ಮುಂಬಯಿ: ಕೋಟಕ್ ಮಹೀಂದ್ರಾ ಬ್ಯಾಂಕ್ ತನ್ನ ನಿಶ್ಚಿತ ಠೇವಣಿಗಳ ಬಡ್ಡಿ ದರದಲ್ಲಿ (FD interest) ೦.೨೫% ಏರಿಕೆ ಮಾಡಿದೆ.
೧ ವರ್ಷದಿಂದ ೩ ವರ್ಷ ಅವಧಿಗಳ ಹಾಗೂ ೨ ಕೋಟಿ ರೂ.ಗಿಂತ ಕಡಿಮೆ ಮೊತ್ತದ ಠೇವಣಿಗಳ ಮೇಲಿನ ಬಡ್ಡಿ ದರದಲ್ಲಿ ೦.೨೫% ತನಕ ಇಳಿಕೆ ಮಾಡಿದೆ. ಆಗಸ್ಟ್ ೧೭ರಿಂದ ದರ ಅನ್ವಯವಾಗಲಿದೆ.
೩೬೫ ದಿನಗಳಿಂದ ೩೮೯ ದಿನಗಳ ಎಫ್‌ಡಿಗೆ ಬಡ್ಡಿ ದರದಲ್ಲಿ ೦.೧೫% ಏರಿಕೆಯಾಗಿದ್ದು, ೫.೭೫%ಕ್ಕೆ ಏರಿಕೆಯಾಗಿದೆ. ೩೯೦ ದಿನಗಳಿಂದ ಮೂರು ವರ್ಷಗಳ ಅವಧಿಯ ಠೇವಣಿಗೆ ಬಡ್ಡಿ ದರವನ್ನು ೫.೭೫%ರಿಂದ ೫.೯೦%ಕ್ಕೆ ಏರಿಕೆಯಾಗಿದೆ. ೩ ವರ್ಷದಿಂದ ೧೦ ವರ್ಷದ ಅವಧಿಯ ಠೇವಣಿಗೆ ಬಡ್ಡಿ ದರವನ್ನು ೫.೯೦%ಕ್ಕೆ ಹೆಚ್ಚಿಸಲಾಗಿದೆ.
ಆರ್.ಡಿ ಬಡ್ಡಿ ದರ ಏರಿಕೆ: ಕೋಟಕ್ ಮಹೀಂದ್ರಾ ಬ್ಯಾಂಕ್ ರಿಕರಿಂಗ್ ಡೆಪಾಸಿಟ್ (ಆವರ್ತಿತ ಠೇವಣಿ) ಮೇಲಿನ ಬಡ್ಡಿ ದರದಲ್ಲಿ ೬ ತಿಂಗಳಿನ ಅವಧಿಗೆ ೦.೨೫% ಏರಿಕೆ ಮಾಡಿದೆ. ೬-೯ ತಿಂಗಳಿನ ಆರ್.ಡಿಗೆ ೫% ಬಡ್ಡಿ ಆದಾಯ ಸಿಗಲಿದೆ. ೧೨ ತಿಂಗಳಿನ ಅವಧಿಗೆ ಬಡ್ಡಿ ದರವನ್ನು ೫.೬೦%ಯಿಂದ ೫.೭೫%ಕ್ಕೆ ಏರಿಕೆಯಾಗಿದೆ.