ನವ ದೆಹಲಿ: ಉದ್ಯೋಗಿಗಳ ಭವಿಷ್ಯನಿಧಿ ಸಂಘಟನೆ ಇಪಿಎಫ್‌ಒ (Employees’ Provident Fund Organisation) ಲ್ಯಾಟಿನ್ ಅಮೆರಿಕ ಮತ್ತು ಆಫ್ರಿಕಾದಲ್ಲಿ ತನ್ನ ಕನ್ಸಲ್ಟೆನ್ಸಿ ಕಚೇರಿ ಹಾಗೂ ಸೇವಾ ಕೇಂದ್ರಗಳನ್ನು ತೆರೆಯಲು ಉದ್ದೇಶಿಸಿದೆ. ಈ ಮೂಲಕ ದೇಶದ ಹೊರಗೆ ಕೂಡ ತನ್ನ ಹೆಜ್ಜೆ ಗುರುತು (ವಿಸ್ತಾರ PF Info) ಮೂಡಿಸಿ ವಿಸ್ತರಿಸಿಕೊಳ್ಳಲು ನಿರ್ಧರಿಸಿದೆ.
ಅಂತಾರಾಷ್ಟ್ರೀಯ ದರ್ಜೆಗೆ ಅನುಗುಣವಾಗಿ ಮುಂದಿನ ಎರಡೂವರೆ ದಶಕಗಳಲ್ಲಿ ಬೆಳೆಯಲು ಇಪಿಎಫ್‌ಒ ನೀಲನಕ್ಷೆ ತಯಾರಿಸುತ್ತಿದೆ. ಜಾಗತಿಕ ಮಟ್ಟದಲ್ಲಿ ಸಾಮಾಜಿಕ ಭದ್ರತೆಯನ್ನು ಒದಗಿಸಲು ಮುಂದಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇಪಿಎಫ್‌ಒ 2037ರ ವೇಳೆಗೆ ಏಷ್ಯಾ ಮತ್ತು ಪೆಸಿಫಿಕ್ ವಲಯದಲ್ಲಿ ಪ್ರಬಲ ಅಸ್ತಿತ್ವವನ್ನು ಹೊಂದಲಿದೆ. ಲ್ಯಾಟಿನ್ ಅಮೆರಿಕ ಮತ್ತು ಆಫ್ರಿಕಾದಲ್ಲಿ ಕಚೇರಿ, ಸೇವಾ ಕೇಂದ್ರಗಳನ್ನುತೆರೆಯಲಿದೆ. ಸಣ್ಣ ಪುಟ್ಟ ರಾಷ್ಟ್ರಗಳಲ್ಲಿ ಅಲ್ಲಿನ ನೌಕರರಿಗೆ ಸಾಮಾಜಿಕ ಭದ್ರತೆ ಒದಗಿಸಲಿ ಇಪಿಎಫ್‌ಒ ತನ್ನ ಸೇವೆಯನ್ನು ವಿಸ್ತರಿಸಲಿದೆ.
ಬ್ರೆಜಿಲ್, ಮೆಕ್ಸಿಕೊ, ಪೆರು, ಅರ್ಜೆಂಟಿನಾ, ಕೊಲಂಬಿಯಾ, ಬೊಲಿವಿಯಾ, ವೆನಿಜುವೆಲಾ, ಉರುಗ್ವೆ, ಚಿಲಿ, ಕೋಸ್ಟಾರಿಕಾ, ಈಕ್ವೆಡಾರ್, ಗ್‌ವಾಟೆಮಾಲಾ, ಪನಾಮಾ, ಕ್ಯೂಬಾ ಮೊದಲಾದ ದೇಶಗಳು ಲ್ಯಾಟಿನ್ ಅಮೆರಿಕ ವಲಯದಲ್ಲಿವೆ. ಆಫ್ರಿಕದಲ್ಲಿ 54 ದೇಶಗಳಿವೆ. ಕಾಂಗೊ, ಕೀನ್ಯಾ, ದಕ್ಷಿಣ ಆಫ್ರಿಕಾ, ಲಿಬಿಯಾ, ಅಲ್ಜೀರಿಯಾ, ಸುಡಾನ್, ಉಗಾಂಡಾ, ನಮೀಬಿಯಾ, ಜಿಂಬಾಬ್ವೆ ಮೊದಲಾದವುಗಳು ಆಫ್ರಿಕದ ದೇಶಗಳಾಗಿವೆ.
ಇದನ್ನೂ ಓದಿ:EPFO | ಉದ್ಯೋಗಿಗಳ ನಿವೃತ್ತಿಯ ವಯೋಮಿತಿ ಏರಿಸಲು ಇಪಿಎಫ್‌ಒ ಬೆಂಬಲ