ನವ ದೆಹಲಿ: ಉದ್ಯೋಗಿಗಳ ಭವಿಷ್ಯನಿಧಿ ಇಪಿಎಫ್‌ಒ ಕೇಂದ್ರೀಕೃತ ಪಿಂಚಣಿ ವ್ಯವಸ್ಥೆ (Pension disbursal system) ಪ್ರಸ್ತಾಪಕ್ಕೆ ಅನುಮೋದಿಸಿದೆ. ಇದರಿಂದ ೭೩ ಲಕ್ಷಕ್ಕೂ ಹೆಚ್ಚು ಪಿಂಚಣಿದಾರರ ಬ್ಯಾಂಕ್ ಖಾತೆಗೆ ಒಂದೇ ಬಾರಿಗೆ ಪಿಂಚಣಿ ಜಮೆಯಾಗಲಿದೆ.
ಇದುವರೆಗೆ ಇಪಿಎಫ್‌ಒದ ೧೩೮ ಪ್ರಾದೇಶಿಕ ಕಚೇರಿಗಳ ಮೂಲಕ ಪಿಂಚಣಿದಾರರಿಗೆ ಪ್ರತ್ಯೇಕವಾಗಿ ಪಿಂಚಣಿ ವಿತರಣೆಯಾಗುತ್ತಿತ್ತು. ಹೀಗಾಗಿ ಬೇರೆ ಬೇರೆ ವಲಯದ ಪಿಂಚಣಿದಾರರು ಭಿನ್ನ ಸಮಯ ಅಥವಾ ದಿನಗಳಲ್ಲಿ ಪಿಂಚಣಿ ಪಡೆಯುತ್ತಿದ್ದರು.
ಜುಲೈ ೨೯ ಮತ್ತು ೩೦ರಂದು ನಡೆದ ಇಪಿಎಫ್‌ಒದ ಟ್ರಸ್ಟಿಗಳ ಕೇಂದ್ರೀಯ ಮಂಡಳಿಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ. ೨೦೨೧ರ ನವೆಂಬರ್ ೨೦ರಂದು ನಡೆದ ೨೨೯ನೇ ಸಿಬಿಟಿ ಸಭೆಯಲ್ಲಿ ಐಟಿ ತಂತ್ರಜ್ಞಾನ ಆಧಾರಿತ ಕೇಂದ್ರೀಕೃತ ಪಿಂಚಣಿ ವ್ಯವಸ್ಥೆ ರಚಿಸಲು ಪ್ರಸ್ತಾಪಿಸಲಾಗಿತ್ತು.