Site icon Vistara News

Fact Check | ಬ್ಯಾಂಕ್‌ಗಳಿಗೆ ನಾಳೆಯಿಂದ ಸತತ ಮೂರೇ ದಿನ ರಜೆ, ಆರಲ್ಲ

bank holiday

ಬೆಂಗಳೂರು: ಈ ಸಲದ ದೀಪಾವಳಿಯ ವೇಳೆ ಬ್ಯಾಂಕ್‌ಗಳಿಗೆ ನಿರಂತರವಾಗಿ 6 ದಿನಗಳ ಕಾಲ ರಜೆ ಇರುತ್ತದೆ ಎಂಬ ವದಂತಿಗಳು ಜಾಲತಾಣಗಳಲ್ಲಿ, ಕೆಲವು ವೆಬ್‌ ಪೋರ್ಟಲ್‌ಗಳಲ್ಲಿ ಹರಿದಾಡುತ್ತಿವೆ. ಆದರೆ ವಾಸ್ತವವೇನು? ( Fact Check ) ನಿಜಕ್ಕೂ ಬ್ಯಾಂಕ್‌ಗಳು ನಿರಂತರ ಆರು ದಿನ ಬಂದ್‌ ಆಗಿರಲಿವೆಯೇ? ಇಲ್ಲ.

ವಾಸ್ತವವಾಗಿ ಬ್ಯಾಂಕ್‌ಗಳಿಗೆ ನಿರಂತರ ಮೂರು ದಿನ ರಜೆ ಇರಲಿದೆ. ಬಳಿಕ ಒಂದು ದಿನ ಕೆಲಸದ ದಿನ ಹಾಗೂ ಬಳಿಕ ಮತ್ತೊಂದು ದಿನ ರಜೆ ಇರಲಿದೆ. ಹೀಗಾಗಿ ಗ್ರಾಹಕರು ಆತಂಕಕ್ಕೀಡಾಗುವ ಅವಶ್ಯಕತೆ ಇಲ್ಲ.

ರಾಜ್ಯದಲ್ಲಿ ದೀಪಾವಳಿ ಸಂದರ್ಭ ಬ್ಯಾಂಕ್ ರಜಾದಿನಗಳ ಪಟ್ಟಿ ಹೀಗಿದೆ:

ಅಕ್ಟೋಬರ್‌ 22: ನಾಲ್ಕನೇ ಶನಿವಾರ ಪ್ರಯುಕ್ತ ರಜಾ ದಿನ

ಅಕ್ಟೋಬರ್‌ 23: ಭಾನುವಾರ ರಜಾ ದಿನ

ಅಕ್ಟೋಬರ್‌ 24: ಸೋಮವಾರ ನರಕ ಚತುರ್ದಶಿ, ದೀಪಾವಳಿ ರಜಾ ದಿನ

ಅಕ್ಟೋಬರ್‌ 25: ಬ್ಯಾಂಕ್‌ಗಳು ಎಂದಿನಂತೆ ತೆರೆದಿರುತ್ತವೆ.

ಅಕ್ಟೋಬರ್‌ : 26: ಬಲಿಪಾಡ್ಯಮಿಗೆ ರಜಾ ದಿನ

ಹೀಗಿದ್ದರೂ, ಸಿಕ್ಕಿಂ, ಮಣಿಪುರ, ಉತ್ತರಪ್ರದೇಶದಲ್ಲಿ ಬ್ಯಾಂಕ್‌ಗಳು ಅಕ್ಟೋಬರ್‌ 24ರಂದು ರಜೆ ಇರುತ್ತದೆ. ಇದು ಉಳಿದ ಕಡೆ ಇರುವುದಿಲ್ಲ.

Exit mobile version