Site icon Vistara News

EPFO E-Passbook | ಸದಸ್ಯರಿಗೆ ಸಿಗದ ಇ-ಪಾಸ್‌ಬುಕ್‌, ಸಂಜೆ 5ರಿಂದ ತಾಂತ್ರಿಕ ಅಡಚಣೆ ಇತ್ಯರ್ಥ: ಇಪಿಎಫ್‌ಒ

epfo

ನವ ದೆಹಲಿ: ಇಪಿಎಫ್‌ಒ ವೆಬ್‌ಸೈಟ್‌ನಲ್ಲಿ ತಾಂತ್ರಿಕ ಅಡಚಣೆ ಹಿನ್ನೆಲೆಯಲ್ಲಿ ಸದಸ್ಯರಿಗೆ ಇ-ಪಾಸ್‌ಬುಕ್‌ (EPFO E-Passbook ) ತೆರೆಯಲು ಸಾಧ್ಯವಾಗದೆ ಪರದಾಡುವಂತಾಯಿತು. ಹೀಗಿದ್ದರೂ, ಸಂಜೆ 5 ಗಂಟೆಯ ವೇಳೆಗೆ ಸಮಸ್ಯೆ ಪರಿಹಾರವಾಗಲಿದೆ ಎಂದು ಇಪಿಎಫ್‌ಒ ತಿಳಿಸಿದೆ.

ವೆಬ್‌ಸೈಟ್‌ನಲ್ಲಿ ತಾತ್ಕಾಲಿಕವಾಗಿ ಅಡಚಣೆಯ ಪರಿಣಾಮ ಸದಸ್ಯರಿಗೆ ಇ-ಪಾಸ್‌ಬುಕ್‌ ತೆರೆಯಲು ತೊಂದರೆಯಾಗಿದ್ದಕ್ಕೆ ವಿಷಾದಿಸುತ್ತೇವೆ ಎಂದು ಇಪಿಎಫ್‌ಒ ತಿಳಿಸಿದೆ. ಉಮಾಂಗ್‌ ಆ್ಯಪ್‌ನಲ್ಲೂ ತಾಂತ್ರಿಕ ಅಡಚಣೆಯಾಗಿತ್ತು.

ಇಪಿಎಫ್‌ಒ ವೆಬ್‌ಸೈಟ್‌ನಲ್ಲಿ ಬುಧವಾರದಿಂದ ವೆಬ್‌ಸೈಟ್‌ನಲ್ಲಿ ತಾಂತ್ರಿಕ ಅಡಚಣೆ ಶುರುವಾಗಿತ್ತು. ಹಲವಾರು ಸದಸ್ಯರು ಈ ಬಗ್ಗೆ ದೂರಿದ್ದರು.

Exit mobile version