Site icon Vistara News

EPF interest credit : ನಿಮ್ಮ ಪಾಸ್‌ಬುಕ್‌ ಅಪ್‌ಡೇಟ್‌ ಆಗದಿದ್ದರೆ ಪಿಎಫ್‌ ಹಣ ನಷ್ಟವಾಗುತ್ತದೆಯೇ?

epfo logo

EPFO news What is the benefit of EPFOs international recognition for your PFO account

ಉದ್ಯೋಗಿಗಳ ಭವಿಷ್ಯನಿಧಿ ಖಾತೆಯಲ್ಲಿ (Employees Provident Fund-EPF) ನಿಮ್ಮ ಪಾಸ್‌ಬುಕ್‌ ಪರಿಷ್ಕರಣೆ ಆಗದಿದ್ದರೆ ಪಿಎಫ್‌ ಹಣ ನಷ್ಟವಾದೀತೇ? ಈ ಪ್ರಶ್ನೆಗೆ ಆತಂಕ ಬೇಡ. ಈ ಕಾರಣಕ್ಕಾಗಿ ಯಾವುದೇ ಪಿಎಫ್‌ ಹಣ ನಷ್ಟವಾಗುವುದಿಲ್ಲ. ಲೋಕಸಭೆಯಲ್ಲಿ ಈ ಬಗ್ಗೆ ಕಾರ್ಮಿಕ ಸಚಿವ ರಾಮೇಶ್ವರ ತೇಲಿ ಅವರು ಲಿಖಿತ ಉತ್ತರ ನೀಡಿದ್ದಾರೆ.

ಇಪಿಎಫ್‌ಒ ಸದಸ್ಯರ ಪಾಸ್‌ಬುಕ್‌ ಅನ್ನು ಪರಿಷ್ಕರಣೆ ಮಾಡುವುದು ಕೇವಲ ಎಂಟ್ರಿ ಪ್ರಕ್ರಿಯೆ ಮಾತ್ರ. ಮಾಸಿಕ ಬ್ಯಾಲೆನ್ಸ್‌ ಮೊತ್ತವನ್ನು ಆಯಾ ವರ್ಷದ ಕ್ಲೋಸಿಂಗ್‌ ಬ್ಯಾಲೆನ್ಸ್‌ ಜತೆಗೆ ಸೇರಿಸಲಾಗುವುದು. ಆದ್ದರಿಂದ ಸದಸ್ಯರಿಗೆ ಯಾವುದೇ ರೀತಿಯಲ್ಲಿ ಪಿಎಫ್‌ ಹಣ ನಷ್ಟವಾಗುವುದಿಲ್ಲ ಎಂದು ವಿವರಿಸಿದರು.

ಇಪಿಎಫ್‌ ಬಡ್ಡಿ ಪಾವತಿಯಲ್ಲಿ ವಿಳಂಬ: ಉದ್ಯೋಗಿಗಳ ಭವಿಷ್ಯನಿಧಿ (Employees provident fund) ಸಂಸ್ಥೆಯು ತನ್ನ ಸದಸ್ಯತ್ವ ಪಡೆದಿರುವ 98% ಕಂಪನಿಗಳಿಗೆ 2023ರ ಮಾರ್ಚ್‌ 6 ತನಕದ ಇತ್ತೀಚಿನ ಬಡ್ಡಿ ದರವನ್ನು ಜಮೆ ಮಾಡಿದೆ ಎಂದು ಅವರು ತಿಳಿಸಿದ್ದಾರೆ. 2021-22ರ ಇಪಿಎಫ್‌ ಬಡ್ಡಿದರ (8.1%) ಜಮೆಯಾಗಿಲ್ಲ ಎಂದು ( EPF Interest Credit ) ಹಲವಾರು ಸದಸ್ಯರು ದೂರಿದ್ದರು.

ಬಡ್ಡಿ ದರ ವಿತರಣೆ ಪ್ರಕ್ರಿಯೆ ನಿಯಮಿತವಾಗಿ ನಡೆಯುತ್ತಿರುತ್ತದೆ. ಸಾಫ್ಟ್‌ವೇರ್‌ ವ್ಯವಸ್ಥೆ ಅಭಿವೃದ್ಧಿಯಾಗಿರುವುದರಿಂದ, ಬಡ್ಡಿ ಜಮೆ ಪ್ರಕ್ರಿಯೆ ಚುರುಕಾಗಿದ್ದು, 98% ಸದಸ್ಯತ್ವ ಕಂಪನಿಗಳಲ್ಲಿನ ಉದ್ಯೋಗಿಗಳ ಖಾತೆಗೆ ಬಡ್ಡಿ ಜಮೆಯಾಗಿದೆ ಎಂದು ಸಚಿವ ರಾಮೇಶ್ವರ್‌ ತೇಲಿ ಅವರು ಲೋಕಸಭೆಗೆ ತಿಳಿಸಿದ್ದಾರೆ. ಬಡ್ಡಿ ದರ ಜಮೆಯು ಸಮಗ್ರ ಪ್ರಕ್ರಿಯೆಯಾಗಿದ್ದು, ಪ್ರತಿ ಸದಸ್ಯರ ಖಾತೆಗಳ ವೈಯಕ್ತಿಕ ವರ್ಗಾವಣೆಗಳನ್ನು ಪರಿಶೀಲಿಸಬೇಕಾಗುತ್ತದೆ ಎಂದರು. 2021-22 ರಿಂದ ನೂತನ ಟಿಡಿಎಸ್‌ (ಮೂಲದಲ್ಲಿಯೇ ತೆರಿಗೆ ಕಡಿತ) ಪ್ರಕ್ರಿಯೆ ಆರಂಭವಾಗಿರುವುದರಿಂದ ಅಕೌಂಟಿಂಗ್‌ ಪ್ರಕ್ರಿಯೆಗಳು ಪರಿಷ್ಕರಣೆಯಾಗಿವೆ ಎಂದು ಅವರು ತಿಳಿಸಿದರು.

ಇಪಿಎಫ್‌ಒ ತನ್ನ ಸದಸ್ಯರ 3.6 ಕೋಟಿ ಕ್ಲೇಮ್‌ಗಳನ್ನು ಇತ್ತೀಚಿನ ಬಡ್ಡಿ ದರದೊಂದಿಗೆ ಪರಿಷ್ಕರಿಸಿ ಇತ್ಯರ್ಥಪಡಿಸಿದೆ ಎಂದು ತಿಳಿಸಿದರು. ಮಾರ್ಚ್‌ 27-28ರಂದು ಇಪಿಎಫ್‌ ಬೋರ್ಡ್‌ ಮೀಟಿಂಗ್‌ ನಡೆಯಲಿದೆ. ಈ ಸಭೆಯಲ್ಲಿ 2022-23ರ ಸಾಲಿನ ಇಪಿಎಫ್‌ಒ ಬಡ್ಡಿ ದರ ನಿಗದಿಯಾಗುವ ಸಾಧ್ಯತೆ ಇದೆ. 2021-22ರಲ್ಲಿ ಇಪಿಎಫ್ ಬಡ್ಡಿ ದರ 8.1% ಕ್ಕೆ ನಿಗದಿಯಾಗಿತ್ತು.

Exit mobile version