Site icon Vistara News

Equity Funds : ಅಗ್ರೆಸ್ಸಿವ್‌ ಹೂಡಿಕೆದಾರರಿಗೆ ಹೆಚ್ಚು ಲಾಭ ನೀಡುವ ಈಕ್ವಿಟಿ ಫಂಡ್ಸ್

Sensex falls

Sensex Opens 700 Points Lower Amid Worries Over US Inflation

ಷೇರು ಮಾರುಕಟ್ಟೆ ಸಂವೇದಿ ಸೂಚ್ಯಂಕಗಳು ಸಾರ್ವಕಾಲಿಕ ಎತ್ತರಕ್ಕೆ ಏರುತ್ತಿವೆ. ಈ ಸಂದರ್ಭದಲ್ಲಿ ಈಕ್ವಿಟಿ ಫಂಡ್‌ಗಳು ಹೂಡಿಕೆದಾರರಿಗೆ ಭಾರಿ ಲಾಭ ತಂದು ಕೊಡುತ್ತಿವೆ. ( Equity Funds) ಅಗ್ರೆಸ್ಸಿವ್‌ ಹೂಡಿಕೆದಾರರು 75% ಮೊತ್ತವನ್ನು ಈಕ್ವಿಟಿ ಫಂಡ್‌ಗಳಲ್ಲಿ ಹೂಡಿಕೆ ಮಾಡಿದರೆ ಲಾಭ ಗ್ಯಾರಂಟಿ ಎಂಬ ಪರಿಸ್ಥಿತಿ ಉಂಟಾಗಿದೆ ಎನ್ನುತ್ತಾರೆ ಹಣಕಾಸು ತಜ್ಞರು. ಎಲ್‌ಐಸಿ ಪೆನ್ಷನ್‌ ಫಂಡ್‌ ಕಳೆದ ಮೂರು ವರ್ಷಗಳಿಂದ ಬೆಸ್ಟ್‌ ಪರ್ಫಾಮರ್‌ ಎನ್ನಿಸಿದೆ. 23% ಆದಾಯವನ್ನು ಹೂಡಿಕೆದಾರರಿಗೆ ನೀಡಿದೆ.

2020ರಲ್ಲಿ ಕೋವಿಡ್‌ ಬಿಕ್ಕಟ್ಟಿನ ಬಳಿಕ ನಷ್ಟದಲ್ಲಿದ್ದ ಹೂಡಿಕೆದಾರರಿಗೆ ಈಗ ಭರ್ಜರಿ ಆದಾಯ ಸಿಗುತ್ತಿದೆ. ಸಿಪ್‌ ಹೂಡಿಕೆ ( SIP Investment) ಉತ್ತಮ ಆದಾಯವನ್ನು ನೀಡುತ್ತಿದೆ. ಕೋಟಕ್‌ ಪೆನ್ಷನ್‌ ಫಂಡ್‌ ಹೆಚ್ಚು ಸ್ಥಿರವಾಗಿದೆ. ಎಚ್‌ಡಿಎಫ್‌ಸಿ ಪೆನ್ಷನ್‌ ಫಂಡ್‌ ದೀರ್ಘಕಾಲೀನವಾಗಿ ಉತ್ತಮ ರಿಟರ್ನ್ಸ್‌ ನೀಡಿದೆ.

ಇಲ್ಲಿ ಗಮನಿಸಬೇಕಾದ ಸಂಗತಿಯೊಂದು ಇದೆ. ಕಳೆದ 10 ವರ್ಷಗಳಲ್ಲಿ ಏಳು ಪೆನ್ಷನ್‌ ಫಂಡ್‌ ಗಳಲ್ಲಿ ಲಭಿಸಿರುವ ಆದಾಯದಲ್ಲಿ ಹೆಚ್ಚಿನ ವ್ಯತ್ಯಾಸವಿಲ್ಲ. ಆದರೆ ಕಳೆದ ಮೂರು ವರ್ಷಗಳಲ್ಲಿ ಭಾರಿ ಆದಾಯ ಲಭಿಸಿದೆ. ಇದಕ್ಕೆ ಕಾರಣ ಪೆನ್ಷನ್‌ ಫಂಡ್‌ ಮ್ಯಾನೇಜರ್‌ಗಳಿಗೆ ನಿಯಮಗಳನ್ನು ಸಡಿಲಗೊಳಿಸಿರುವುದು. ರಿಲ್ಯಾಕ್ಸ್‌ ಮಾಡಿರುವುದು. ಇದರ ಪರಿಣಾಮ ಅವರಿಗೆ ಇಂಡೆಕ್ಸ್‌ ಹೊರತಾಗಿ ಸ್ಟಾಕ್ಸ್‌ ಮತ್ತು ಎಫ್‌ &ಒ ಬಾಸ್ಕೆಟ್‌ ನಲ್ಲೂ ಹೂಡಿಕೆ ಮಾಡಲು ಅವಕಾಶ ಲಭಿಸಿರುವಂಥದ್ದು. ಹೀಗಾಗಿ ಹೆಚ್ಚು ಆದಾಯ ನೀಡುತ್ತಿವೆ.

