ಮುಂಬಯಿ: ಅಮೆರಿಕದಲ್ಲಿ ಹೆಚ್ಚುತ್ತಿರುವ ಆರ್ಥಿಕ ಹಿಂಜರಿತದ ಭೀತಿ, ಚೀನಾದಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಮಂಗಳವಾರ ಮಧ್ಯಾಹ್ನ ಮುಂಬಯಿ ಷೇರು ಮಾರುಕಟ್ಟೆ ಸಂವೇದಿ ಸೂಚ್ಯಂಕ ಸೆನ್ಸೆಕ್ಸ್ 500 ಅಂಕಗಳಿಗೂ (Sensex crash) ಹೆಚ್ಚು ಕುಸಿಯಿತು.
ಮಧ್ಯಾಹ್ನ ಸೆನ್ಸೆಕ್ಸ್ 61,348ಕ್ಕೆ ವಹಿವಾಟು ನಡೆಸುತ್ತಿತ್ತು. ನಿಫ್ಟಿ 147 ಅಂಕ ಕಳೆದುಕೊಂಡು 18,273ಕ್ಕೆ ವಹಿವಾಟು ಮುಕ್ತಾಯಗೊಳಿಸಿತು.
ನಿಫ್ಟಿ 50 ಯಲ್ಲಿ ಅದಾನಿ ಎಂಟರ್‌ಪ್ರೈಸಸ್ ಮತ್ತು ಎಸ್‌ಬಿಐ ಹೊರತುಪಡಿಸಿ ಉಳಿದ ಷೇರುಗಳು ನಷ್ಟದಲ್ಲಿ ಇತ್ತು. ಆಟೊಮೊಬೈಲ್, ಎಫ್‌ಎಂಸಿಜಿ, ಐಟಿ, ಲೋಹದ ಷೇರು ದರ ಇಳಿಯಿತು. ಮಾರುತು, ಎಚ್‌ಸಿಎಲ್ ಟೆಕ್, ಏಷ್ಯನ್ ಪೇಂಟ್ಸ್ ಷೇರು ದರ ತಗ್ಗಿತು. ಅಮೆರಿಕದದಲ್ಲಿ ಮುಂದಿನ ವರ್ಷ ರಿಸೆಶನ್ ಉಂಟಾಗಬಹುದು ಎಂಬ ವರದಿಗಳು ಜಾಗತಿಕ ಷೇರು ಪೇಟೆಯನ್ನು ತಲ್ಲಣಗೊಳಿಸಿತು.