ನವ ದೆಹಲಿ : ಇಪಿಎಫ್‌ಒ ಉದ್ಯೋಗಿಗಳಿಗೆ ಬಿಡುಗಡೆಗೊಳಿಸಿರುವ ಮಾರ್ಗದರ್ಶಿಯಲ್ಲಿ 2014ರ ಸೆಪ್ಟೆಂಬರ್ 1 ಅಥವಾ ಬಳಿಕ ಹೆಚ್ಚಿನ ಪಿಂಚಣಿಯ ಆಯ್ಕೆಗೆ ಸೇರಿಕೊಳ್ಳದವರು 2023ರ ಮಾರ್ಚ್ 3ರೊಳಗೆ ಮತ್ತೊಮ್ಮೆ ಅವಕಾಶ ಪಡೆದುಕೊಳ್ಳಬಹುದು ಎಂದು ತಿಳಿಸಿದೆ. ಉದ್ಯೋಗಿಗಳು ಹಾಗೂ ಉದ್ಯೋಗದಾತರು ಜಂಟಿಯಾಗಿ ಈ ಕುರಿತ ಪ್ರಕ್ರಿಯೆಯನ್ನು ಪೂರ್ಣಗೊಳಿಸಬಹುದು.
ಈ ಹಿಂದೆ 2014ರ ಆಗಸ್ಟ್ 22ರಂದು ಉದ್ಯೋಗಿಗಳಿಗೆ ಪಿಂಚಣಿಗೆ ಅರ್ಹ ವೇತನದ ಮಿತಿಯನ್ನು ಮಾಸಿಕ 6,000 ರೂ.ಗಳಿಂದ 15,000 ರೂ.ಗೆ ಏರಿಸಲಾಗಿತ್ತು. ಹಾಗೂ ಈ ಮಿತಿ ಮೀರಿದವರಿಗೆ ಅವರ ವೇತನದ 8.33% ಅನ್ನು ಇಪಿಎಸ್‌ಗೆ ನೀಡಲು ಅನುಮತಿ ಕೊಡಲಾಗಿತ್ತು. ಇದನ್ನು ಪಡೆಯಲು Joint option form ಅನ್ನು ಬಿಡುಗಡೆಗೊಳಿಸಿದೆ.
ಸುಪ್ರೀಂಕೋರ್ಟ್ 2022ರ ನವೆಂಬರ್ 4ರಂದು ನೀಡಿದ ತೀರ್ಪಿನಲ್ಲಿ ಅರ್ಹ ಉದ್ಯೋಗಿಗಳು ಇಪಿಎಫ್ ಯೋಜನೆಯ ಅಡಿಯಲ್ಲಿ ಹೆಚ್ಚಿನ ಪಿಂಚಣಿಗೆ ಒಂದು ಬಾರಿಯ ಅವಕಾಶವಾಗಿ 2023ರ ಮಾರ್ಚ್ 3ರ ಒಳಗೆ ಆಯ್ಕೆ ಮಾಡಿಕೊಳ್ಳಬಹುದು ಎಂದಿತ್ತು.