ನವ ದೆಹಲಿ: ಉದ್ಯೋಗಿಗಳ ಭವಿಷ್ಯನಿಧಿ ಸಂಘಟನೆಯು (EPFO) ಆರೋಗ್ಯ, ಹೆರಿಗೆ, ಅಂಗ ವೈಕಲ್ಯಕ್ಕೆ ಸಂಬಂಧಿಸಿ ಪಿಂಚಣಿ ನೆರವು ನೀಡಲು ಚಿಂತನೆ ನಡೆಸಿದೆ.
ಇಪಿಎಫ್‌ಒ ಪ್ರಾಥಮಿಕ ಸಾಮಾಜಿಕ ಭದ್ರತೆಯನ್ನು ವಿಸ್ತರಿಸುವ ದೃಷ್ಟಿಯಿಂದ ಹೊಸ ಸೌಲಭ್ಯಗಳನ್ನು ನೀಡಲು ಪರಿಶೀಲಿಸುತ್ತಿದೆ.
ಬೇಸಿಕ್ ಸೋಶಿಯಲ್ ಪ್ರೊಟೆಕ್ಷನ್ ಫ್ಲೋರ್ ( Basic social protection floor-SPF) ಅನ್ನು ಒದಗಿಸಲು ಚಿಂತನೆ ನಡೆಸಿದೆ. ಈ ಯೋಜನೆಯ ಅಡಿಯಲ್ಲಿ ಆರೋಗ್ಯ, ಹೆರಿಗೆ, ಅಂಗವೈಕಲ್ಯಕ್ಕೆ ಸಂಬಂಧಿಸಿ ಪಿಂಚಣಿ ದೊರೆಯಲಿದೆ.ಈ ಹೊಸ ಯೋಜನೆಯು ಬಡತನ ನಿರ್ಮೂಲನೆಯ ಉದ್ದೇಶವನ್ನು ಹೊಂದಿದೆ. ಪ್ರಸ್ತಾಪಕ್ಕೆ ಸಂಬಂಧಿಸಿ ಪ್ರಾಥಮಿಕ ಹಂತದ ಚರ್ಚೆ ನಡೆಯುತ್ತಿದೆ ಎಂದು ವರದಿಯಾಗಿದೆ.
ಇಪಿಎಫ್‌ಒ 2021-22ರ ಅವಧಿಗೆ 8.10% ಬಡ್ಡಿ ದರ ನಿಗದಿಪಡಿಸಿದೆ. ೨೦೨೦-೨೧ರಲ್ಲಿ 8.5% ಬಡ್ಡಿ ದರ ನೀಡಲಾಗಿತ್ತು.