ಉಳಿತಾಯ ಹೂಡಿಕೆಯ ಯೋಜನೆಗಳ ಪೈಕಿ ನಿಶ್ಚಿತ ದಾಯ ನೀಡುವ ಫಿಕ್ಸೆಡ್ ಡಿಪಾಸಿಟಿಟ್‌ಗಳು ಪ್ರಮುಖ. ಒಂದು ಕಡೆ ಬಂಡವಾಳದ ರಕ್ಷಣೆ ಮತ್ತೊಂದು ಕಡೆ ಸ್ಥಿರ ಆದಾಯವನ್ನು ನೀಡುತ್ತವೆ. (Fixed deposit ) 2023ರ ಜೂನ್‌ನಲ್ಲಿ ಹಲವಾರು ಬ್ಯಾಂಕ್‌ಗಳು ಫಿಕ್ಸೆಡ್ ಡಿಪಾಸಿಟ್ ಬಡ್ಡಿ ದರವನ್ನು ಪರಿಷ್ಕರಿಸಿವೆ. ಕೆಲವು ಪ್ರಮುಖ ಬ್ಯಾಂಕ್‌ಗಳಲ್ಲಿ ಬಡ್ಡಿ ದರ ಇಂತಿದೆ.
ಐಡಿಬಿಐ ಬ್ಯಾಂಕ್: ಐಡಿಬಿಐ ಬ್ಯಾಂಕ್‌ನಲ್ಲಿ 2 ಕೋಟಿ ರೂ. ತನಕದ ಫಿಕ್ಸೆಡ್ ಡಿಪಾಸಿಟ್‌ಗಳಿಗೆ ಬಡ್ಡಿ ದರವನ್ನು ಪರಿಷ್ಕರಿಸಲಾಗಿದೆ. 2023ರ ಜೂನ್ 14ರಿಂದ ಅನ್ವಯವಾಗುತ್ತದೆ. ಬ್ಯಾಂಕ್ ಈಗ ಸಾಮಾನ್ಯ ನಾಗರಿಕರಿಗೆ 2 ಕೋಟಿ ರೂ.ಗಿಂತ ಕೆಳಗಿನ ಠೇವಣಿಗೆ 3%ರಿಂದ 6.80% ತನಕ ಬಡ್ಡಿ ನೀಡುತ್ತದೆ. ಅಮೃತ ಮಹೋತ್ಸವ ಎಫ್‌ಡಿ ಸ್ಕೀಮ್‌ನಲ್ಲಿ 7.15% ಬಡ್ಡಿ ಕೊಡುತ್ತದೆ.
ಆರ್‌ಬಿಎಲ್ ಬ್ಯಾಂಕ್: ಆರ್‌ಬಿಎಲ್ ಬ್ಯಾಂಕ್ 2023ರ ಜೂನ್ 1ರಿಂದ ಅನ್ವಯವಾಗುವಂತೆ ಎಫ್‌ಡಿ ಬಡ್ಡಿ ದರವನ್ನು ಪರಿಷ್ಕರಿಸಿದೆ. 2 ಕೋಟಿ ರೂ.ಗಿಂತ ಕೆಳಗಿನ ಠೇವಣಿಗೆ 3.50%ರಿಂದ 7.80% ತನಕ ಬಡ್ಡಿ ದರ ಇರುತ್ತದೆ. 15 ತಿಂಗಳಿನಿಂದ 24 ತಿಂಗಳಿನ ಒಳಗಿನ ಎಫ್‌ಡಿಗೆ 7.80% ಬಡ್ಡಿ ಸಿಗುತ್ತದೆ.
ಯುನಿಟಿ ಸ್ಮಾಲ್ ಫೈನಾನ್ಸ್ ಬ್ಯಾಂಕ್ (SFB) : ಯುನಿಟಿ ಸ್ಮಾಲ್ ಫೈನಾನ್ಸ್ ಬ್ಯಾಂಕ್ 2 ಕೋಟಿ ರೂ.ಗಿಂತ ಕಡಿಮೆ ಬಡ್ಡಿ ದರದ ಠೇವಣಿಗೆ ಬಡ್ಡಿ ದರವನ್ನು ಪರಿಷ್ಕರಿಸಿದೆ. 2023ರ ಜೂನ್ 14ರಿಂದ ಜಾರಿಗೆ ಬಂದಿದೆ. 4.50%ರಿಂದ 9 % ತನಕ ಬಡ್ಡಿ ನೀಡುತ್ತದೆ. 1001 ದಿನಗಳ ಅವಧಿಯ ಎಫ್‌ಡಿಗೆ 9% ಬಡ್ಡಿ ಸಿಗುತ್ತದೆ.
