ನವ ದೆಹಲಿ: ಭಾರತದಲ್ಲಿ ಕಳೆದ ನವೆಂಬರ್‌ನಲ್ಲಿ ಕಾರ್ಖಾನೆಗಳಲ್ಲಿನ ಉತ್ಪಾದನೆ ಕಳೆದ ಮೂರು ತಿಂಗಳಿನಲ್ಲಿಯೇ ಗರಿಷ್ಠ ಮಟ್ಟಕ್ಕೆ (Factory activity) ಏರಿಕೆಯಾಗಿದೆ.
ಜಾಗತಿಕ ಆರ್ಥಿಕತೆಯ ಮಂದಗತಿಯ ಹೊರತಾಗಿಯೂ ದೇಶದಲ್ಲಿ ಕಾರ್ಖಾನೆಗಳಲ್ಲಿ ಉತ್ಪಾದನೆಯ ಚಟುವಟಿಕೆಗಳು ಸುಧಾರಿಸಿವೆ. ಹಣದುಬ್ಬರದ ಪ್ರಮಾಣ ಕಳೆದ ಎರಡು ವರ್ಷಗಳಲ್ಲಿಯೇ ಕೆಳಮಟ್ಟಕ್ಕೆ ಕುಸಿದಿರುವುದು ಇದಕ್ಕೆ ಕಾರಣ. ಉತ್ಪಾದನೆಗೆ ಅಗತ್ಯವಿರುವ ಕಚ್ಚಾ ವಸ್ತುಗಳ ದರದಲ್ಲಿ ಕೂಡ ಇಳಿಮುಖ ಕಂಡು ಬಂದಿದೆ.
ಎಸ್&ಪಿ ಗ್ಲೋಬಲ್‌ನ ಉತ್ಪಾದನಾ ಸೂಚ್ಯಂಕ (The Manufacturing Purchasing Managers Index) ನವೆಂಬರ್‌ನಲ್ಲಿ 55.7ಕ್ಕೆ ಏರಿಕೆಯಾಗಿತ್ತು. ಅಕ್ಟೋಬರ್‌ನಲ್ಲಿ 55.3 ಅಂಕಗಳ ಮಟ್ಟದಲ್ಲಿ ಇತ್ತು. ಸತತ 17 ತಿಂಗಳುಗಳಿಂದ ಸೂಚ್ಯಂಕ ಏರುಗತಿಯಲ್ಲಿದೆ.