ನವ ದೆಹಲಿ: ಉದ್ಯೋಗಿಗಳ ಭವಿಷ್ಯನಿಧಿ ಸಂಘಟನೆ ಇಪಿಎಫ್‌ಒ (EPFO) ಕಳೆದ ಆಗಸ್ಟ್ 11ರಲ್ಲಿ 986,850 ಸದಸ್ಯರನ್ನು ಸೇರಿಸಿಕೊಂಡಿದೆ. ಜುಲೈಗೆ ಹೋಲಿಸಿದರೆ 11% ಇಳಿಕೆಯಾಗಿದೆ ಎಂದು ಸರ್ಕಾರ ಬಿಡುಗಡೆಗೊಳಿಸಿರುವ ಅಧಿಕೃತ ಅಂಕಿ ಅಂಶಗಳು ತಿಳಿಸಿವೆ.
2018ರ ಏಪ್ರಿಲ್‌ನಿಂದ ಸರ್ಕಾರ ಔಪಚಾರಿಕ ವಲಯದ ಉದ್ಯೋಗ ಪರಿಸ್ಥಿತಿ ಕುರಿತ ಅಂಕಿ ಅಂಶಗಳನ್ನು ಉದ್ಯೋಗಿಗಳ ಭವಿಷ್ಯನಿಧಿ ಸಂಸ್ಥೆ ಹಾಗೂ ರಾಜ್ಯ ವಿಮೆ ಯೋಜನೆ (ಇಎಸ್‌ಐ) ಮತ್ತು ರಾಷ್ಟ್ರೀಯ ಪಿಂಚಣಿ ಯೋಜನೆ (ಎನ್‌ಪಿಎಸ್) ವಿವರಗಳನ್ನು ಆಧರಿಸಿ ವರದಿಯನ್ನು ಪ್ರಕಟಿಸುತ್ತದೆ.
ಇಎಸ್‌ಐ ಅಡಿಯಲ್ಲಿ ಕಳೆದ ಆಗಸ್ಟ್‌ನಲ್ಲಿ 1,462,145 ಸದಸ್ಯರ ಸೇರ್ಪಡೆಯಾಗಿದೆ. 2017 ರ ಸೆಪ್ಟೆಂಬರ್‌ನಿಂದ 7,22,92,232 ಹೊಸ ಸದಸ್ಯರ ಸೇರ್ಪಡೆಯಾಗಿದೆ. ರಾಷ್ಟ್ರೀಯ ಪಿಂಚಣಿ ಯೋಜನೆಗೆ ಆಗಸ್ಟ್‌ನಲ್ಲಿ 37,85,101 ಸದಸ್ಯರು ಸೇರ್ಪಡೆಯಾಗಿದ್ದಾರೆ. 2022ರ ನವೆಂಬರ್ 25ಕ್ಕೆ ಬಿಡುಗಡೆಯಾಗಲಿದೆ.