Site icon Vistara News

ಅಮೆರಿಕದಲ್ಲಿ ಫೆಡರಲ್‌ ರಿಸರ್ವ್‌ ಬಡ್ಡಿ ದರ 0.75% ಹೆಚ್ಚಳ, ಜಾಗತಿಕ ಆರ್ಥಿಕ ಹಿಂಜರಿತದ ಭೀತಿ

usfed

ವಾಷಿಂಗ್ಟನ್:‌ ಅಮೆರಿಕದಲ್ಲಿ ಫೆಡರಲ್‌ ರಿಸರ್ವ್‌ ತನ್ನ ಬಡ್ಡಿ ದರವನ್ನು 0.75% ಏರಿಸಿದ್ದು, ಕಳೆದ 28 ವರ್ಷಗಳಲ್ಲಿಯೇ ದೊಡ್ಡ ಪ್ರಮಾಣದ ಹೆಚ್ಚಳವಾಗಿದೆ.

1994ರಿಂದೀಚೆಗಿನ ಗರಿಷ್ಠ ಬಡ್ಡಿ ದರ ಇದಾಗಿದ್ದು, ಜಾಗತಿಕ ಅರ್ಥವ್ಯವಸ್ಥೆಯ ಮೇಲೆ ನಕಾರಾತ್ಮಕ ಪ್ರಭಾವ ಬೀರುವ ಸಾಧ್ಯತೆ ಇದೆ. ರಿಟೇಲ್‌ ಹಣದುಬ್ಬರ 8.6%ಕ್ಕೆ ಜಿಗಿದಿರುವ ಹಿನ್ನೆಲೆಯಲ್ಲಿ ಫೆಡರಲ್‌ ರಿಸರ್ವ್‌ ಅದನ್ನು ಹತ್ತಿಕ್ಕುವ ಉದ್ದೇಶದಿಂದ ಬಡ್ಡಿ ದರದಲ್ಲಿ ಗಣನೀಯ ಏರಿಕೆ ಮಾಡಿದೆ.

ಭಾರತದಲ್ಲಿ ಆರ್‌ಬಿಐ ಇರುವಂತೆ ಅಮೆರಿಕದಲ್ಲಿ ಫೆಡರಲ್‌ ರಿಸರ್ವ್‌ ಅಲ್ಲಿನ ಹಣಕಾಸು ನೀತಿಗಳನ್ನು ನಿರೂಪಿಸುತ್ತದೆ. ಆರ್‌ಬಿಐ ರೆಪೊ ದರ ಏರಿಸಿದಂತೆ ಫೆಡರಲ್‌ ರಿಸರ್ವ್‌ ತನ್ನ ಬಡ್ಡಿ ದರಗಳನ್ನು ಈಗ ಏರಿಸಿದೆ. ಇದರಿಂದ ಭಾರತ ಮೊದಲಾದ ಅಭಿವೃದ್ಧಿಶೀಲ ದೇಶಗಳ ಈಕ್ವಿಟಿ ಮಾರುಕಟ್ಟೆಗಳಿಂದ ವಿದೇಶಿ ಹೂಡಿಕೆದಾರರ ಹೂಡಿಕೆಯ ಹೊರಹರಿವು ಹೆಚ್ಚುವ ನಿರೀಕ್ಷೆ ಇದೆ.

ಅಮೆರಿಕದಲ್ಲಿ ಆರ್ಥಿಕ ಹಿಂಜರಿತ?

ಅಮೆರಿಕದ ಆರ್ಥಿಕತೆ ಕುಸಿಯುತ್ತಿರುವುದನ್ನು ಫೆಡರಲ್‌ ರಿಸರ್ವ್‌ ನೀತಿ ಬಿಂಬಿಸಿದೆ. ಇದು ಜಾಗತಿಕ ಆರ್ಥಿಕ ಹಿಂಜರಿತಕ್ಕೂ ಕಾರಣವಾಗಬಹುದು ಎಂದು ತಜ್ಞರು ಎಚ್ಚರಿಸಿದ್ದಾರೆ. ಯುರೋಪಿನಲ್ಲಿ ಅಲ್ಲಿನ ಸೆಂಟ್ರಲ್‌ ಬ್ಯಾಂಕ್‌ ಬಡ್ಡಿ ದರ ಏರಿಸುವುದಾಗಿ ತಿಳಿಸಿದೆ.

ಅಮೆರಿಕದಲ್ಲಿ ಕಳೆದ 40 ವರ್ಷದಲ್ಲೇ ಗರಿಷ್ಠ ಹಣದುಬ್ಬರ ಉಂಟಾಗಿದೆ. ಷೇರು ದರಗಳು ಕುಸಿಯುತ್ತಿವೆ. ಸಾಲ ದುಬಾರಿಯಾಗುತ್ತಿದೆ. ಈ ವರ್ಷ ಮೊದಲ ಮೂರು ತಿಂಗಳುಗಳಲ್ಲಿ ಆರ್ಥಿಕತೆ ವಾಸ್ತವವಾಗಿ ಕುಸಿದಿದೆ. ಹೀಗಾಗಿ ಎರಡು ವರ್ಷಗಳ ಬಳಿಕ ಮತ್ತೊಮ್ಮೆ ಎಕಾನಮಿ ಹಿಂಜರಿತದ ಅಪಾಯ ಉಂಟಾಗಿದೆ.

Exit mobile version