Site icon Vistara News

Stock market | ಷೇರು ಪೇಟೆ ಮೇಲೆ ರಿಲಯನ್ಸ್‌ ಎಜಿಎಂ, ಜಿಡಿಪಿ ಅಂಕಿ ಅಂಶ ಪ್ರಭಾವ ನಿರೀಕ್ಷೆ

bse

ನವ ದೆಹಲಿ: ದೇಶಿ ಷೇರು ಮಾರುಕಟ್ಟೆಯ ಮೇಲೆ ರಿಲಯನ್ಸ್‌ ಇಂಡಸ್ಟ್ರೀಸ್‌ನ ವಾರ್ಷಿಕ ಸಭೆ (ಎಜಿಎಂ), ಪ್ರಸಕ್ತ ಸಾಲಿನ ಮೊದಲ ತ್ರೈಮಾಸಿಕದ (ಏಪ್ರಿಲ್-ಜೂನ್)‌ ತ್ರೈಮಾಸಿಕದ ಜಿಡಿಪಿ ಅಂಕಿ ಅಂಶಗಳು (Stock market) ಮುಂದಿನ ವಾರ ಪ್ರಭಾವ ಬೀರುವ ಸಾಧ್ಯತೆ ಇದೆ.

ಜಿಡಿಪಿ ಅಂಕಿ ಅಂಶ: ಭಾರತದ ಏಪ್ರಿಲ್-ಜೂನ್‌ ೨೦೨೨ರ ತ್ರೈಮಾಸಿಕ ಅಂಕಿ ಅಂಶಗಳನ್ನು ಹಣಕಾಸು ಸಚಿವಾಲಯವು ಬುಧವಾರ (ಅಕ್ಟೋಬರ್‌ ೩೧) ಪ್ರಕಟಿಸಲಿದೆ. ಈ ಅವಧಿಯಲ್ಲಿ ೧೫.೧%ರ ಜಿಡಿಪಿ ಬೆಳವಣಿಗೆಯನ್ನು ನಿರೀಕ್ಷಿಸಲಾಗಿದೆ. ಅನುಕೂಲಕರ ಬೇಸ್‌ ಎಫೆಕ್ಟ್‌, ಸೇವಾ ಕ್ಷೇತ್ರದಲ್ಲಿ ಬೆಳವಣಿಗೆ, ಕೋವಿಡ್‌ ನಿರ್ಬಂಧಗಳ ತೆರವಿನ ಪರಿಣಾಮ ಜಿಡಿಪಿ ಪ್ರಗತಿ ದಾಖಲಾಗಿರುವ ನಿರೀಕ್ಷೆ ಇದೆ. ೨೦೨೨-೨೩ರಲ್ಲಿ ಜಿಡಿಪಿ ೭.೪%ಕ್ಕೆ ಸುಧಾರಿಸುವ ಸಾಧ್ಯತೆ ಇದೆ.

ಜಾಕ್ಸನ್‌ ಹೋಲ್‌ ವಿಚಾರಸಂಕಿರಣ: ಅಮೆರಿಕದ ಫೆಡರಲ್‌ ರಿಸರ್ವ್‌ ಅಧ್ಯಕ್ಷ ಜೆರೋಮ್‌ ಪೊವೆಲ್‌ ಅವರು ಆರ್ಥಿಕತೆಯ ವಿದ್ಯಮಾನಗಳು ಮತ್ತು ಹಣಕಾಸು ನೀತಿಗಳ ಬಗ್ಗೆ ಮಾತನಾಡಲಿದ್ದು, ಭಾರಿ ಕುತೂಹಲ ಮೂಡಿಸಿದೆ. ಅವರ ಭಾಷಣ ಷೇರು ಮಾರುಕಟ್ಟೆ ಮೇಲೆ ಪ್ರಭಾವ ಬೀರುವ ಸಾಧ್ಯತೆ ಇದೆ.

ರಿಲಯನ್ಸ್‌ ಇಂಡಸ್ಟ್ರೀಸ್‌ ಎಜಿಎಂ: ರಿಲಯನ್ಸ್‌ ಇಂಡಸ್ಟ್ರೀಸ್‌ನ ೪೪ನೇ ವಾರ್ಷಿಕ ಪ್ರಧಾನ ಸಭೆ (ಎಜಿಎಂ) ಆಗಸ್ಟ್‌ ೨೯ರಂದು ನಡೆಯಲಿದ್ದು, ಮುಕೇಶ್‌ ಅಂಬಾನಿಯವರ ಭಾಷಣವನ್ನು ದಲಾಲ ಸ್ಟ್ರೀಟ್‌ನಲ್ಲಿ ಹೂಡಿಕೆದಾರರು ಆಲಿಸುವ ನಿರೀಕ್ಷೆ ಇದೆ. ಉಳಿದಂತೆ ಆಟೊಮೊಬೈಲ್‌ ಕಂಪನಿಗಳ ತ್ರೈಮಾಸಿಕ ಫಲಿತಾಂಶ, ವಿದೇಶಿ ಸಾಂಸ್ಥಿಕ ಹೂಡಿಕೆ (ಎಫ್‌ಐಐ) ಒಳ ಹರಿವು ಪ್ರಭಾವ ಬೀರುವ ನಿರೀಕ್ಷೆ ಇದೆ.

Exit mobile version