ಮುಂಬಯಿ: ಚಿಲ್ಲರೆ ಹಣದುಬ್ಬರ ( Inflation) ಅಥವಾ ಬೆಲೆ ಏರಿಕೆ ವಿರುದ್ಧ ಭಾರತ ನಡೆಸುತ್ತಿರುವ ಹೋರಾಟ ಸುದೀರ್ಘಾವಧಿಯನ್ನು ತೆಗೆದುಕೊಳ್ಳಬಹುದು ಎಂದು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಹೇಳಿದೆ.
ಚಿಲ್ಲರೆ ಹಣದುಬ್ಬರವು ಕಳೆದ ಸೆಪ್ಟೆಂಬರ್‌ನಲ್ಲಿ 7.4%ಕ್ಕೆ ಏರಿಕೆಯಾಗಿತ್ತು. ಆಗಸ್ಟ್‌ನಲ್ಲಿ 7.0% ಇತ್ತು. ಆಹಾರ ಹಣದುಬ್ಬರ ಕೂಡ ಸೆಪ್ಟೆಂಬರ್‌ನಲ್ಲಿ 8.4% ಕ್ಕೆ ವೃದ್ಧಿಸಿತ್ತು. ಹೀಗಿದ್ದರೂ, ಒಟ್ಟಾರೆ ಹಣದುಬ್ಬರ ಇಳಿಕೆಯಾಗುವ ಸಾಧ್ಯತೆ ಇದೆ ಎಂದು ಆರ್‌ಬಿಐ ವರದಿ ತಿಳಿಸಿದೆ.
ಸತತ 9 ತಿಂಗಳಿನಿಂದ ರಿಟೇಲ್ ಹಣದುಬ್ಬರವು ಆರ್‌ಬಿಐನ ಸುರಕ್ಷತಾ ಮಟ್ಟವನ್ನು ಮೀರಿದೆ. ಹೀಗಿದ್ದರೂ, ಆರ್ಥಿಕತೆಯ ಮೂಲಭೂತ ಅಂಶಗಳು ಹಾಗೂ ಇತ್ತೀಚಿನ ವರ್ಷಗಳಲ್ಲಿ ವಿದೇಶಿ ವಿನಿಮಯ ಸಂಗ್ರಹದ ಹೆಚ್ಚಳದ ಪರಿಣಾಮ ಹಣದುಬ್ಬರದ ಸಮಸ್ಯೆಯನ್ನು ಎದುರಿಸಲು ಸಹಾಯಕವಾಗಿದೆ ಎಂದು ವರದಿ ತಿಳಿಸಿದೆ. ಭಾರತದ ವಿದೇಶಿ ವಿನಿಮಯ ಸಂಗ್ರಹ ಸೆಪ್ಟೆಂಬರ್ 23ಕ್ಕೆ 537 ಶತಕೋಟಿ ಡಾಲರ್ ನಷ್ಟಿತ್ತು ( 43.49 ಲಕ್ಷ ಕೋಟಿ ರೂ.)