇ ಹೆಚ್ಚಿನವರು ಉದ್ಯೋಗ ಬದಲಾಯಿಸಲು ಆಸಕ್ತಿ ತೋರಿಸುವುದಿಲ್ಲ. ಇದರಲ್ಲಿ ಉದ್ಯೋಗಿಗಳ ಭವಿಷ್ಯ ನಿಧಿಯೂ (EPF accounts) ಒಂದು. ಆದರೆ ಇನ್ನು ಉದ್ಯೋಗ ಬದಲಾವಣೆ ವೇಳೆ ಉದ್ಯೋಗಿಗಳ ಭವಿಷ್ಯ ನಿಧಿಯ ಬಗ್ಗೆ ಯಾವುದೇ ಚಿಂತೆ ಮಾಡಬೇಕಿಲ್ಲ. ಯಾಕೆಂದರೆ ಸ್ವಯಂಚಾಲಿತವಾಗಿ (Automatic Transfer ) ಉದ್ಯೋಗಿಗಳ ಭವಿಷ್ಯ ನಿಧಿಯನ್ನು ಒಂದು ಕಂಪನಿಯಿಂದ ಇನ್ನೊಂದು ಕಂಪನಿಗೆ ಬದಲಾಯಿಸಿಕೊಳ್ಳಬಹುದು.

ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆ (Employees’ Provident Fund Organisation-EPFO) ತನ್ನ ಸದಸ್ಯರಿಗೆ ಅನುಕೂಲವಾಗುವಂತೆ ಇಪಿಎಫ್ ಖಾತೆಗಳ ಸ್ವಯಂಚಾಲಿತ ವರ್ಗಾವಣೆ ಸೌಲಭ್ಯವನ್ನು ಪರಿಚಯಿಸಿದೆ. ಇದರಿಂದ ಉದ್ಯೋಗ ಬದಲಾದಾಗ ಇಪಿಎಫ್ ಖಾತೆಗಳ ಸ್ವಯಂಚಾಲಿತ ಒಂದು ಕಂಪನಿಯಿಂದ ಇನ್ನೊಂದು ಕಂಪನಿಗೆ ವರ್ಗಾವಣೆಗೊಳ್ಳುತ್ತದೆ. ಇಪಿಎಫ್ ಖಾತೆಗಳ ಸ್ವಯಂಚಾಲಿತ ವರ್ಗಾವಣೆಯು ಸಾಕಷ್ಟು ಪ್ರಯೋಜನಗಳೊಂದಿಗೆ ಹಲವು ವಿಶೇಷತೆಗಳನ್ನು ಹೊಂದಿದೆ. ಅವುಗಳ ಕುರಿತು ಕಿರು ಮಾಹಿತಿ ಇಲ್ಲಿದೆ.


ಸ್ವಯಂಚಾಲಿತ ವರ್ಗಾವಣೆ ಎಂದರೇನು?

ಇಪಿಎಫ್ ಖಾತೆಗಳ ಸ್ವಯಂಚಾಲಿತ ವರ್ಗಾವಣೆ ವಿಶೇಷವೆಂದರೆ ಅಸ್ತಿತ್ವದಲ್ಲಿರುವ ಇಪಿಎಫ್ ಸದಸ್ಯರು ತಮ್ಮ ಹಳೆಯ ಉದ್ಯೋಗದಾತರಿಂದ ಯಾವುದೇ ಆನ್‌ಲೈನ್ ಅಥವಾ ಆಫ್‌ಲೈನ್ ವಿನಂತಿಗಳ ಅಗತ್ಯವಿಲ್ಲದೇ ತಮ್ಮ ಪಿಎಫ್ ಬ್ಯಾಲೆನ್ಸ್‌ಗಳನ್ನು ಸರಿಪಡಿಸಲು ಉದ್ಯೋಗ ಬದಲಾದಾಗ ಅವಕಾಶ ನೀಡುತ್ತದೆ ಮತ್ತು ಇದು ತನ್ನಿಂತಾನೇ ಸಕ್ರಿಯಗೊಳ್ಳುತ್ತದೆ. ಇದರರ್ಥ ಇಪಿಎಫ್ ಖಾತೆ ವರ್ಗಾವಣೆ ಸ್ವಯಂಚಾಲಿತವಾಗಿ ನಡೆಯುತ್ತದೆ. ಇದರಿಂದ ಉದ್ಯೋಗಿಗಳಿಗೆ ಯಾವುದೇ ತೊಂದರೆಯಾಗುವುದಿಲ್ಲ.

