Site icon Vistara News

EPFO Pensioners | ಇಪಿಎಫ್‌ಒ ಪಿಂಚಣಿದಾರರಿಗೆ ಜೀವನ ಪ್ರಮಾಣಪತ್ರ ಸಲ್ಲಿಕೆ ಗಡುವಿನಲ್ಲಿ ವಿನಾಯಿತಿ

epfo

ಮುಂಬಯಿ: ಪಿಂಚಣಿದಾರರಿಗೆ ಜೀವನ ಪ್ರಮಾಣಪತ್ರ (Life certificate) ಸಲ್ಲಿಸಲು ನವೆಂಬರ್‌ 30 ಕೊನೆಯ ದಿನಾಂಕವಾಗಿದೆ. ಹೀಗಿದ್ದರೂ, ಇಪಿಎಫ್‌ಒದ ಉದ್ಯೋಗಿಗಳ ಪಿಂಚಣಿ ಯೋಜನೆ- 1995 (EPS) ಅಡಿಯಲ್ಲಿ ಪಿಂಚಣಿ ಸ್ವೀಕರಿಸುವವರಿಗೆ ಈ ಗಡುವು ಅನ್ವಯವಾಗುವುದಿಲ್ಲ.

ಈ ಸಂಬಂಧ ಇಪಿಎಫ್‌ಒ ಟ್ವೀಟ್‌ ಮಾಡಿದ್ದು, ಇಪಿಎಸ್-‌95 ಪಿಂಚಣಿದಾರರು ಕೊನೆಯದಾಗಿ ಪ್ರಮಾಣಪತ್ರ ಸಲ್ಲಿಸಿದ ಒಂದು ವರ್ಷದ ಅವಧಿ ಯಾವಾಗ ಮುಕ್ತಾಯವಾದರೂ, ನವೀಕರಿಸಿಕೊಳ್ಳಬಹುದು. ಅವಧಿ ಪೂರ್ಣವಾಗುವುದಕ್ಕೆ ಮುನ್ನ ಸಲ್ಲಿಸಿದರೆ ಸಾಕು. ನವೆಂಬರ್‌ 30ರ ಗಡುವು ಇರುವುದಿಲ್ಲ. ಉದಾಹರಣೆಗೆ ಕಳೆದ ವರ್ಷ ಡಿಸೆಂಬರ್‌ 1 ಕ್ಕೆ ಜೀವನ ಪ್ರಮಾಣಪತ್ರ ಸಲ್ಲಿಸಿದ್ದರೆ, ಈ ವರ್ಷ ಡಿಸೆಂಬರ್‌ 1ಕ್ಕೆ ಸಲ್ಲಿಸಿದರೆ ಸಾಕಾಗುತ್ತದೆ.

ನಿವೃತ್ತ ಉದ್ಯೋಗಿಗಳಿಗೆ ಜೀವನ ಪ್ರಮಾಣ ಪತ್ರ ಪಿಂಚಣಿ ಮುಂದುವರಿಕೆಗೆ ಸಂಬಂಧಿಸಿದಂತೆ ಪ್ರಮುಖ ದಾಖಲೆಯಾಗಿದೆ. ಇದನ್ನು ಡಿಜಿಟಲ್‌ ವಿಧಾನದಲ್ಲೂ ಸಲ್ಲಿಸಬಹುದು. ಕಾಮನ್‌ ಸರ್ವೀಸ್‌ ಸೆಂಟರ್‌, ಐಪಿಪಿಬಿ, ಸಮೀಪದ ಇಪಿಎಫ್‌ಒ ಕಚೇರಿಯಲ್ಲೂ ಸಲ್ಲಿಸಬಹುದು. ಈ ಪ್ರಮಾಣಪತ್ರ ಸಲ್ಲಿಸಲು ಆಧಾರ್‌ ಸಂಖ್ಯೆ, ಪಿಪಿಒ ಸಂಖ್ಯೆ, ಆಧಾರ್‌ ಜತೆ ಲಿಂಕ್‌ ಆಗಿರುವ ಮೊಬೈಲ್‌ ಸಂಖ್ಯೆ, ಬ್ಯಾಂಕ್‌ ಖಾತೆ ವಿವರ ಸಲ್ಲಿಸಬೇಕು.

Exit mobile version