ಎಲ್ಲ ಎನ್‌ ಪಿಎಸ್‌ ಈಕ್ವಿಟಿ ಫಂಡ್‌ಗಳು ಲಾರ್ಜ್‌ ಕ್ಯಾಪ್‌ ಸೆಗ್‌ ಮೆಂಟ್‌ನಲ್ಲಿ 90% ಹೂಡಿಕೆಯನ್ನು ಮಾಡಿವೆ. ಮಿಡ್‌ ಕ್ಯಾಪ್‌ ವಲಯದಲ್ಲೂ ಹೂಡಿಕೆ ಮಾಡಲಾಗಿದೆ. ಏಕೆಂದರೆ ಅವುಗಳೀಗೂ ಉಜ್ವಲ ಭವಿಷ್ಯ ಇದೆ. ಮಿಡ್‌ ಕ್ಯಾಪ್‌ ವಲಯದಲ್ಲಿ ಕನಿಷ್ಠ 5000 ಕೋಟಿ ರೂ. ಮಾರುಕಟ್ಟೆ ಬಂಡವಾಳ ಮೌಲ್ಯದ ಕಂಪನಿಗಳು ಇರುತ್ತವೆ. ಯುವ ಹೂಡಿಕೆದಾರರಿಗೆ ಈಕ್ವಿಟಿ ಎಕ್ಸ್‌ ಪೋಷರ್‌ ಅನ್ನು ತೆರವುಗೊಳಿಸಲಾಗಿದೆ. ಹೀಗಾಗಿ ಯುವ ಹೂಡಿಕೆದಾರರು ಗರಿಷ್ಠ 75% ತನಕ ಈಕ್ವಿಟಿ ಫಂಡ್‌ಗಳಲ್ಲಿ ಹೂಡಿಕೆ ಮಾಡಬಹುದು ಎನ್ನುತ್ತಾರೆ ತಜ್ಞರು.

ಆದಿತ್ಯ ಬಿರ್ಲಾ ಸನ್‌ ಲೈಫ್‌ ಪೆನ್ಷನ್‌ ಸ್ಕೀಮ್‌ ಕಳೆದ ಮೂರು ವರ್ಷಗಳಲ್ಲಿ ಹೂಡಿಕೆದಾರರಿಗೆ 20.47% ವಾರ್ಷಿಕ ಆದಾಯ ನೀಡಿದೆ. 5 ವರ್ಷಗಳಲ್ಲಿ 11.71 % ಆದಾಯ ಕೊಟ್ಟಿದೆ. ಸಿಪ್‌ಗಳ ಮೂಲಕ 3 ವರ್ಷಗಳಲ್ಲಿ 11%, 5 ವರ್ಷಗಳಲ್ಲಿ 12.17% ಆದಾಯ ನೀಡಿದೆ. ಎಚ್‌ಡಿಎಫ್‌ಸಿ ಪೆನ್ಷನ್‌ ಫಂಡ್‌ ಮೂರು ವರ್ಷಗಳಲ್ಲಿ 21.59%, 5 ವರ್ಷಗಳಲ್ಲಿ 12.50% , 10 ವರ್ಷಗಳಲ್ಲಿ 15.09% ಆದಾಯ ಕೊಟ್ಟಿದೆ. ಸಿಪ್‌ ಮೂಲಕ ಮೂರು ವರ್ಷಗಳಲ್ಲಿ 10.95%, 5 ವರ್ಷಗಳಲ್ಲಿ 12.52% , 10 ವರ್ಷಗಳಲ್ಲಿ 10.73% ಆದಾಯ ನೀಡಿದೆ. ಐಸಿಐಸಿಐ ಪ್ರುಡೆನ್ಷಿಯಲ್‌ ಪೆನ್ಷನ್‌ ಫಂಡ್‌ 3 ವರ್ಷಗಳಲ್ಲಿ ಹೂಡಿಕೆದಾರರಿಗೆ 22.4% ಆದಾಯ ಕೊಟ್ಟಿದೆ. 5 ವರ್ಷಗಳಲ್ಲಿ 12.45% ಆದಾಯ ಕೊಟ್ಟಿದೆ. 10 ವರ್ಷಗಳಲ್ಲಿ 14.96% ಆದಾಯ ಕೊಟ್ಟಿದೆ.

ಇದನ್ನೂ ಓದಿ: Mutual funds : ಮ್ಯೂಚುವಲ್‌ ಫಂಡ್‌ ಹೂಡಿಕೆ ಬಳಿಕ ಷೇರುಗಳಲ್ಲಿ ಇನ್ವೆಸ್ಟ್‌ ಮಾಡುತ್ತೀರಾ?

ಕೋಟಕ್‌ ಪೆನ್ಷನ್‌ ಫಂಡ್‌ ಮೂರು ವರ್ಷಗಳ ಅವಧಿಯಲ್ಲಿ 22.47% ಆದಾಯ ಕೊಟ್ಟಿಎ. ಐದು ವರ್ಷಗಳ ಅವಧಿಗೆ 12.78%, 10 ವರ್ಷಗಳ ಅವಧಿಗೆ 14.96% ಆದಾಯ ಕೊಟ್ಟಿದೆ. ಮೂರು ವರ್ಷಗಳ ಸಿಪ್‌ 12.1%, 5 ವರ್ಷಗಳ ಸಿಪ್‌ 12.93%, 10 ವರ್ಷಗಳ ಸಿಪ್‌ 10.64% ಆದಾಯ ನೀಡಿದೆ.

Exit mobile version