Site icon Vistara News

GOOD NEWS| IDBI, DBS, ಕೆನರಾ ಬ್ಯಾಂಕ್‌ ಎಫ್ ಡಿ ಬಡ್ಡಿ ದರ ಏರಿಕೆ

fixed deposite

ನವ ದೆಹಲಿ: ‌ ಖಾಸಗಿ ವಲಯದ ಐಡಿಬಿಐ ಬ್ಯಾಂಕ್‌, ಡಿಬಿಎಸ್‌ ಬ್ಯಾಂಕ್ ತಮ್ಮ ನಿಶ್ಚಿತ ಠೇವಣಿಗಳ ಬಡ್ಡಿ ದರಗಳನ್ನು ಏರಿಸಿವೆ. ಸಾರ್ವಜನಿಕ ವಲಯದ ಕೆನರಾ ಬ್ಯಾಂಕ್‌ ಕೂಡ ಬಡ್ಡಿ ದರವನ್ನು ವೃದ್ಧಿಸಿದೆ. ಉಳಿತಾಯಗಾರರಿಗೆ ಇದರಿಂದ ಅನುಕೂಲವಾಗಲಿದೆ.

ಐಡಿಬಿಐ ಬ್ಯಾಂಕ್:‌ ಐಡಿಬಿಐ ಬ್ಯಾಂಕ್‌ ೨ ಕೋಟಿ ರೂ.ಗಿಂತ ಕಡಿಮೆ ಮೊತ್ತದ ನಿಶ್ಚಿತ ಠೇವಣಿಗೆ ಬಡ್ಡಿ ದರವನ್ನು ಏರಿಸಿದೆ. ೬ ತಿಂಗಳುಗಳಿಂದ ೨೭೦ ದಿನಗಳ ಅವಧಿಯ ಠೇವಣಿಗೆ ಬಡ್ಡಿ ದರವನ್ನು ೪.೫೦%ಕ್ಕೆ ಹೆಚ್ಚಿಸಲಾಗಿದೆ. ೧ ವರ್ಷದಿಂದ ೧ ವರ್ಷ ೬ ತಿಂಗಳಿನ ಫಿಕ್ಸೆಡ್‌ ಡಿಪಾಸಿಟ್‌ಗಳಿಗೆ ಬಡ್ಡಿ ದರವನ್ನು ೫.೩೫%ಕ್ಕೆ ಏರಿಸಲಾಗಿದೆ. ೩೦ ತಿಂಗಳಿನಿಂದ ೩ ವರ್ಷದ ತನಕದ ಠೇವಣಿಗೆ ೫.೫೦% ಬಡ್ಡಿ ದರ ನಿಗದಿಯಾಗಿದೆ.

ಡಿಬಿಎಸ್‌ ಬ್ಯಾಂಕ್‌ ಎಫ್‌ಡಿ ಬಡ್ಡಿ ದರ : ಡಿಬಿಎಸ್‌ ಬ್ಯಾಂಕ್‌ ಇಂಡಿಯಾ ೧೮೧ ದಿನಗಳಿಂದ ೨೬೯ ದಿನಗಳ ಅವಧಿಯ ಎಫ್‌ಡಿ ಬಡ್ಡಿ ದರವನ್ನು ೩.೨೫%ರಿಂದ ೪.೭೫%ಕ್ಕೆ ಏರಿಸಿದೆ. 376 ದಿನಗಳಿಂದ ೨ ವರ್ಷ ಅವಧಿಯ ಠೇವಣಿಗೆ ೫.೭೫% ಬಡ್ಡಿ ದರ ನಿಗದಿಯಾಗಿದೆ. ೩ರಿಂದ ೪ ವರ್ಷ ಅವಧಿಯ ಠೇವಣಿಗೆ ೬.೨೫% ಬಡ್ಡಿ ದರ ನಿಗದಿಯಾಗಿದೆ.

ಕೆನರಾ ಬ್ಯಾಂಕ್‌ ಎಫ್‌ಡಿ ಬಡ್ಡಿ ದರ: ಸಾರ್ವಜನಿಕ ವಲಯದ ಕೆನರಾ ಬ್ಯಾಂಕ್‌, ಎಫ್‌ಡಿ ಬಡ್ಡಿ ದರಗಳನ್ನು ಪರಿಷ್ಕರಿಸಿದೆ. ವಿವರ ಕೆಳಕಂಡಂತಿದೆ.

7ರಿಂದ 45 ದಿನ2.90%2.93%
46ರಿಂದ 90 ದಿನ4.004.06
91ರಿಂದ 179 ದಿನಗಳು4.054.11
180ರಿಂದ 269 ದಿನಗಳು4.504.58
270ರಿಂದ 1 ವರ್ಷ4.554.63
1 ವರ್ಷ5.105.20
1-2 ವರ್ಷಗಳು5.405.51
2-3 ವರ್ಷಗಳು5.455.56
3-5 ವರ್ಷಗಳು5.705.82
5 -10 ವರ್ಷ ಮೇಲ್ಪಟ್ಟು5.755.88

SBI ಗೃಹ ಸಾಲ ಬಡ್ಡಿ ದರ ಏರಿಕೆ: ಸಾರ್ವಜನಿಕ ವಲಯದ ಎಸ್‌ಬಿಐ, ಗೃಹ ಸಾಲಗಳ ಮೇಲಿನ ಕನಿಷ್ಠ ಬಡ್ಡಿ ದರವನ್ನು ಶೇ.೭.೫೫ಕ್ಕೆ ಏರಿಸಿದೆ. ಪರಿಷ್ಕೃತ ಬಡ್ಡಿ ದರ ೨೦೨೨ರ ಜೂನ್‌ ೧೫ರಿಂದ ಜಾರಿಯಾಗುತ್ತಿದೆ. ಕ್ರೆಡಿಟ್‌ ಸ್ಕೋರ್‌ ೮೦೦ ಅಥವಾ ಅದಕ್ಕಿಂತ ಹೆಚ್ಚು ಇದ್ದರೆ ೭.೫೫%ರ ಬಡ್ಡಿ ದರ ಇರಲಿದೆ. ಕ್ರೆಡಿಟ್‌ ಸ್ಕೋರ್‌ ೭೫೦-೭೯೯ ಆಗಿದ್ದರೆ ೭.೬೫%ರ ಬಡ್ಡಿ ದರ ಅನ್ವಯವಾಗಲಿದೆ.

Exit mobile version