Site icon Vistara News

EPFO news : ಇಪಿಎಫ್‌ಒಗೆ ಅಂತಾರಾಷ್ಟ್ರೀಯ ಮಾನ್ಯತೆ, ಇದರಿಂದ ನಿಮ್ಮ ಪಿಎಫ್‌ ಖಾತೆಗೆ ಲಾಭವೇನು?

epfo logo

EPFO news What is the benefit of EPFOs international recognition for your PFO account

ನವ ದೆಹಲಿ: ಉದ್ಯೋಗಿಗಳ ಭವಿಷ್ಯನಿಧಿ ಸಂಘಟನೆ ಇಪಿಎಫ್‌ಒ (Employees provident fund organisation) ಇದೀಗ ಇಂಟರ್‌ನ್ಯಾಶನಲ್‌ ಸೋಶಿಯಲ್‌ ಸೆಕ್ಯುರಿಟಿ ಅಸೋಸಿಯೇಶನ್‌ (International social security association-ISSA) ಮಾನ್ಯತೆ ಗಳಿಸಿದೆ. ಇದರಿಂದಾಗಿ ಶೀಘ್ರದಲ್ಲಿಯೇ ಪಿಂಚಣಿದಾರರಿಗೆ ಅಂತಾರಾಷ್ಟ್ರೀಯ ಮಟ್ಟದ ಪಿಂಚಣಿ ವೃತ್ತಿಪರರ ಜ್ಞಾನ, ಮಾರ್ಗದರ್ಶನ, ಸೇವೆ ಮತ್ತು ಬೆಂಬಲ ಸಿಗಲಿದೆ.

ಷೇರುಗಳಲ್ಲಿ ಹೂಡಿಕೆ ಹೆಚ್ಚಿಸಲು ಇಪಿಎಫ್‌ಒ ಚಿಂತನೆ ನಡೆಸುತ್ತಿದೆ ಎಂದು ವರದಿಯಾಗಿದೆ. ಈ ವರ್ಷ ಮಾರ್ಚ್‌ನಲ್ಲಿ ಇಪಿಎಫ್‌ಒ ಟ್ರಸ್ಟಿಗಳ ಮಂಡಳಿಯು ತನ್ನ ಈಕ್ವಿಟಿ ಹೂಡಿಕೆಯ ಮಿತಿಯನ್ನು ಏರಿಸಲು ಅನುಮತಿ ನೀಡಿತ್ತು. ಹಾಲಿ ನಿಯಮಗಳ ಪ್ರಕಾರ ಇಪಿಎಫ್‌ಒ ಈಕ್ವಿಟಿಗಳಲ್ಲಿ 5%-15% ಶ್ರೇಣಿಯಲ್ಲಿ ಹೂಡಿಕೆ ಮಾಡಬಹುದು. 2023ರ ಜನವರಿ ತನಕ ಇಪಿಎಫ್‌ಒ ಈಕ್ವಿಟಿಗಳಲ್ಲಿ 10% ತನಕ ಮಾತ್ರ ಹೂಡಿಕೆ ಮಾಡಿದೆ. ಗರಿಷ್ಠ ಮಿತಿಯಾದ 15% ತನಕ ಈ ವರ್ಷ ಈಕ್ವಿಟಿಗಳಲ್ಲಿ ಹೂಡಿಕೆ ಮಾಡುವ ನಿರೀಕ್ಷೆ ಇದೆ.

ಇಪಿಎಫ್‌ಒ 2015-16ರಲ್ಲಿ ಈಕ್ವಿಟಿಗಳಲ್ಲಿ 5%, 2016-17ರಲ್ಲಿ 10%, 2017-18ರಲ್ಲಿ 15% ಹೂಡಿಕೆ ಮಾಡಿತ್ತು. ಇಪಿಎಫ್‌ಒ ತನ್ನ ಒಟ್ಟು ಹೂಡಿಕೆಯಲ್ಲಿ 9.24% ಪಾಲನ್ನು ಈಕ್ವಿಟಿಗಳಲ್ಲಿ ಹೂಡಿಕೆ ಮಾಡಿದೆ.

