Site icon Vistara News

EPFO | ಆಗಸ್ಟ್‌ನಲ್ಲಿ ನಿವ್ವಳ 16.94 ಲಕ್ಷ ಸದಸ್ಯರನ್ನು ಸೇರ್ಪಡೆಗೊಳಿಸಿದ ಇಪಿಎಫ್‌ಒ, 14.40% ಹೆಚ್ಚಳ

After RBI EPFO also blocks Paytm Payments Bank

ನವ ದೆಹಲಿ: ಉದ್ಯೋಗಿಗಳ ನಿವೃತ್ತಿ ನಿಧಿ ಮಂದಳಿ ಇಪಿಎಫ್‌ಒ ( Employees provident fund) ಕಳೆದ ಆಗಸ್ಟ್‌ನಲ್ಲಿ 16.94 ಲಕ್ಷ ಸದಸ್ಯರನ್ನು ಸೇರ್ಪಡೆಗೊಳಿಸಿದೆ ಎಂದು ಸಂಸ್ಥೆ ತಿಳಿಸಿದೆ. ಇದರಲ್ಲಿ 9.87 ಲಕ್ಷ ಮಂದಿ ಇದೇ ಮೊದಲ ಬಾರಿಗೆ ಇಪಿಎಫ್‌ಒಗೆ ಸೇರ್ಪಡೆಯಾಗಿದ್ದಾರೆ. (EPFO) ಅಂದಾಜು 58% ಮಂದಿ 18-25% ವಯಸ್ಸಿನವರಾಗಿದ್ದಾರೆ.

ಇಪಿಎಫ್‌ಒದ ವೇತನ ಕುರಿತ ಅಂಕಿ ಅಂಶಗಳ ಪ್ರಕಾರ 7.07 ಲಕ್ಷ ಮಂದಿ ನಿವ್ವಳ ಸದಸ್ಯರು ಇಪಿಎಫ್‌ಒ ಬಿಟ್ಟು ಮತ್ತೆ ಮರು ಸೇರ್ಪಡೆಯಾಗಿದ್ದಾರೆ. ಹಳೆಯ ಪಿಎಫ್‌ ಖಾತೆಯಿಂದ ಹಣ ವರ್ಗಾವಣೆಗೆ ಮನವಿ ಮಾಡಿದ್ದಾರೆ.

ಆಗಸ್ಟ್‌ನಲ್ಲಿ 3.63 ಲಕ್ಷ ಮಹಿಳೆಯರು ಇಪಿಎಫ್‌ಒ ಸದಸ್ಯರಾಗಿದ್ದಾರೆ. ರಾಜ್ಯಗಳ ಪೈಕಿ ಉತ್ತರಪ್ರದೇಶ, ಪಶ್ಚಿಮ ಬಂಗಾಳ, ಒಡಿಶಾ, ಜಾರ್ಖಂಡ್‌, ಬಿಹಾರದಲ್ಲಿ ಇಪಿಎಫ್‌ಗೆ ಸೇರ್ಪಡೆ ಹೆಚ್ಚಳವಾಗಿದೆ. ಮಹಾರಾಷ್ಟ್ರ, ಕರ್ನಾಟಕ, ತಮಿಳುನಾಡು, ಹರಿಯಾಣ, ಗುಜರಾತ್‌ ಮತ್ತು ದಿಲ್ಲಿ ಆಗಸ್ಟ್‌ನಲ್ಲೂ 11.25 ಲಕ್ಷ ನಿವ್ವಳ ಸೇರ್ಪಡೆಯೊಂದಿಗೆ ಮುಂಚೂಣಿಯಲ್ಲಿವೆ.

Exit mobile version