ನವ ದೆಹಲಿ: ಉದ್ಯೋಗಿಗಳ ಭವಿಷ್ಯನಿಧಿ ಸಂಘಟನೆ ಇಪಿಎಫ್‌ಒ, ಪಿಂಚಣಿ ಹೆಚ್ಚಳಕ್ಕೆ ಸಂಬಂಧಿಸಿ (EPFO Guidelines ) ಅರ್ಹತೆ ಪಡೆಯಲು ಮಾರ್ಗದರ್ಶಿಯನ್ನು ನಿಡುಗಡೆಗೊಳಿಸಿದೆ.
ಸುಪ್ರೀಂಕೋರ್ಟ್ ಆದೇಶದ ಪ್ರಕಾರ ಚಂದಾದಾರರಿಗೆ ಹೆಚ್ಚಿನ ಪಿಂಚಣಿ ಸಿಗಲು ಅನುಕೂಲ ಕಲ್ಪಿಸಲಾಗಿದೆ ಎಂದು ಇಪಿಎಫ್‌ಒ ತಿಳಿಸಿದೆ.
2014ರ ಸೆಪ್ಟೆಂಬರ್ 1ರ ಬಳಿಕ ಇಪಿಎಸ್ ಸದಸ್ಯರಾದವರು ಪಿಂಚಣಿಗೆ ಅರ್ಹ ವೇತನ ಮಿತಿಯಾದ ಮಾಸಿಕ 15,00 ರೂ.ಗಳ ಬದಲು, ಆಕ್ಚುವಲ್ ವೇತನದ 8.33% ತನಕದ ಮೊತ್ತವನ್ನು ಪಿಂಚಣಿ ನಿಧಿಗೆ ನೀಡಬಹುದು. ಇದರ ಪರಿಣಾಮ ಉದ್ಯೋಗಿಗಳ ಪಿಂಚಣಿ ಹೆಚ್ಚಳಕ್ಕೆ ಅವಕಾಶ ಕಲ್ಪಿಸಿದಂತಾಗಿದೆ ಎಂದು ಇಪಿಎಫ್‌ಒ ತಿಳಿಸಿದೆ.
ಅರ್ಹ ಉದ್ಯೋಗಿಗಳು ಇಪಿಎಫ್‌ಒ ಪ್ರಾದೇಶಿಕ ಕಚೇರಿಗೆ ತೆರಳಿ ಪಿಂಚಣಿ ಹೆಚ್ಚಳಕ್ಕೆ ಅರ್ಜಿ ಸಲ್ಲಿಸಬಹುದು ಎಂದು ಇಪಿಎಫ್‌ಒ ತಿಳಿಸಿದೆ.