ಪಂಜಾಬ್ ನ್ಯಾಷನಲ್ ಬ್ಯಾಂಕ್: ಪಂಜಾಬ್ ನ್ಯಾಷನಲ್ ಬ್ಯಾಂಕ್ ವೆಬ್‌ಸೈಟ್‌ನಲ್ಲಿ (Punjab National Bank) 2 ಕೋಟಿ ರೂ.ಗಿಂತ ಕಡಿಮೆ ಮೌಲ್ಯದ ಠೇವಣಿಗೆ ಬಡ್ಡಿ ದರವನ್ನು ಪರಿಷ್ಕರಿಸಲಾಗಿದೆ. ಸಾಮಾನ್ಯ ನಾಗರಿಕರಿಗೆ 3.50%ರಿಂದ 6.80% ತನಕ ಹಾಗೂ ಹಿರಿಯ ನಾಗರಿಕರಿಗೆ 4%ರಿಂದ 7.55% ತನಕ ಬಡ್ಡಿ ನೀಡುತ್ತದೆ. ಸೂಪರ್ ಸೀನಿಯರ್ ಸಿಟಿಜನ್ಸ್‌ಗೆ 4.30%ಯಿಂದ 8.5% ತನಕ ಬಡ್ಡಿ ಸಿಗುತ್ತದೆ.
ಇದನ್ನೂ ಓದಿ: Saving scheme : ಹಿರಿಯ ನಾಗರಿಕರಿಗೆ ಅತಿ ಹೆಚ್ಚು ಬಡ್ಡಿ ನೀಡುವ ಉಳಿತಾಯ ಯೋಜನೆ ಯಾವುದು?
ಉಜ್ಜೀವನ್ ಸ್ಮಾಲ್ ಫೈನಾನ್ಸ್ ಬ್ಯಾಂಕ್: ಉಜ್ಜೀವನ್ ಸ್ಮಾಲ್ ಫೈನಾನ್ಸ್ ಬ್ಯಾಂಕ್ 2023ರ ಜೂನ್ 1ರಿಂದ ಎಫ್‌ಡಿ ಬಡ್ಡಿ ದರಗಳನ್ನು ಪರಿಷ್ಕರಿಸಿದೆ. ನಿಶ್ಚಿತ ಬಡ್ಡಿ ದರಗಳ ಮೇಲೆ 3.75%ರಿಂದ 8.25% ತನಕ ಬಡ್ಡಿ ದರವನ್ನು ಬ್ಯಾಂಕ್ ನೀಡುತ್ತದೆ.
ಇಂಡಸ್‌ಇಂಡ್ ಬ್ಯಾಂಕ್ : ಇಂಡಸ್‌ಇಂಡ್ ಬ್ಯಾಂಕ್ 2 ಕೋಟಿ ರೂ.ಗಿಂತ ಕಡಿಮೆ ಮೌಲ್ಯದ ಎಫ್‌ಡಿಗಳಿಗೆ 2023ರ ಜೂನ್ 2ರಿಂದ ಅನ್ವಯಿಸುವಂತೆ ಬಡ್ಡಿ ದರಗಳನ್ನು ಪರಿಷ್ಕರಿಸಿದೆ. 3.50%ರಿಂದ 7.75% ತನಕ ಸಾಮಾನ್ಯ ನಾಗರಿಕರಿಗೆ ಇಂಟರೆಸ್ಟ್ ನೀಡುತ್ತದೆ. ಹಿರಿಯ ನಾಗರಿಕರಿಗೆ 4%ರಿಂದ 8.25% ತನಕ ಬಡ್ಡಿ ನೀಡುತ್ತದೆ.