Site icon Vistara News

Covaxin | ಕುಸಿದ ಬೇಡಿಕೆ, 20 ಕೋಟಿ ಕೋವಾಕ್ಸಿನ್‌ ಅವಧಿ ಮುಕ್ತಾಯ ನಿರೀಕ್ಷೆ

covaxin

ನವ ದೆಹಲಿ: ಕೋವಿಡ್‌ ವಿರುದ್ಧದ ಲಸಿಕೆಗಳಿಗೆ ಬೇಡಿಕೆ ಗಣನೀಯವಾಗಿ ಕುಸಿದಿದೆ. ಸಾಂಕ್ರಾಮಿಕ ರೋಗದ ತೀವ್ರತೆ ಉಪಶಮನವಾಗಿರುವುದನ್ನು ಇದು ಬಿಂಬಿಸಿದೆ. ಭಾರತ್‌ ಬಯೋಟೆಕ್‌ನ ಉತ್ಪಾದಕ ಕೋವಾಕ್ಸಿನ್‌ನ 20 ಕೋಟಿಗೂ ಹೆಚ್ಚಿನ ಲಸಿಕೆಗಳ (Covaxin) ಅವಧಿ ಮುಂದಿನ ವರ್ಷದ ಆರಂಭದಲ್ಲಿ ಮುಕ್ತಾಯವಾಗುವ ಸಾಧ್ಯತೆ ಇದೆ. ಕಂಪನಿ ಈ ವರ್ಷ ಕೋವಾಕ್ಸಿನ್‌ ಲಸಿಕೆ ಉತ್ಪಾದನೆಯನ್ನು ಸ್ಥಗಿತಗೊಳಿಸಿತ್ತು.

ಕೋವಾಕ್ಸಿನ್‌ ಮತ್ತು ಕೋವಿಶೀಲ್ಡ್‌ ಲಸಿಕೆ ಕೋವಿಡ್-‌19 ವಿರುದ್ಧ ರಕ್ಷಣೆ ಪಡೆಯಲು ಭಾರತದಲ್ಲಿ ವ್ಯಾಪಕವಾಗಿ ಬಳಕೆಯಾಗಿತ್ತು. ಬಹುತೇಕ ಭಾರತೀಯರು ಇದರ ಎರಡು ಡೋಸ್‌ಗಳನ್ನು ಪಡೆದಿದ್ದಾರೆ. ಹೀಗಾಗಿ ಅದಕ್ಕೆ ಬೇಡಿಕೆಯೂ ಕುಸಿದಿದೆ.

ಕೋವಿಡ್-‌19 ಹೊಸ ಪ್ರಕರಣಗಳ ಸಂಖ್ಯೆ ಕಡಿಮೆಯಾಗಿರುವುದರಿಂದ ಲಸಿಕೆಯ ಬೂಸ್ಟರ್‌ ಡೋಸ್‌ಗೆ ಬೇಡಿಕೆ ಕುಸಿದಿದೆ. ರಾಜ್ಯಗಳಲ್ಲಿ ಬಳಕೆಯಾಗದ ಲಸಿಕೆಗಳ ದಾಸ್ತಾನು ಇರುವುದರಿಂದ ರಾಜ್ಯಗಳೂ ಹೊಸತಾಗಿ ಲಸಿಕೆಗೆಳಿಗೆ ಬೇಡಿಕೆ ಸಲ್ಲಿಸಿಲ್ಲ.

Exit mobile version