ನವ ದೆಹಲಿ: ಸಾಮಾಜಿಕ ಜಾಲತಾಣ ದಿಗ್ಗಜ ಫೇಸ್‌ಬುಕ್‌ನ ಮಾತೃಸಂಸ್ಥೆ ಮೆಟಾದ ಮಾರುಕಟ್ಟೆ ಮೌಲ್ಯದಲ್ಲಿ ಈ ವರ್ಷ 55 ಲಕ್ಷ ಕೋಟಿ ರೂ. ಕರಗಿದೆ. ಫೇಸ್‌ಬುಕ್ ಸ್ಥಾಪಕ ( Facebook) ಜುಕರ್ ಬರ್ಗ್ ಅವರಿಗೆ 90,200 ಕೋಟಿ ರೂ. ನಷ್ಟ ಉಂಟಾಗಿದೆ. ಅವರ ನಿವ್ವಳ ಸಂಪತ್ತು 36 ಶತಕೋಟಿ ಡಾಲರ್‌ಗೆ ಕುಸಿದಿದೆ. ( ೨.೯೫ ಲಕ್ಷ ಕೋಟಿ ರೂ.) ಕಂಪನಿಯ ಷೇರು ದರದಲ್ಲಿ 25% ಕುಸಿತಕ್ಕೀಡಾಗಿದೆ.
ಮಾರುಕಟ್ಟೆ ಮೌಲ್ಯದ ದೃಷ್ಟಿಯಿಂದ ಅಮೆರಿಕದ ಆರನೇ ಅತಿ ದೊಡ್ಡ ಕಂಪನಿಯಾಗಿರುವ ಮೆಟಾದ ಮಾರುಕಟ್ಟೆ ಮೌಲ್ಯದಲ್ಲಿ ಭಾರಿ ನಷ್ಟ ಸಂಭವಿಸಿದೆ. ಇದೀಗ ಅಮೆರಿಕದಲ್ಲಿ ಮಾರುಕಟ್ಟೆ ಮೌಲ್ಯದ ದೃಷ್ಟಿಯಿಂದ 26ನೇ ಸ್ಥಾನಕ್ಕೆ ಇಳಿಕೆಯಾಗಿದೆ.
ಫೋರ್ಬ್ಸ್ ಪಟ್ಟಿಯಲ್ಲಿ 3 ರಿಂದ 29ಕ್ಕೆ ಕುಸಿತ:
ಕಳೆದ ಫೆಬ್ರವರಿಯಲ್ಲಿ ಮೆಟಾದ ನಾಲ್ಕನೇ ತ್ರೈಮಾಸಿಕ ಫಲಿತಾಂಶ ಪ್ರಕಟವಾದ ಬಳಿಕ ಮಾರುಕಟ್ಟೆ ಮೌಲ್ಯದಲ್ಲಿ 30 ಶತಕೋಟಿ ಡಾಲರ್ (2 ಲಕ್ಷ ಕೋಟಿ ರೂ.) ನಷ್ಟ ಸಂಭವಿಸಿತ್ತು. ಜುಕರ್ ಬರ್ಗ್ ಈಗ ಫೋರ್ಬ್ಸ್ ಬಿಲಿಯನೇರ್‌ಗಳ ಪಟ್ಟಿಯಲ್ಲಿ 29ನೇ ಸ್ಥಾನಕ್ಕೆ ಇಳಿದಿದ್ದಾರೆ. 2020ರಲ್ಲಿ 102 ಶತಕೋಟಿ ಡಾಲರ್ (8.3 ಲಕ್ಷ ಕೋಟಿ ರೂ.) ಸಂಪತ್ತಿನೊಂದಿಗೆ 3ನೇ ಸ್ಥಾನದಲ್ಲಿದ್ದರು.