ಯಾರು ಈ ಸೌಲಭ್ಯ ಪಡೆಯಬಹುದು ?

ಇಪಿಎಫ್ ಖಾತೆಗಳ ಸ್ವಯಂಚಾಲಿತ ವರ್ಗಾವಣೆ ಸೌಲಭ್ಯವು ಇಪಿಎಫ್ ಸದಸ್ಯರಿಗೆ ಮಾತ್ರ ಲಭ್ಯವಿರುತ್ತದೆ. ಇಪಿಎಫ್ ಖಾತೆಗಳು, ಹಳೆಯ ಮತ್ತು ಹೊಸ ಎರಡೂ ಇಪಿಎಫ್‌ಒನಿಂದ ನಿರ್ವಹಿಸಲ್ಪಡುತ್ತವೆ. ವಿನಾಯಿತಿ ಪಡೆದ ಪಿಎಫ್ ಟ್ರಸ್ಟ್‌ಗಳು ಈ ಸ್ವಯಂಚಾಲಿತ ವರ್ಗಾವಣೆ ಯೋಜನೆಯ ಅಡಿಯಲ್ಲಿ ಒಳಗೊಂಡಿರುವುದಿಲ್ಲ.


ಏನು ಮಾಡಬೇಕು ?

ಸ್ವಯಂಚಾಲಿತ ಇಪಿಎಫ್ ಖಾತೆ ವರ್ಗಾವಣೆಯನ್ನು ಸುಲಭಗೊಳಿಸಲು ಇಪಿಎಫ್‌ಒ ಸೂಚಿಸಿರುವ ಕೆಲವೊಂದು ಅವಶ್ಯಕತೆಗಳನ್ನು ಮಾಡಬೇಕಾಗುತ್ತದೆ. ಮುಖ್ಯವಾಗಿ ಹೊಸ ಉದ್ಯೋಗದಾತರು ಒದಗಿಸಿದ ಯುಎಎನ್ (UAN) ಮತ್ತು ಆಧಾರ್ ಸಂಖ್ಯೆಗಳು ಯುಎಎನ್ ನೊಂದಿಗೆ ಲಭ್ಯವಿರುವ ವಿವರಗಳಿಗೆ ಹೊಂದಿಕೆಯಾಗಬೇಕು. ಇಪಿಎಫ್ ಸದಸ್ಯರ ಆಧಾರ್ ಸಂಖ್ಯೆಯನ್ನು ಹಿಂದಿನ ಉದ್ಯೋಗ ಸ್ಥಳದಲ್ಲಿ ಯುಎಎನ್ ಗೆ ಲಿಂಕ್ ಮಾಡಬೇಕು ಮತ್ತು ಪರಿಶೀಲಿಸಬೇಕು. ಸೇರುವ ದಿನಾಂಕ, ನಿರ್ಗಮನ ದಿನಾಂಕ ಮತ್ತು ನಿರ್ಗಮನದ ಕಾರಣದಂತಹ ವಿವರಗಳು ಹಳೆಯ ಉದ್ಯೋಗದಾತರಿಂದ ಪಡೆದು ನೀಡಬೇಕು. ಇಪಿಎಫ್ ಸದಸ್ಯರ ಯುಎಎನ್ ಅನ್ನು ಸಕ್ರಿಯಗೊಳಿಸಬೇಕು ಮತ್ತು ಮೊಬೈಲ್ ಸಂಖ್ಯೆಯನ್ನುನೀಡಬೇಕು.

ಇಪಿಎಫ್ ಬಡ್ಡಿ ದರ ಹೆಚ್ಚಳ

ಇದನ್ನೂ ಓದಿ: Money Guide: ಹೋಮ್‌ ಲೋನ್‌ ಇಎಂಐ ಕಡಿಮೆ ಮಾಡಬೇಕೆ? ಚಿಂತೆ ಬಿಟ್ಟು ಈ ಟಿಪ್ಸ್‌ ಫಾಲೋ ಮಾಡಿ

Exit mobile version