ಕಳೆದ 2022-23ರಲ್ಲಿ ಇಪಿಎಫ್‌ಒ (EPFO) ಅಡಿಯಲ್ಲಿ ಫಾರ್ಮಲ್‌ ಸೆಕ್ಟರ್‌ ವಲಯದ ಉದ್ಯೋಗಿಗಳ ಸಂಖ್ಯೆ 13% ಹೆಚ್ಚಳವಾಗಿದೆ. ಅಂದರೆ 2022-23ರಲ್ಲಿ 1.39 ಕೋಟಿಗೆ ಏರಿಕೆಯಾಗಿದೆ. ಇದು 2021-22ರಲ್ಲಿ 1.22 ಕೋಟಿಯಷ್ಟಿತ್ತು. (Formal sector jobs) ಹೀಗಿದ್ದರೂ ಮಾಸಿಕ ಸರಾಸರಿ ಏರಿಕೆಯ ಹೋಲಿಕೆಯಲ್ಲಿ ನೋಡುವುದಿದ್ದರೆ 2022ರಲ್ಲಿ 15.3 ಲಕ್ಷ ಹಾಗೂ 2023ರ ಮಾರ್ಚ್‌ನಲ್ಲಿ 13.4 ಲಕ್ಷ ಮಂದಿ ಸೇರ್ಪಡೆಯಾಗಿದ್ದಾರೆ.

2023ರ ಮಾರ್ಚ್‌ನಲ್ಲಿ ಇಪಿಎಫ್‌ಒಗೆ ಸೇರ್ಪಡೆಯಾಗಿರುವ 13.4 ಲಕ್ಷ ಕಾರ್ಮಿಕರ ಪೈಕಿ ಸುಮಾರು 7.5 ಲಕ್ಷ ಮಂದಿ ಹೊಸ ಸದಸ್ಯರಾಗಿದ್ದಾರೆ. 2.3 ಲಕ್ಷ ಮಂದಿ 18-21 ವರ್ಷ ವಯೋಮಿತಿಯವರಾಗಿದ್ದಾರೆ. 1.9 ಲಕ್ಷ ಮಂದಿ 22-25 ವರ್ಷ ವಯೋಮಿತಿಯವರಾಗಿದ್ದಾರೆ.

ಮಾರ್ಚ್‌ನಲ್ಲಿ ಇಪಿಎಫ್‌ಒಗೆ ನಿವ್ವಳ ಸೇರ್ಪಡೆಯಾದವರಲ್ಲಿ 18-25 ವರ್ಷ ವಯೋಮಿತಿಯವರು 56.6% ರಷ್ಟಿದ್ದಾರೆ ಎಂದು ಕಾರ್ಮಿಕ ಸಚಿವಾಲಯದ ಅಂಕಿ ಅಂಶಗಳು ತಿಳಿಸಿವೆ. 10 ಲಕ್ಷ ಮಂದಿ ಇಪಿಎಫ್‌ಒಗೆ ಮರು ಸೇರ್ಪಡೆಯಾಗಿದ್ದಾರೆ.

ಉತ್ತರಾಖಂಡ್‌, ಉತ್ತರಪ್ರದೇಶ, ಹಿಮಾಚಲಪ್ರದೇಶ, ಜಮ್ಮು ಕಾಶ್ಮೀರ, ಮಿಜೋರಾಂ ಮತ್ತಿತರ ರಾಜ್ಯಗಳಲ್ಲಿ ಇಪಿಎಫ್‌ಒಗೆ ಸೇರ್ಪಡೆಯಾಗುತ್ತಿರುವವರ ಸಂಖ್ಯೆಯಲ್ಲಿ ಹೆಚ್ಚಳ ಕಂಡು ಬಂದಿದೆ. ಮಹಾರಾಷ್ಟ್ರ, ತಮಿಳುನಾಡು, ಕರ್ನಾಟಕ, ಹರಿಯಾಣ ಮತ್ತು ಗುಜರಾತ್‌ನಲ್ಲಿ ಅತಿ ಹೆಚ್ಚು ಮಂದಿ ಹೊಸತಾಗಿ ಇಪಿಎಫ್‌ಒಗೆ ಸೇರ್ಪಡೆಯಾಗಿದ್ದಾರೆ.

ಇದನ್ನೂ ಓದಿ: Moodys report : ಅಧಿಕ ಸಾಲದಿಂದ ಭಾರತದ ಆರ್ಥಿಕತೆಗೆ ಅಪಾಯ ಇದೆಯೆ? ಮೂಡೀಸ್‌ ಹೇಳಿದ್ದೇನು?

Exit mobile version